Mehidy Hasan: ಆಸ್ಟ್ರೇಲಿಯಾ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ಮೆಹೆದಿ ಹಸನ್! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews

ಮೆಹೆದಿ ಹಸನ್​


Last Updated:


ಬಾಂಗ್ಲಾದೇಶಿ ಆಲ್‌ರೌಂಡರ್ ಮೊದಲ ಇನ್ನಿಂಗ್ಸ್‌ನಲ್ಲಿ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 154 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿ 66 ರನ್‌ ನೀಡಿ 5 ವಿಕೆಟ್‌ಗಳನ್ನು ಪಡೆದರು.

ಮೆಹೆದಿ ಹಸನ್​
ಮೆಹೆದಿ ಹಸನ್​

ಡಾರ್ವಿನ್‌ನಲ್ಲಿ ಆಸ್ಟ್ರೇಲಿಯಾವನ್ನು (Australia) ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡ (Bangladesh) ಟೆಸ್ಟ್ ಕ್ರಿಕೆಟ್ ಇತಿಹಾಸವನ್ನು ಸೃಷ್ಟಿಸಿತು. ಆದರೆ ಈ ಐತಿಹಾಸಿಕ ಗೆಲುವಿನ ನಡುವೆ, ತಂಡದ ಸ್ಟಾರ್ ಆಲ್​ರೌಂಡರ್ ಮೆಹಿದಿ ಹಸನ್ (Mehedy Hasan) ಮಿರಾಜ್ ಕೂಡ ತಮ್ಮ ಹೆಸರಿನಲ್ಲಿ ಒಂದು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಬ್ಯಾಟಿಂಗ್‌ ವೇಳೆ ಅರ್ಧಶತಕ ಗಳಿಸಿ ನಂತರ ಬೌಲಿಂಗ್​​ನಲ್ಲಿ ಮಿಂಚಿ 5 ವಿಕೆಟ್ ಪಡೆಯುವ ಮೂಲಕ ಆಸೀಸ್​​ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯಾ ಕ್ರಿಕೆಟರ್ ಎಂದು ದಾಖಲೆ ನಿರ್ಮಿಸಿದ್ದಾರೆ. ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ದಂತಹ ಬಲಿಷ್ಠ ತಂಡಗಳ ಲೆಜೆಂಡರಿ ಕ್ರಿಕೆಟರ್ಸ್ ಮಾಡದ ಸಾಧನೆ ಮೆಹೆದಿ ಪಾಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports