Last Updated:
Lottery: ಬಡ ರೈತನಿಗೆ ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆದಿದೆ. ಸೇಲ್ ಆಗದೇ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್ ಖರೀದಿಸಿದ ರೈತನಿಗೆ ಬಂಪರ್ ಪ್ರೈಜ್ ಬಂದಿದೆ. ಆ ರೈತ ಸೇಲ್ ಆಗದೇ ಉಳಿದಿದ್ದ ಕೊನೆಯ ಟಿಕೆಟ್ ಖರೀದಿಸಿದ್ದು, ಅದೇ ನಂಬರ್‌ಗೆ ಬಂಪರ್ ಪ್ರೈಜ್ ಒಲಿದಿದೆ!
ಪಂಬಾಜ್: ಬಡ ರೈತನಿಗೆ ಲಾಟರಿಯಲ್ಲಿ ಜಾಕ್‌ಪಾಟ್ (jackpot) ಹೊಡೆದಿದೆ. ಸೇಲ್ ಆಗದೇ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್ (lottery ticket) ಖರೀದಿಸಿದ ರೈತನಿಗೆ (farmer) ಬಂಪರ್ ಪ್ರೈಜ್ ಬಂದಿದೆ. ಪಂಜಾಬ್‌ನ (Punjab) ಮೋಗಾ (Moga) ಜಿಲ್ಲೆಯ 66 ವರ್ಷದ ರೈತನಿಗೆ ಲಕ್ಷ್ಮೀ ದೇವಿ ಒಲಿದಿದ್ದಾಳೆ. ಆತನ ದಿನ ಸಾಮಾನ್ಯ ದಿನದಂತೆ ಆರಂಭವಾದದ್ದು, ಬಳಿಕ ಅದೃಷ್ಟದ ಲಾಟರಿ ಹೊಡೆತದೊಂದಿಗೆ ಕೊನೆಗೊಂಡಿತು. ಸ್ಥಳೀಯ ಲಾಟರಿ ಏಜೆಂಟ್ ಅಂಗಡಿಯಲ್ಲಿ ಸೇಲ್ ಆಗದೇ ಉಳಿದಿದ್ದ ಕೊನೆಯ ಟಿಕೆಟ್ ಖರೀದಿಸಿದ್ದು, ಅದೇ ನಂಬರ್‌ಗೆ ಬಂಪರ್ ಪ್ರೈಜ್ (bumper prize) ಒಲಿದಿದೆ!
ಪಂಜಾಬ್ ರಾಜ್ಯದ ಮೋಗಾ ಜಿಲ್ಲೆಯ ಗ್ರಾಮವೊಂದರ ನಿವಾಸಿ ಚರಂಜಿತ್ ಸಿಂಗ್ ಎಂಬುವರಿಗೆ ಲಾಟರಿಯಲ್ಲಿ ಬಂಪರ್ ಪ್ರೈಜ್ ಬಂದಿದೆ. ಅವರು 1,000 ರೂಪಾಯಿ ಮೌಲ್ಯದ ಪಂಜಾಬ್ ಲಾಟರಿ ಟಿಕೆಟ್ ಖರೀದಿಸಿದ್ದರು. ಅದೇ ಟಿಕೆಟ್‌ಗೆ ಇದೀಗ 50 ಲಕ್ಷ ರೂಪಾಯಿಗಳ ಪ್ರಥಮ ಬಹುಮಾನ ಬಂದಿದೆ.
ರೈತ ಚರಂಜಿತ್ ಸಿಂಗ್‌ಗೆ ಒಂದೇ ದಿನ ಒಂದಲ್ಲ, 2 ಬಾರಿ ಅದೃಷ್ಟ ಬಲಿದಿದೆ. ಇದಕ್ಕೂ ಮೊದಲು ಚರಂಜಿತ್ ಸಿಂಗ್ ಮತ್ತೊಂದು ಲಾಟರಿ ಟಿಕೆಟ್ ತೆಗೆದುಕೊಂಡಿದ್ದು, ಅದಕ್ಕೆ 20,000 ರೂಪಾಯಿ ಬಹುಮಾನ ಬಂದಿತ್ತು. ಅವರು ತಮ್ಮ ಬಹುಮಾನದ ಹಣ 20 ಸಾವಿರ ರೂಪಾಯಿ ಪಡೆಯಲು ಆ ಲಾಟರಿ ಸ್ಟಾಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ಲಾಟರಿ ಮಾರಾಟಗಾರನು 1,000 ಮೌಲ್ಯದ ಲಾಟರಿ ಡ್ರಾದಿಂದ ಕೇವಲ ಒಂದು ಟಿಕೆಟ್ ಮಾತ್ರ ಮಾರಾಟವಾಗದೆ ಉಳಿದಿದೆ ಎಂದು ತೋರಿಸಿ ಅದನ್ನು ಖರೀದಿಸುವಂತೆ ಒತ್ತಾಯ ಮಾಡಿದ್ದಾನೆ.
