London Indian Community: ಬಹಳ ಆಡಿದ್ದೀರಿ, ಇನ್ಮುಂದೆ ಆಟ ನಡೆಯಲ್ಲ; ಲಂಡನಿಸ್ತಾನ್‘ ಅಹಂಕಾರಕ್ಕೆ ದಿಟ್ಟ ಉತ್ತರ ಕೊಟ್ರಾ ಭಾರತೀಯರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

London Indian Community: ಬಹಳ ಆಡಿದ್ದೀರಿ, ಇನ್ಮುಂದೆ ಆಟ ನಡೆಯಲ್ಲ; ಲಂಡನಿಸ್ತಾನ್‘ ಅಹಂಕಾರಕ್ಕೆ ದಿಟ್ಟ ಉತ್ತರ ಕೊಟ್ರಾ ಭಾರತೀಯರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಬಹಳ ಆಡಿದ್ದೀರಿ, ಇನ್ಮುಂದೆ ನಿಮ್ಮ ಆಟ ನಡೆಯಲ್ಲ.  ಲಂಡನಿಸ್ತಾನ್ (Londonistan) ಅಹಂಕಾರ ಮತ್ತು ಭಾರತ ವಿರೋಧಿ ನಿಲುವುಗಳಿಗೆ ಭಾರತೀಯರು (Indians) ಅಂತಿಮ ಎಚ್ಚರಿಕೆ ನೀಡಿದ್ದಾರೆ. ಸದಾ ಭಾರತದ ವಿರುದ್ಧ ಸಂಚು ರೂಪಿಸುವ ಶಕ್ತಿಗಳಿಗೆ ಈ ಬಾರಿ ಭಾರತೀಯ ಸಮುದಾಯವು ಒಗ್ಗಟ್ಟಿನಿಂದ ಮತ್ತು ಅತ್ಯಂತ ದಿಟ್ಟವಾಗಿ ಉತ್ತರ ಕೊಟ್ಟಿದ್ದು, ಇನ್ನು ಸಾಕು, ಗುಡ್‌ಬೈ (Good Bye) ಎನ್ನುವ ಮೂಲಕ ಅವರ ಅಹಂಕಾರದ ಕೋಟೆಯನ್ನು ಧೂಳೀಪಟ ಮಾಡಿದೆ ಎನ್ನಲಾಗಿದೆ.  

ಬ್ರಿಟನ್​ ತೊರೆದ ಸಾವಿರಾರು ಭಾರತೀಯರು!

ಬ್ರಿಟನ್‌ನಲ್ಲಿ ಹಲವು ವರ್ಷಗಳಿಂದ ಉತ್ತಮ ಉದ್ಯೋಗ, ಉನ್ನತ ಶಿಕ್ಷಣ ಮತ್ತು ಉತ್ತಮ ಜೀವನಮಟ್ಟದ ಕನಸಿನಿಂದ ನೆಲೆಸಿದ್ದ ಸಾವಿರಾರು ಭಾರತೀಯರು ಈಗ ಭಾರತಕ್ಕೆ ಮರಳುತ್ತಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸುಮಾರು 72 ಸಾವಿರಕ್ಕೂ ಹೆಚ್ಚು ಭಾರತೀಯರು ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ರಿಟನ್ ತೊರೆದಿದ್ದಾರೆ. ಇದು ಬ್ರಿಟನ್‌ನ ವಲಸೆ ಇತಿಹಾಸದಲ್ಲೇ ಗಮನಾರ್ಹ ಬದಲಾವಣೆಯಾಗಿ ಪರಿಣಮಿಸಿದೆ.

ಹೇಗಿದೆ ಪರಿಸ್ಥಿತಿ?

ಈ ಬೃಹತ್ ವಾಪಸಿಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ಬ್ರಿಟನ್‌ನಲ್ಲಿ ಅತಿಹೆಚ್ಚಿನ ದುಬಾರಿ ಜೀವನ, ಮನೆ ಬಾಡಿಗೆ ಏರಿಕೆ, ವಿದ್ಯುತ್ ಹಾಗೂ ದಿನಸಿ ವೆಚ್ಚದ ಹೆಚ್ಚಳ ಭಾರತೀಯ ಕುಟುಂಬಗಳ ಮೇಲೆ ದೊಡ್ಡ ಹೊರೆ ತಂದಿದೆ. ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಗ್‌ಹ್ಯಾಮ್ ಮುಂತಾದ ನಗರಗಳಲ್ಲಿ ಸಾಮಾನ್ಯ ಮಧ್ಯಮವರ್ಗದ ಕುಟುಂಬವೂ ಜೀವನ ನಿರ್ವಹಣೆಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬ್ರಿಟನ್‌ನಲ್ಲಿ ವಲಸೆ ನಿಯಮ ಹೇಗಿದೆ?

ಇದರ ಜೊತೆಗೆ, ಬ್ರಿಟನ್ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ವಲಸೆ ನಿಯಮಗಳನ್ನು ಕಠಿಣಗೊಳಿಸಿದೆ. ಸ್ಕಿಲ್ಡ್ ವರ್ಕರ್ ವಿಸಾಗೆ ಬೇಕಾದ ಕನಿಷ್ಠ ವೇತನ ಮಿತಿ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳ ಅವಲಂಬಿತ ಕುಟುಂಬ ಸದಸ್ಯರಿಗೆ ಅವಕಾಶ ಕಡಿಮೆ ಮಾಡಲಾಗಿದೆ. ಪೋಸ್ಟ್ ಸ್ಟಡಿ ವರ್ಕ್ ಅವಕಾಶಗಳಲ್ಲಿಯೂ ಅನಿಶ್ಚಿತತೆ ಹೆಚ್ಚಾಗಿದೆ. ಇದರಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿದೆ.

