Last Updated:
Samantha Ruth Prabhu: ನಟಿ ಸಮಂತಾ ಅವರು ಅಭಿನಯಿಸಿದ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್ ಆಗಿ 11 ದಿನದಲ್ಲಿಯೇ 73 ಕೋಟಿಗೂ ಹೆಚ್ಚು ಗಳಿಸಿದ್ದು ಬಾಕ್ಸ್ ಆಫೀಸ್ ರೇಸ್ ಮುಂದುವರಿದಿದೆ.
ಚಿತ್ರರಂಗ ಈಗ ರೋಲರ್ ಕೋಸ್ಟರ್ ಸವಾರಿಯಾಗಿದೆ. ದೊಡ್ಡ ಸಣ್ಣ ಸಿನಿಮಾಗಳು (Cinema) ಬರುತ್ತಿವೆ. ಕೆಲವು ಹಿಟ್, ಕೆಲವು ಫ್ಲಾಪ್, ಕೆಲವು ಎವರೇಜ್ ಎನ್ನುತ್ತಾ ಸಾಗುತ್ತಿದೆ. ಆದರೆ ಸದ್ಯಕ್ಕೆ ಸ್ಟೋರಿ (Story) ಇಲ್ಲಾಂದ್ರೆ ಸಿನಿಮಾ ಓಡೋದು ಕಷ್ಟ ಎನ್ನುವಂತಾಗಿದೆ. ಜನ ಹೊಸತನವನ್ನೇ ಬಯಸುತ್ತಿದ್ದಾರೆ. ದೊಡ್ಡ ಹೀರೋಗಳ ಸಿನಿಮಾಗಳು ಬಂದರೂ ಕೆಲವೊಮ್ಮೆ ಬಾಕ್ಸ್ ಆಫೀಸ್ನಲ್ಲಿ ಉಳಿಯೋದು ಕಷ್ಟವಾಗುತ್ತಿದೆ. ಹೀಗಿರುವಾಗ ಸಮಂತಾ ಅವರ ಸಿನಿಮಾ ಕ್ಲಿಕ್ ಆಗಿದೆ.
ಹೌದು, ಸಮಂತಾ ಅವರು ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಮಾಡಿದ ನಂತರ ಅವರ ಕುರಿತಾದ ಕ್ರೇಜ್ ಹೆಚ್ಚಾಯಿತು. ಆ ನಂತರ ಅವರು ಅಷ್ಟಾಗಿ ಸಿನಿಮಾ ಮಾಡಲಿಲ್ಲ. ಮಯೋಸಿಟಿಸ್ ಸಮಸ್ಯೆ, ಹೆಲ್ತ್ ಕಾಂಪ್ಲಿಕೇಷನ್ಸ್ ಕಾರಣ ನಟಿ ಒಂದಷ್ಟು ಸಮಯ ಬ್ರೇಕ್ ತೆಗೆದುಕೊಂಡಿದ್ದರು.
ಆ ಮಧ್ಯೆಯೇ ಅವರ ಲೇಡಿ ಓರಿಯೆಂಟೆಡ್ ಯಶೋದಾ, ಶಾಕುಂತಲ ಸಿನಿಮಾಗಳನ್ನು ಸಮಂತಾ ಮಾಡಿದ್ದರು. ಆದರೆ ವಿಭಿನ್ನ ಸಿನಿಮಾ, ಸ್ಟೋರಿ ಆದರೂ ಕೂಡಾ ಸಿನಿಮಾ ಹಿಟ್ ಆಗಲಿಲ್ಲ. ಎರಡೂ ಸಿನಿಮಾ ಫ್ಲಾಪ್ ಎನಿಸಿಕೊಂಡವು. ಇನ್ನು ವಿಜಯ್ ದೇವರಕೊಂಡ ಅವರ ಜೊತೆ ಖುಷಿ ಎನ್ನುವ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನಿಂಗ್ ಸಿನಿಮಾ ಮಾಡಿದರು. ಈ ಮೂವಿ ಕೂಡಾ ಹಿಟ್ ಆಗಲಿಲ್ಲ. ಅಂತೂ ಸಮಂತಾಗೆ ಬ್ಯಾಕ್ To ಬ್ಯಾಕ್ 3 ಸಿನಿಮಾಗಳು ಫ್ಲಾಪ್ ಆದವು.
ಆ ನಂತರ ಬಂದಿರೋದೆ ಮಾ ಇಂಟಿ ಬಂಗಾರಂ. ಇದು ಕೂಡಾ ಹೀರೋಯಿನ್ ಓರಿಯೆಂಟೆಡ್ ಸಿನಿಮಾ. ಆದರೆ ಈ ಸಿನಿಮಾ ಮೂಲಕ ಸಮಂತಾ ಅವರು ತಾವು ಯಾವ ಹೀರೋಗೂ ಕಡಿಮೆ ಇಲ್ಲ ಅನ್ನೋದನ್ನು ಪ್ರೂವ್ ಮಾಡಿಬಿಟ್ಟರು.
ಸಿನಿಮಾ ರಿಲೀಸ್ ಆಗಿ 11 ದಿನಗಳಾಗಿವೆ ಅಷ್ಟೆ. ಈಗಾಗಲೇ ಮೂವಿ 73 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಟ್ರಲಾಲಾ ಮೂವಿಂಗ್ ಪಿಕ್ಚರ್ಸ್ ಈ ಸಂಬಂಧ ಪೋಸ್ಟ್ ಕೂಡಾ ಶೇರ್ ಮಾಡಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿದ್ದು, ಸಮಂತಾ ಇದ್ರೆ ನಿರ್ಮಾಪಕರ ಜೇಬು ತುಂಬುತ್ತೆ ಅನ್ನೋದು ಸಾಬೀತಾಗಿದೆ.
ಮಾ ಇಂಟಿ ಬಂಗಾರಂ ಪ್ರಸ್ತುತ 11ನೇ ದಿನದಂದು (ಸೋಮವಾರ, 29 ಜೂನ್ 2026) ಭಾರತದಲ್ಲಿ ₹20.72 ಲಕ್ಷ ಗಳಿಕೆಯನ್ನು ದಾಖಲಿಸಿದೆ. ಸಿನಿಮಾ ಒಟ್ಟು 229 ನಗರಗಳಲ್ಲಿ 400 ಪ್ರದರ್ಶನಗಳನ್ನು ಕಂಡಿತು. ಒಟ್ಟಾರೆ ಶೇ. 10.7 ರಷ್ಟು ಪ್ರೇಕ್ಷಕರನ್ನು ದಾಖಲಿಸಿತು. 17 ಶೋಗಳು ದಿನವಿಡೀ ವೇಗವಾಗಿ ಫುಲ್ ಆಗಿವೆ. 11ನೇ ದಿನದ ಕಲೆಕ್ಷನ್ ಭಾರತದಲ್ಲಿ ಒಟ್ಟು ಈಗ ₹55.74 ಕೋಟಿಗೆ ತಲುಪಿದೆ. ವರ್ಲ್ಡ್ ವೈಡ್ ಕಲೆಕ್ಷನ್ 73 ಕೋಟಿ ದಾಟಿದೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಮಂತಾ ರುತ್ ಪ್ರಭು ಅವರು ಸ್ವಲ್ಪ ಸಮಯದ ತನಕ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ನಟಿ ತಾವು ಚಿಕ್ಕ ಗ್ಯಾಪ್ ತೆಗೆದುಕೊಂಡು ವಾಪಸ್ ಬರುವುದಾಗಿ ಹೇಳಿದ್ದಾರೆ.
Bangalore,Karnataka