ಚರಂಜಿತ್ ಸಿಂಗ್ ತಾವು ಗೆದ್ದ 20 ಸಾವಿರ ರೂಪಾಯಿ ಲಾಟರಿ ಹಣ ಪಡೆದು, ಅದರಲ್ಲಿ ಗೆಲುವಿನ ಒಂದು ಭಾಗವನ್ನು ಮತ್ತೊಂದು ಲಾಟರಿ ಟಿಕೆಟ್ ಖರೀದಿಸಲು ನಿರ್ಧರಿಸಿದ್ರು. ಮಾರಾಟವಾಗದೇ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್‌ಗಾಗಿ 1 ಸಾವಿರ ರೂಪಾಯಿ ಖರ್ಚು ಮಾಡಲು ನಿರ್ಧರಿಸಿದರು. ಕೊನೆಗೆ ಅಲ್ಲಿ ಮಾರಾಟವಾಗದೇ ಉಳಿದಿದ್ದ 50 ಲಕ್ಷ ರೂಪಾಯಿ ಬಂಪರ್ ಬಹುಮಾನದ ಟಿಕೆಟ್ ಅನ್ನು 1 ಸಾವಿರ ರೂಪಾಯಿ ಕೊಟ್ಟು, ಖರೀದಿಸಿ ಮನೆಗೆ ಬಂದರು.

ಅವರ ಆ ನಿರ್ಧಾರ ಎಲ್ಲವನ್ನೂ ಬದಲಾಯಿಸಿತು. ಫಲಿತಾಂಶಗಳು ಪ್ರಕಟವಾದಾಗ, ಅದೇ ಲಾಟರಿ ಟಿಕೆಟ್ ಪ್ರಥಮ ಬಹುಮಾನ ವಿಜೇತರಾಗಿ ಹೊರಹೊಮ್ಮಿತು, ಅವರಿಗೆ 50 ಲಕ್ಷ ರೂಪಾಯಿಗಳನ್ನು ಗಳಿಸಿಕೊಟ್ಟಿತು. ಚರಂಜಿತ್ ಗೆಲುವು ಇಡೀ ಊರಿನಲ್ಲಿ ಗಾಳಿಸುದ್ದಿಯಂತೆ ಹಬ್ಬಿತು. ರೈತನ ಈ ಗೆಲುವನ್ನು ಗ್ರಾಮಸ್ಥರೆಲ್ಲ ಸಂಭ್ರಮಿಸುತ್ತಿದ್ದಾರೆ.
ಚರಂಜಿತ್ ಸಿಂಗ್ ಅವರ ಪ್ರಕಾರ, ಲಾಟರಿ ಟಿಕೆಟ್ ಖರೀದಿಸುವುದು ಬಹಳ ಹಿಂದಿನಿಂದಲೂ ರೂಢಿಯಾಗಿದೆ. ಕಳೆದ 15 ರಿಂದ 16 ವರ್ಷಗಳಿಂದ, ಅವರು ಸಾಂದರ್ಭಿಕವಾಗಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಆಗಾಗ್ಗೆ ಅವರು ಪ್ರಯಾಣಿಸಿದಲ್ಲೆಲ್ಲಾ ಒಂದು ಲಾಟರಿ ಟೆಕಿಟ್ ತೆಗೆದುಕೊಳ್ಳುತ್ತಾರೆ.
ಚರಂಜಿತ್ ಸಿಂಗ್ ಲಾಟರಿ ಟಿಕೆಟ್ ಮಾರಾಟಗಾರ ಮತ್ತು ಸ್ಥಳೀಯ ನಿವಾಸಿಗಳಿದಗೆ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಹಠಾತ್ ಅನಿರೀಕ್ಷಿತ ಲಾಭದಿಂದ ಸಂತಸಗೊಂಡಿರುವ ವೃದ್ಧ ರೈತ, ಹಲವು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರೂ ಇಂತಹ ಫಲಿತಾಂಶವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದೀಗ ಲಾಟರಿ ಹಣ ಕೈಗೆ ಬರುತ್ತಿದ್ದಂತೆ ಬಾಕಿ ಇರುವ ಸಾಲಗಳನ್ನು ಮರುಪಾವತಿಸುವುದು ತಮ್ಮ ಮೊದಲ ಆದ್ಯತೆ ಎಂದು ಚರಂಜಿತ್ ಸಿಂಗ್ ಹೇಳಿದ್ದಾರೆ. ಉಳಿದ ಮೊತ್ತವನ್ನು ತಮ್ಮ ಕುಟುಂಬವನ್ನು ಪೋಷಿಸಲು ಮತ್ತು ದತ್ತಿ ಕಾರ್ಯಗಳಿಗೆ ಕೊಡುಗೆ ನೀಡಲು ಬಳಸಲಾಗುವುದು ಎಂದು ಅವರು ಹೇಳಿದ್ದಾಗಿ ನ್ಯೂಸ್ 18 ಪಂಜಾಬ್ ವರದಿ ಮಾಡಿದೆ.














