Last Updated:
ಎಸ್.ಎಸ್. ರಾಜಮೌಳಿ (S.S. Rajamouli) ನಿರ್ದೇಶನದ ಬಹುನಿರೀಕ್ಷಿತ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ನಿರ್ವಹಿಸುತ್ತಿರುವ ರುದ್ರ ಪಾತ್ರದ ಫಸ್ಟ್ ಲುಕ್ನ್ನು ಚಿತ್ರತಂಡ ಅನಾವರಣಗೊಳಿಸಿದೆ.
ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು (Mahesh Babu) ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಎಸ್.ಎಸ್. ರಾಜಮೌಳಿ (S.S. Rajamouli) ನಿರ್ದೇಶನದ ಬಹುನಿರೀಕ್ಷಿತ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ನಿರ್ವಹಿಸುತ್ತಿರುವ ರುದ್ರ ಪಾತ್ರದ ಫಸ್ಟ್ ಲುಕ್ನ್ನು ಚಿತ್ರತಂಡ ಅನಾವರಣಗೊಳಿಸಿದೆ. ಮಹೇಶ್ ಬಾಬು ಅವರ ಬರ್ತ್ಡೇ ಸ್ಪೆಷಲ್ ಆಗಿ ಬಿಡುಗಡೆಯಾದ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.














