ಈ ಚಿತ್ರದಲ್ಲಿ ಒಂದು ವಿಷಯ…
(ಚಿತ್ರ ಕೃಪೆ: ಲೂಸ್ ಮಾದ ಯೋಗಿ ಇನ್‌ಸ್ಟಾಗ್ರಾಮ್)
ಚಿತ್ರದ ಟೈಟಲ್ ಪೋಸ್ಟರ್ ಅನ್ನ ವಿಶೇಷವಾಗಿಯೇ ರಿಲೀಸ್ ಮಾಡಲಾಗಿದೆ. ಬೃಹತ್ ಪೋಸ್ಟರ್ ಮೇಲೆ ಫಾರೆವರ್ ಅನ್ನೋ ಟೈಟಲ್ ಅಷ್ಟೆ ಆಕರ್ಷಕವಾಗಿಯೇ ಕಾಣಿಸುತ್ತದೆ.
ಈ ಚಿತ್ರದ ನಾಯಕ ನಟ ಯೋಗಿ ಈ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಚಿತ್ರದ ಮುಹೂರ್ತಕ್ಕೆ ಬಂದು ವಿಶ್ ಮಾಡಿರೋ ಗೆಳೆಯ ಧ್ರುವ ಸರ್ಜಾ ಕುರಿತು ಹೇಳಿಕೊಂಡಿದ್ದಾರೆ.
ಕಳೆದ ಎರಡು ವರ್ಷದಿಂದಲೂ ನಾನು ನಾಯಕನಾಗಿ ನಟಿಸಿದ ಒಂದೇ ಒಂದು ಚಿತ್ರ ಬಂದಿಲ್ಲ. ಆದರೆ, ಈಗ ಒಂದು ಚಿತ್ರ ಅನೌನ್ಸ್ ಆಗಿದೆ. ಇದು ಖುಷಿನೂ ಕೊಟ್ಟಿದೆ.
ಈ ಚಿತ್ರದ ಡೈರೆಕ್ಟರ್ ಒಳ್ಳೆ ಕತೆ ಮಾಡಿಕೊಂಡಿದ್ದಾರೆ. ಇದು ಅಷ್ಟೆ ಅದ್ದೂರಿಯಾಗಿಯೇ ಬರುತ್ತದೆ. ಹಾಗೆ ನಾನು ಇಲ್ಲಿವರೆಗೂ ಮಾಡಿರದೇ ಇರೋ ಪಾತ್ರವನ್ನೆ ಮಾಡುತ್ತಿದ್ದೇನೆ ಅಂತಲೂ ಯೋಗಿ ಚಿತ್ರದ ಲಾಂಚ್ ಟೈಮ್ ಅಲ್ಲಿಯೇ ಹೇಳಿಕೊಂಡಿದ್ದಾರೆ.
ಫಾರೆವರ್ ಚಿತ್ರದಲ್ಲಿ ಲವ್ ಇದೆ. ಸೆಂಟಿಮೆಂಟ್ಸ್ ಇದೆ. ಬೈಕ್ ರಿಲೇಟೆಡ್ ವಿಚಾರವು ಇದೆ. ಇದು ನನಗೆ ತುಂಬಾನೆ ಹತ್ತಿರವೇ ಆಗಿದೆ. ಕಾರಣ ನಾನು ಬೈಕ್ ಇಷ್ಟಪಡ್ತೀನಿ. ನಾನೂ ಒಬ್ಬ ಬೈಕರ್ ನೋಡಿ.
ಲೂಸ್ ಮಾದ ಹೊಸ ಚಿತ್ರ ಲಾಂಚ್
ಆದರೆ, ಈ ಚಿತ್ರದಲ್ಲಿ ಮತ್ತೊಂದು ವಿಷಯವೂ ಇದೆ. ಇದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಅಂತಲೇ ಯೋಗಿ ಹೇಳಿಕೊಂಡಿದ್ದಾರೆ.
ಫಾರೆವರ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಹಾಗೆ ಚಿತ್ರದ ಡೈರೆಕ್ಟರ್ ಇನ್ನೂ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ.
ಹಾಗೆ ವಿಮಾನ ಹತ್ತಿದ ಕೂಡಲೇ ಮೋಬೈಲ್ ಪಕ್ಕಕ್ಕೆ ಇಡುತ್ತಿದ್ದೆ. ಕಾರಣ, ಈ ಕತೆಯನ್ನ ಬರೆಯುತ್ತಿದ್ದೆ ಅಂತಲೇ ಡೈರೆಕ್ಟರ್ ಯೋಗೇಶ್ ಮುನಿಸಿದ್ದಪ್ಪ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಲೂಸ್ ಮಾದ ಯೋಗಿಗೆ ಇಲ್ಲಿ ನಾಯಜಿ ಆಕಾಂಕ್ಷ ರಾವ್ ನಾಯಕಿ ಆಗಿದ್ದಾರೆ. ಈ ಹಿಂದೆ ಇವರು ಒಂದು ತುಳು ಚಿತ್ರ ಮಾಡಿದ್ದಾರೆ. ಆದರೆ, ಈ ಚಿತ್ರ ಇವರಿಗೆ ಮೊದಲ ಕನ್ನಡ ಸಿನಿಮಾನೇ ಆಗಿದೆ.
ಚಿತ್ರಕ್ಕೆ ಪ್ರದ್ಯೂತನ್ ಮ್ಯೂಸಿಕ್ ಮಾಡುತ್ತಿದ್ದಾರೆ. ಸಂಕೇತ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಇವರ ಈ ಚಿತ್ರ ಟೈಟಲ್ ಪೋಸ್ಟರ್ ನಿಂದಲೂ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.