ವಿರೋಧಿ ಮನೋಭಾವ ವ್ಯಕ್ತ!

ಕೆಲವರು ಸಾಮಾಜಿಕ ಕಾರಣಗಳನ್ನೂ ಉಲ್ಲೇಖಿಸುತ್ತಿದ್ದಾರೆ. ಇತ್ತೀಚೆಗೆ ಬ್ರಿಟನ್‌ನಲ್ಲಿ ವಲಸೆ ವಿರೋಧಿ ಮನೋಭಾವ ಹೆಚ್ಚುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕೆಲವು ವಲಸಿಗರು ತಮ್ಮ ಮೇಲೆ ಸಾಮಾಜಿಕ ಒತ್ತಡ ಹಾಗೂ ಅನಿಶ್ಚಿತತೆಯ ವಾತಾವರಣವಿದೆ ಎಂದು ಹೇಳುತ್ತಿದ್ದಾರೆ. ಲಂಡನಿಸ್ತಾನ ಎಂಬ ಪದ ಬಳಕೆಯ ಹಿನ್ನೆಲೆ ನಗರಗಳ ಜನಸಾಂಖ್ಯಿಕ ಬದಲಾವಣೆ ಮತ್ತು ಸಾಮಾಜಿಕ ಸಂಘರ್ಷಗಳ ಕುರಿತ ಚರ್ಚೆಗಳೇ ಕಾರಣ ಎನ್ನಲಾಗಿದೆ.

ವಿಶ್ಲೇಷಕರು ಹೇಳುವುದೇನು?

ಆದರೆ ಇದು ಭಾರತಕ್ಕೆ ಒಳ್ಳೆಯ ಅವಕಾಶವಾಗಬಹುದು ಎನ್ನುವ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಬ್ರಿಟನ್‌ನಲ್ಲಿ ಶಿಕ್ಷಣ ಪಡೆದು ಅಥವಾ ತಾಂತ್ರಿಕ ಅನುಭವ ಗಳಿಸಿ ಮರಳುತ್ತಿರುವ ಭಾರತೀಯರು ದೇಶದ ಸ್ಟಾರ್ಟ್‌ಅಪ್, ಟೆಕ್, ಹೆಲ್ತ್‌ಕೇರ್ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಹೊಸ ಶಕ್ತಿ ನೀಡಬಹುದು. ವಿಶೇಷವಾಗಿ ಬೆಂಗಳೂರು, ಹೈದರಾಬಾದ್, ಪುಣೆ, ಗುರುಗ್ರಾಮ್‌ಗಳಂತಹ ನಗರಗಳು ಈ ಪ್ರತಿಭಾವಂತರಿಗೆ ಹೊಸ ಅವಕಾಶಗಳನ್ನು ನೀಡುತ್ತಿವೆ.

ಆಗಲಿದೆಯೇ ಉದ್ಯಮ ಕ್ಷೇತ್ರಕ್ಕೆ ಹಿನ್ನೆಡೆ?

ಆರ್ಥಿಕ ತಜ್ಞರ ಪ್ರಕಾರ, ಬ್ರಿಟನ್‌ನ ಕಠಿಣ ವಲಸೆ ನೀತಿಗಳು ಅಲ್ಲಿನ ಉದ್ಯಮ ಕ್ಷೇತ್ರಕ್ಕೂ ಹಿನ್ನಡೆಯಾಗಬಹುದು. ಆರೋಗ್ಯ ಸೇವೆ, ನಿರ್ಮಾಣ, ಐಟಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತೀಯರ ಪಾತ್ರ ಮಹತ್ವದ್ದಾಗಿತ್ತು. ಭಾರತೀಯರ ವಾಪಸಿಯಿಂದ ಈ ಕ್ಷೇತ್ರಗಳಲ್ಲಿ ಕೌಶಲ್ಯ ಕೊರತೆ ಎದುರಾಗುವ ಸಾಧ್ಯತೆ ಇದೆ.

ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಬದಲಾವಣೆ!

ಭಾರತೀಯರ ಬ್ರಿಟನ್ ವಾಪಸಿ ಕೇವಲ ವಲಸೆ ಅಂಕಿಅಂಶವಲ್ಲ, ಇದು ಜಾಗತಿಕ ಉದ್ಯೋಗ ಮಾರುಕಟ್ಟೆಯ ಬದಲಾವಣೆ, ಆರ್ಥಿಕ ಒತ್ತಡ ಮತ್ತು ಹೊಸ ಅವಕಾಶಗಳತ್ತ ಸಾಗುತ್ತಿರುವ ಭಾರತೀಯ ಪ್ರತಿಭೆಗಳ ಹೊಸ ಅಧ್ಯಾಯವಾಗಿದೆ. ಭಾರತ ಇದನ್ನು ಸರಿಯಾಗಿ ಬಳಸಿಕೊಂಡರೆ, ಈ “ರಿವರ್ಸ್ ಮೈಗ್ರೇಶನ್” ದೇಶದ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed