2027 ODI World Cup: ಭಾರತ ಏಕದಿನ ವಿಶ್ವಕಪ್ ಗೆಲ್ಲಬೇಕೆಂದ್ರೆ ಆತನಿಗೆ ಅವಕಾಶ ನೀಡಬೇಕು! ಗಂಭೀರ್​​ಗೆ ಮಾಜಿ ಕ್ರಿಕೆಟರ್ ಸಲಹೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಶನಿವಾರ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಮೂಲಕ, ಅವರು ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದರು.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

2027ರ ಏಕದಿನ ವಿಶ್ವಕಪ್​​ಗೆ (ODI World Cup) ಇನ್ನೂ ಒಂದು ವರ್ಷ ಇರುವಾಗಲೇ ತಂಡದ ಆಯ್ಕೆಯ ಬಗ್ಗೆ ಲೆಕ್ಕಾಚಾರಗಳು ಶುರುವಾಗಿದೆ. ತಂಡದಲ್ಲಿ ಯಾರೂ ಇರಬೇಕು, ಯಾರು ಇರಬಾರದು ಎಂಬುದರ ಬಗ್ಗೆ ಚರ್ಚೆಗಳು ಸಾಗುತ್ತಿವೆ. ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ (Laxman Sivaramakrishnan), ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ (Vaibhav Sooryavanshi) 2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ. ಅವರಿಗೆ ವಿಶ್ರಾಂತಿ ನೀಡದೆ ಸತತ ಪಂದ್ಯಗಳಲ್ಲಿ ಅವರನ್ನು ಆಡಿಸಬೇಕೆಂದು ಆಡಳಿತ ಮಂಡಳಿಗೆ ಸಲಹೆ ನೀಡಿದ್ದಾರೆ.

ಇತಿಹಾಸ ನಿರ್ಮಿಸಿದ್ದ ವೈಭವ್

ಶನಿವಾರ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಮೂಲಕ, ಅವರು ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದರು. ಆದರೆ ವೈಭವ್ ತಮ್ಮ ಪದಾರ್ಪಣೆಯನ್ನ ಸ್ಮರಣೀಯವಾಗಿಸಲು ಸಾಧ್ಯವಾಗಲಿಲ್ಲ. ಎರಡು ಸಿಕ್ಸರ್‌ ಸಿಡಿಸಿದರೂ 10 ಎಸೆತಗಳಲ್ಲಿ 14 ರನ್ ಗಳಿಸಿ ಸ್ಟಂಪ್ ಔಟ್ ಆದರು.

ಏಕದಿನ ತಂಡದಲ್ಲೂ ವೈಭವ್ ಆಡಲಿ

ಇತ್ತೀಚೆಗೆ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ ಶಿವರಾಮಕೃಷ್ಣನ್ ಅವರನ್ನು ಏಕದಿನ ವಿಶ್ವಕಪ್ ತಂಡದಲ್ಲಿ ಸೇರಿಸುವ ಆಲೋಚನೆಯನ್ನು ಮುಂದಿಟ್ಟರು. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ವೈಭವ್ ಟೀಮ್ ಇಂಡಿಯಾಗೆ ಮ್ಯಾಚ್​ ವಿನ್ನರ್ ಆಗಿ ಹೊರಹೊಮ್ಮುತ್ತಾರೆ ಎಂದು ಅವರು ಭವಿಷ್ಯ ನುಡಿದರು. ವಿಶ್ರಾಂತಿ ಹೆಸರಿನಲ್ಲಿ ಯುವಕನನ್ನು ಹೊರಗಿಡುವ ಬದಲು, ಆತ ವಿಫಲನಾದರೂ ಹೆಚ್ಚು ಅವಕಾಶಗಳನ್ನು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅಯ್ಯರ್​-ಗಂಭೀರ್ ಬೆಂಬಲ ಅಗತ್ಯ

“ವೈಭವ್ ಸೂರ್ಯವಂಶಿ ಅವರನ್ನು ಆಡಿಸಲು ನಿರ್ಧರಿಸಿದ ನಂತರ, ಅವರಿಗೆ ಸಾಕಷ್ಟು ಮತ್ತು ನಿರಂತರ ಅವಕಾಶಗಳನ್ನು ನೀಡಬೇಕು. ಮುಂದಿನ 20 ವರ್ಷಗಳಲ್ಲಿ ಅವರು ಭಾರತೀಯ ಕ್ರಿಕೆಟ್‌ಗೆ ಪ್ರಮುಖ ಆಸ್ತಿ ಎಂದು ಸಾಬೀತುಪಡಿಸುತ್ತಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ವೈಭವ್​​ಗೆ ಸಂಪೂರ್ಣ ಬೆಂಬಲ ನೀಡಬೇಕು. ಅವರು ಕೆಲವು ಪಂದ್ಯಗಳಲ್ಲಿ ಪ್ರದರ್ಶನ ನೀಡಲು ವಿಫಲವಾದರೂ ಅವರನ್ನು ತಂಡದಿಂದ ಕೈಬಿಡಬಾರದು” ಎಂದು ಒತ್ತಾಯಿಸಿದರು.

ಹೆಚ್ಚು ಅವಕಾಶ ನೀಡಲಿ

ಇದಲ್ಲದೆ, ವೈಭವ್​ಗೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಬ್ಯಾಟ್ಸ್‌ಮನ್‌ಗಳಿಗೆ ಬೌಲರ್‌ಗಳಂತೆಯೇ ದೈಹಿಕ ಸ್ಥಿತಿ ಅಗತ್ಯವಿಲ್ಲ. ಅವರನ್ನು ವರ್ಷವಿಡೀ ಆಡಿಸುತ್ತಲೇ ಇರಬೇಕು. ಹೆಚ್ಚಿನ ಪಂದ್ಯಗಳನ್ನು ಆಡುವುದು ಮತ್ತು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಅವರ ಮಾನಸಿಕ ದೃಢತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವೈಭವ್ ಸೂರ್ಯವಂಶಿ ಟಿ20 ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರಿಗೆ 50 ಓವರ್‌ಗಳ ವಿಶ್ವಕಪ್‌ನಲ್ಲೂ ಖಂಡಿತವಾಗಿಯೂ ಅವಕಾಶ ನೀಡಲಾಗುವುದು. ಅವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತ್ಯುತ್ತಮ ಮ್ಯಾಚ್​ ವಿನ್ನರ್​ ಆಗಿ ಹೊರಹೊಮ್ಮುವ ಅದೃಷ್ಟ ಹೊಂದಿದ್ದಾರೆ” ಎಂದು ಶಿವರಾಮಕೃಷ್ಣನ್ ಭವಿಷ್ಯ ನುಡಿದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed