Last Updated:
ಆನ್ಸಿ ಸೋಜನ್ 6.88 ಮೀ ಜಿಗಿದು ಅಂಜು ಬಾಬಿ ಜಾರ್ಜ್ 2004 ದಾಖಲೆ ಮುರಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗುರಿ, ಶೈಲಿ ಸಿಂಗ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕೇರಳದ (Kerala) ಲಾಂಗ್ ಜಂಪ್ ಕ್ರೀಡಾಪಟು (Long Jump) ಆನ್ಸಿ ಸೋಜನ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಭಾರತದ ಖ್ಯಾತ ಲಾಂಗ್ ಜಂಪ್ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರ ದಾಖಲೆಯನ್ನು (National Record) 22 ವರ್ಷದ ಆನ್ಸಿ (Anju Bobby) ಬ್ರೇಕ್ ಮಾಡಿದ್ದು, ರಾಷ್ಟ್ರಮಟ್ಟದ ಅಂತರ್ರಾಜ್ಯ ಚಾಂಪಿಯನ್ಶಿಪ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಕೇರಳದ ಲಾಂಗ್ ಜಂಪರ್ ಆನ್ಸಿ ಸೋಜನ್ ಅವರು 22 ವರ್ಷದ ದಾಖಲೆಯನ್ನು ಮುರಿದು, ಆ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಶನಿವಾರ ಭುವನೇಶ್ವರದಲ್ಲಿ ನಡೆದ ಕ್ರೀಡಾ ಚಾಂಪಿಯನ್ಶಿಪ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. 22 ವರ್ಷದ ಆನ್ಸಿ ತಮ್ಮ ಐದನೇ ಪ್ರಯತ್ನದಲ್ಲಿ 6.88 ಮೀಟರ್ ದೂರ ಜಿಗಿದಿದ್ದಾರೆ. ಈ ಮೂಲಕ 2004ರ ಅಥೆನ್ಸ್ ಒಲಂಪಿಕ್ಸ್ನಲ್ಲಿ ಅಂಜು ಬಾಬಿ ಜಾರ್ಜ್ ನಿರ್ಮಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಭಾರತ ಅಥ್ಲೆಟಿಕ್ಸ್ ಫೆಡರೇಶನ್ನಲ್ಲಿ ಅವರು ಈ ಹಿಂದೆ ನಿರ್ಮಿಸಿದ್ದ 6.83 ಮೀಟರ್ ದಾಖಲೆಯನ್ನು ಬ್ರೇಕ್ ಮಾಡಿದ್ದು, 6.88 ಮೀಟರ್ ಜಿಗಿದು ಹೊಸ ಇತಿಹಾಸ ಬರೆದಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ಹಿಂದಿನ ಏಷ್ಯನ್ ಅಥ್ಲೆಟಿಕ್ಸ್ನಲ್ಲಿ 6.75 ಮೀಟರ್ ಜಿಗಿದು ದಾಖಲೆ ಬರೆದಿದ್ದ ಆನ್ಸಿ ತಮ್ಮ ವೈಯಕ್ತಿಕ ದಾಖಲೆಯನ್ನು ಹಂಚಿಕೊಳ್ಳಲು ನೆರವು ಕೋರಿದ್ದಾರೆ.
ಇನ್ನು, ಉತ್ತರ ಪ್ರದೇಶದ ಶೈಲಿ ಸಿಂಗ್ 6.67 ಮೀಟರ್ ಜಿಗಿದು ಎರಡನೇ ಸ್ಥಾನ ಪಡೆದುಕೊಂಡರೆ, ಲಕ್ಷದ್ವೀಪದ ಮುಬಾಸ್ಸಿನಾದ ಮೊಹಮ್ಮದ್ 6.53 ಮೀಟರ್ ಜಿಗಿದು ಕ್ರಮವಾಗಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ ಇಬ್ಬರು ಮಾತ್ರ ಏಷ್ಯನ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆನ್ಸಿ ಅವರು ಚಾಂಪಿಯನ್ಶಿಪ್ಗಳಲ್ಲಿ ಐದು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಭಾರತದ ಲಾಂಗ್ ಜಂಪ್ನಲ್ಲಿ ಆನ್ಸಿ ಹೊಸ ಭರವಸೆಯಾಗಿದ್ದು, ಇವರ ಯಶಸ್ಸಿನ ಹಿಂದೆ ಇಬ್ಬರು ಆಟೋ ಚಾಲಕರ ಪಾತ್ರವೂ ಮಹತ್ವ ಪಡೆದುಕೊಂಡಿದೆ. ಯಾರಪ್ಪಾ ಆ ಆಟೋ ಚಾಲಕರು ಅಂತ ನೋಡುವುದಾದರೆ, ಆನ್ಸಿ ಅವರ ತಂದೆ ಸೋಜನ್ ಇಟಿ ಹಾಗೂ ಬಾಲ್ಯದ ಕೋಚ್ ಕಣ್ಣನ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ಸನೋಜ್ ವಿವಿ ಅವರು. ಇಬ್ಬರು ತಮ್ಮ ಜೀವನದಲ್ಲಿ ಕ್ರೀಡಾಪಟುಗಳು ಆಗಬೇಕು ಎಂದು ಆಶಿಸಿದ್ದರಂತೆ. ಆದರೆ ಹಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ಆನ್ಸಿ ಅವರಿಗೆ ಪ್ರೋತ್ಸಾಹ ನೀಡಿದ್ದರು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆನ್ಸಿ ಅವರು ತಮ್ಮ ಗೆಲುವನ್ನು ತಂದೆಗೆ ಅರ್ಪಿಸಿದ್ದಾರೆ. ‘ನಮ್ಮ ತಂದೆ ಯಾವಾಗಲೂ ನನ್ನನ್ನು ನಂಬಿದ್ದರು. ಪ್ರತಿಯೊಂದು ಕಷ್ಟದಲ್ಲೂ ನನಗೆ ಬೆಂಬಲ ನೀಡಿದ್ದರು. ಅವರಿಗೆ ನನ್ನ ಗೆಲುವು ಅರ್ಪಿಸುತ್ತೇನೆ’ ಎಂದು ಆನ್ಸಿ ಹೇಳಿದ್ದಾರೆ.
What just happened???????? 🤯🤩
Ancy Sojan broke the 22 year old National Record with 6.88m Jump in Women’s Long JumpThat’s so crazyyyyyy! 🔥🔥🔥🔥🔥🔥 pic.twitter.com/m8HfqJn9Wb
— The Khel India (@TheKhelIndia) June 27, 2026
ಆನ್ಸಿ ಅವರ ತಂದೆ ಮಗಳ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದು, ‘ತಮ್ಮ ಮಗಳು ಇನ್ನು ಸಂಪೂರ್ಣ ಸಾಮರ್ಥ್ಯದಿಂದ ಪ್ರದರ್ಶನ ನೀಡಿಲ್ಲ. ಆನ್ಸಿ ಶೀಘ್ರದಲ್ಲೇ 7 ಮೀಟರ್ ವರೆಗೂ ಜಿಗಿಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.













