Loose Mada Yogi: ಗ್ರಾಮಾಯಣ ಸಿನಿಮಾ ಬಳಿಕ ಲಕ್ ಹೊಡೆಯಿತಾ? ಲೂಸ್ ಮಾದ ಹೊಸ ಚಿತ್ರ ಅನೌನ್ಸ್ | | ACTPnews

Loose Mada Yogi New Movie Forever Launch and Latest Details


ಯೋಗಿಯ 51ನೇ ಸಿನಿಮಾ

ಲೂಸ್ ಮಾದ ಯೋಗಿ ಅಭಿನಯದ 51ನೇ ಚಿತ್ರ ಲಾಂಚ್ ಆಗಿದೆ. ಫಾರೆವರ್ ಅನ್ನೋ ಈ ಚಿತ್ರ ಯೋಗಿ ಜನ್ಮ ದಿನಕ್ಕೇನೆ ಲಾಂಚ್ ಆಗಿದೆ. ವಿಶೇಷವೆಂದ್ರೆ ಗೆಳೆಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಒಂದು ವಿಷಯ…

(ಚಿತ್ರ ಕೃಪೆ: ಲೂಸ್ ಮಾದ ಯೋಗಿ ಇನ್‌ಸ್ಟಾಗ್ರಾಮ್)

ಚಿತ್ರದ ಟೈಟಲ್ ಪೋಸ್ಟರ್ ಅನ್ನ ವಿಶೇಷವಾಗಿಯೇ ರಿಲೀಸ್ ಮಾಡಲಾಗಿದೆ. ಬೃಹತ್ ಪೋಸ್ಟರ್ ಮೇಲೆ ಫಾರೆವರ್ ಅನ್ನೋ ಟೈಟಲ್ ಅಷ್ಟೆ ಆಕರ್ಷಕವಾಗಿಯೇ ಕಾಣಿಸುತ್ತದೆ.

ಯೋಗಿ ಹೇಳೋದೇನು

ಈ ಚಿತ್ರದ ನಾಯಕ ನಟ ಯೋಗಿ ಈ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಚಿತ್ರದ ಮುಹೂರ್ತಕ್ಕೆ ಬಂದು ವಿಶ್ ಮಾಡಿರೋ ಗೆಳೆಯ ಧ್ರುವ ಸರ್ಜಾ ಕುರಿತು ಹೇಳಿಕೊಂಡಿದ್ದಾರೆ.

2 ವರ್ಷದಿಂದಲೂ ಒಂದೇ ಒಂದು…

ಕಳೆದ ಎರಡು ವರ್ಷದಿಂದಲೂ ನಾನು ನಾಯಕನಾಗಿ ನಟಿಸಿದ ಒಂದೇ ಒಂದು ಚಿತ್ರ ಬಂದಿಲ್ಲ. ಆದರೆ, ಈಗ ಒಂದು ಚಿತ್ರ ಅನೌನ್ಸ್ ಆಗಿದೆ. ಇದು ಖುಷಿನೂ ಕೊಟ್ಟಿದೆ.

ಈ ಚಿತ್ರದ ಡೈರೆಕ್ಟರ್ ಒಳ್ಳೆ ಕತೆ ಮಾಡಿಕೊಂಡಿದ್ದಾರೆ. ಇದು ಅಷ್ಟೆ ಅದ್ದೂರಿಯಾಗಿಯೇ ಬರುತ್ತದೆ. ಹಾಗೆ ನಾನು ಇಲ್ಲಿವರೆಗೂ ಮಾಡಿರದೇ ಇರೋ ಪಾತ್ರವನ್ನೆ ಮಾಡುತ್ತಿದ್ದೇನೆ ಅಂತಲೂ ಯೋಗಿ ಚಿತ್ರದ ಲಾಂಚ್ ಟೈಮ್ ಅಲ್ಲಿಯೇ ಹೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಒಂದು ವಿಷಯ…

ಫಾರೆವರ್ ಚಿತ್ರದಲ್ಲಿ ಲವ್ ಇದೆ. ಸೆಂಟಿಮೆಂಟ್ಸ್ ಇದೆ. ಬೈಕ್ ರಿಲೇಟೆಡ್ ವಿಚಾರವು ಇದೆ. ಇದು ನನಗೆ ತುಂಬಾನೆ ಹತ್ತಿರವೇ ಆಗಿದೆ. ಕಾರಣ ನಾನು ಬೈಕ್ ಇಷ್ಟಪಡ್ತೀನಿ. ನಾನೂ ಒಬ್ಬ ಬೈಕರ್ ನೋಡಿ.

Loose Mada Yogi New Movie Forever Launch and Latest Details

ಲೂಸ್ ಮಾದ ಹೊಸ ಚಿತ್ರ ಲಾಂಚ್‌

ಆದರೆ, ಈ ಚಿತ್ರದಲ್ಲಿ ಮತ್ತೊಂದು ವಿಷಯವೂ ಇದೆ. ಇದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಅಂತಲೇ ಯೋಗಿ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಶೂಟಿಂಗ್

ಫಾರೆವರ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಹಾಗೆ ಚಿತ್ರದ ಡೈರೆಕ್ಟರ್ ಇನ್ನೂ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ.

ಹಾಗೆ ವಿಮಾನ ಹತ್ತಿದ ಕೂಡಲೇ ಮೋಬೈಲ್ ಪಕ್ಕಕ್ಕೆ ಇಡುತ್ತಿದ್ದೆ. ಕಾರಣ, ಈ ಕತೆಯನ್ನ ಬರೆಯುತ್ತಿದ್ದೆ ಅಂತಲೇ ಡೈರೆಕ್ಟರ್ ಯೋಗೇಶ್ ಮುನಿಸಿದ್ದಪ್ಪ ಹೇಳಿಕೊಂಡಿದ್ದಾರೆ.

ನಾಯಜಿ ಆಕಾಂಕ್ಷ ರಾವ್ ನಾಯಕಿ

ಈ ಚಿತ್ರದಲ್ಲಿ ಲೂಸ್ ಮಾದ ಯೋಗಿಗೆ ಇಲ್ಲಿ ನಾಯಜಿ ಆಕಾಂಕ್ಷ ರಾವ್ ನಾಯಕಿ ಆಗಿದ್ದಾರೆ. ಈ ಹಿಂದೆ ಇವರು ಒಂದು ತುಳು ಚಿತ್ರ ಮಾಡಿದ್ದಾರೆ. ಆದರೆ, ಈ ಚಿತ್ರ ಇವರಿಗೆ ಮೊದಲ ಕನ್ನಡ ಸಿನಿಮಾನೇ ಆಗಿದೆ.

ಚಿತ್ರಕ್ಕೆ ಪ್ರದ್ಯೂತನ್ ಮ್ಯೂಸಿಕ್ ಮಾಡುತ್ತಿದ್ದಾರೆ. ಸಂಕೇತ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಇವರ ಈ ಚಿತ್ರ ಟೈಟಲ್‌ ಪೋಸ್ಟರ್‌ ನಿಂದಲೂ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed