Last Updated:
ಮಹಾಕವಿ ಪಂಪನ ಸಿನಿಮಾ ರೆಡಿ ಆಗಿದೆ. ಕಾಂತಾರ ಕಿಶೋರ್ ಈ ಚಿತ್ರದಲ್ಲಿ ಮಹಾಕವಿ ಪಂಪನ ಪಾತ್ರ ಮಾಡಿದ್ದಾರೆ. ಹೊಸ ವಿಷಯ ಏನಂದ್ರೆ ಈ ಚಿತ್ರ ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಕಾಂತಾರ ಚಿತ್ರ (Kantara Movie) ಖ್ಯಾತಿಯ ನಟ ಕಿಶೋರ್ (Kishore) ಈಗೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಡೈರೆಕ್ಟರ್ ಬರಗೂರು ರಾಮಚಂದ್ರಪ್ಪನವರು ಮಹಾಕವಿ ಪಂಪನ ಕತೆ ಹೇಳುತ್ತಿದ್ದಾರೆ. ಹಾಗಾಗಿಯೇ ಇಲ್ಲಿ ನಟ ಕಿಶೋರ್ (Kishore) ಮಹಾಕವಿ ಪಂಪನ (Mahakavi Pampa) ಪಾತ್ರ ಮಾಡಿದ್ದಾರೆ. ಈಗೀನ ವಿಷಯ ಏನಂದ್ರೆ ಈ ಚಿತ್ರ ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಇದರ ಅಧಿಕೃತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಜಾತಿ ವ್ಯವಸ್ಥೆ ವಿರೋಧಿಸಿದ ಕವಿ
ಆ ರೀತಿಯ ಕಿಶೋರ್ ಅವರು ಬರಗೂರು ರಾಮಚಂದ್ರಪ್ಪನವರು ಚಿತ್ರದಲ್ಲಿ ಮಹಾಕವಿ ಪಂಪನ ಪಾತ್ರ ಮಾಡಿದ್ದಾರೆ. ಈ ಮೂಲಕ ಚಿತ್ರದಲ್ಲಿ ಪಂಪನ ಕತೆಯನ್ನ ಚಿತ್ರ ರೂಪದಲ್ಲಿ ತೋರಿಸಲಾಗುತ್ತಿದೆ.
ಮಹಾಕವಿ ಅಂತಲೇ ಹೆಸರಿಟ್ಟಿರೋ ಈ ಚಿತ್ರ ರೆಡಿ ಆಗಿದೆ. ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ.
ಈ ಒಂದು ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತಕ್ಕೂ ಬಂದಿದೆ. ಈ ಒಂದು ಚಿತ್ರದಲ್ಲಿ 10 ನೇ ಶತಮಾನದ ಮಹಾಕವಿ ಪಂಪ ರಚಿಸಿದ ಕಾವ್ಯಗಳನ್ನು ಹಾಗೂ ಪಂಪನ ಆಶಯಗಳನ್ನ ತೋರಿಸಲಾಗುತ್ತಿದೆ.
ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನ ವಿರೋಧಿಸುವ ಕೆಲಸವನ್ನ ಮಹಾಕವಿ ಪಂಪ ಮಾಡಿದರು. ಇದಕ್ಕೆ ಪರ್ಯಾಯ ಪರಿಕಲ್ಪನೆಯನ್ನೂ ಕೂಡ ಕೊಟ್ಟಿದ್ದರು.
ಮಹಾಕವಿ ಪಂಪನ ಸಿನಿಮಾ
ಮಹಾಕವಿ ಪಂಪ ರಾಜಪ್ರಭುತ್ವದ ಆಶ್ರಯದಲ್ಲಿಯೇ ಇದ್ದರು. ಆದರೂ ಸೃಜನಶೀಲ ಸ್ವಾತಂತ್ರ್ಯವನ್ನ ಬಿಟ್ಟುಕೊಟ್ಟಿರಲಿಲ್ಲ. ಪ್ರಭುತ್ವದ ಎದುರು ಪ್ರತಿನಾಯಕತ್ವದ ಪರಿಕಲ್ಪನೆಯನ್ನು ನೀಡಿದ್ದರು.
ಮಹಾಕವಿ ಚಿತ್ರದಲ್ಲಿ ಮಹಾಕವಿ ಪಂಪನ ಆ ಎಲ್ಲ ಆಶಯಗಳನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ನಟ ಕಿಶೋರ್ ಅವರು ಈಗಾಗಲೇ ಹೇಳಿದಂತೆ ಮಹಾಕವಿ ಪಂಪನ ಪಾತ್ರ ಮಾಡಿದ್ದಾರೆ.
ಈ ಚಿತ್ರದಲ್ಲಿ ಹಿರಿಯ ನಟ ಸುಂದರಾಜ್ ಅಭಿನಯಿಸಿದ್ದಾರೆ. ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷ್ ಬರಗೂರ್, ಸುಂದರರಾಜ ಅರಸು, ಹನುಮಂತೇಗೌಡ, ಅನುಷಾರೈ, ಕುಮಾರ್ ಗೋವಿಂದ್, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು, ಚಲಪತಿ ಮುಂತಾದವರು ಅಭಿನಯಿಸಿದ್ದಾರೆ.
ಈ ಚಿತ್ರವನ್ನ ಬರಗೂರು ರಾಮಚಂದ್ರಪ್ಪನವರು ಡೈರೆಕ್ಷನ್ ಮಾಡಿದ್ದಾರೆ. ಚಿತ್ರಕತೆ-ಸಂಭಾಷಣೆ ಹಾಗೂ ಗೀತರಚನೆಯನ್ನು ಕೂಡ ಇವರೇ ಮಾಡಿದ್ದಾರೆ. ಶಮಿತಾ ಮಲ್ನಾಡ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ತ್ರಿಭುವನ್ ಕೋರಿಯೋಗ್ರಾಫಿ ಮಾಡಿದ್ದಾರೆ.
ಹಾಗೆ ಈ ಚಿತ್ರವು ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಪಡೆದಿದೆ. ಈ ಸ್ಪರ್ಧೆಯಲ್ಲಿ ಈಗ ಸೆಮಿಫೈನಲ್ ಹಂತಕ್ಕೂ ತಲುಪಿದೆ ಅಂತಲೇ ಹೇಳಬಹುದು.













