Last Updated:
ಬಾಲಿವುಡ್ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Actress Madhuri Dixit) ರನ್ನು ಶಿವರಾಜ್ಕುಮಾರ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ (A For Anand) ಸಿನಿಮಾ ಈಗಾಗಲೇ ನಿರೀಕ್ಷೆ ಹುಟ್ಟಿಸಿದ್ದು, ಇದೀಗ ಚಿತ್ರಕ್ಕೆ ಸಂಬಂಧಿಸಿದ ಹೊಸ ಸುದ್ದಿಯೊಂದು ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ (Actress Madhuri Dixit) ರನ್ನು ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.














