Last Updated:
ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುಘರ್ಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.
ಮಹಾರಾಷ್ಟ್ರದಲ್ಲಿ (Maharashtra) ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ರಪತಿ ಸಂಭಾಜಿನಗರದಲ್ಲಿರುವ ಪ್ರಸಿದ್ಧ ಖವಡ್ಯಾ ಗುಡ್ಡದಿಂದ (Khawadya Pahad) ಬಿದ್ದು ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಮೊಬೈಲ್ (Mobile) ವಿಚಾರಕ್ಕೆ ಶುರುವಾದ ಜಗಳ, ಇಂದು ಮೂವರ ಜೀವವನ್ನೇ ಬಲಿಪಡೆದಿದೆ. ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುರ್ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದ್ದು, ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.














