Last Updated:
ಕನ್ನಡದಲ್ಲಿ ‘ಗೀಕ್’ ಅನ್ನುವ ಚಿತ್ರ ಬರ್ತಿದೆ. ಚೈತ್ರಾ ಆಚಾರ್ ಹಾಗೂ ಪ್ರವೀಣ್ ತೇಜ್ ಲೀಡ್ ಅಲ್ಲಿದ್ದಾರೆ. ಈ ಸಿನಿಮಾದ ಫಸ್ಟ್ ಟೀಸರ್ ಅನ್ನ ಕನ್ನಡದ 50 ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿಷಯ ಇಲ್ಲಿದೆ ಓದಿ.
ಚೈತ್ರಾ ಆಚಾರ್ (Chaithra Achar) ಹೊಸ ಸಿನಿಮಾದ ಶೀರ್ಷಿಕೆ ಇಂಟ್ರಸ್ಟಿಂಗ್ ಆಗಿದೆ. ಗೀಕ್ (Geek) ಅಂತಲೇ ಇದಕ್ಕೆ ಟೈಟಲ್ ಇದೆ. ಟೈಟಲ್ ಮೂಲಕವೇ ಇದು ಎಲ್ಲರಿಗೂ ಕುತೂಹಲ ಮೂಡಿಸುತ್ತಿದೆ. ಆದರೆ, ಇದರ ವಿಷಯವೂ ಅಷ್ಟೆ ಆಳವಾಗಿದೆ. ಇಲ್ಲಿವರೆಗೂ ಈ ಜಾನರ್ ಮೇಲೆ ಸಿನಿಮಾ ಬಂದಿಲ್ಲ ಅಂತ ಚಿತ್ರ ತಂಡವೂ ಹೇಳಿಕೊಂಡಿದೆ. ಅಸಲಿಗೆ ಈ ಟೈಟಲ್ ಮೀನಿಂಗ್ (Title Meaning) ಏನು? ಇದರಲ್ಲಿ ಇರೋ ವಿಷಯವಾದರೂ ಯಾವುದು? ಈ ಪ್ರಶ್ನೆಗಳಿಗೆ ಟೀಸರ್ (Teaser) ಒಂದು ಹಂತಕ್ಕೆ ಉತ್ತರ ಕೊಡುತ್ತದೆ. ಯಾರ ಪಾತ್ರ ಏನು ಅನ್ನೋದು ತಿಳಿಯುತ್ತದೆ. ಕನ್ನಡದ ಈ ಚಿತ್ರದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗೀಕ್ ಅಂದ್ರೆ ಏನು ಅನ್ನುವ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿದೆ. ಒಂದು ವಿಷಯದ ಮೇಲೆ ಆಳವಾದ ಜ್ಞಾನ ಹೊಂದಿರೋರನ್ನ ಗೀಕ್ ಅಂತಾರೆ. ಇನ್ನೂ ಒಂದು ಅರ್ಥ ಅಂದ್ರೆ ಅದು ಒಂದೇ ವಿಷಯದ ಬಗ್ಗೆ ಆಳವಾಗಿಯೇ ತಿಳಿದುಕೊಳ್ತಾನೇ ಹೋಗುವ ವ್ಯಕ್ತಿಯನ್ನು ಗೀಕ್ ಅಂತಲೇ ಕರೀತಾರೆ.
ಯಾವ ಹಂತಕ್ಕಿದೆ ಸಿನಿಮಾ
ಈ ಎಲ್ಲ ಮೀನಿಂಗ್ ಒಂದು ಹಂತಕ್ಕೆ ಆದರೆ, ಚಿತ್ರದ ಟೀಸರ್ ನೋಡಿದಾಗ ಗೀಕ್ ಅನ್ನುವ ಪದದ ಅರ್ಥವೇ ಬೇರೆ ಅನಿಸುತ್ತದೆ. ಸೈಬರ್ ಕ್ರೈಮ್ ಕಥೆಯ ಚಿತ್ರ ಇದು ಅನ್ನೋದು ತಿಳಿಯುತ್ತದೆ.
ಸೈಬರ್ ಕ್ರೈಮ್ ಜಾನರ್ ಕಥೆಯ ಚಿತ್ರ ಇದಾಗಿದೆ. ಡೈರೆಕ್ಟರ್ ಡಿ.ಹರಿ ಪ್ರಕಾಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.
ಆದರೆ, ಈ ಹಿಂದೆ ಕಿರುಚಿತ್ರಗಳನ್ನ ಮಾಡಿದ್ದಾರೆ. ಆ ಅನುಭವದ ಮೇಲೇನೆ ಈ ಗೀಕ್ ಚಿತ್ರ ಮಾಡಿದ್ದಾರೆ. ಮೂಲತಃ ಇವರು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ತಮ್ಮ ಲೋಕದಲ್ಲಿಯ ಗೀಕ್ ಕಥೆಯನ್ನ ಸಿನಿಮಾ ಮಾಡಿದಂತೆ ಇದೆ.
ಗೀಕ್ ಚಿತ್ರದಲ್ಲಿ ಅಸಲಿಗೆ ಇರೋ ಕಂಟೆಂಟ್ ಏನು ಅನ್ನೋದರ ಝಲಕ್ ಟೀಸರ್ ಅಲ್ಲಿದೆ. ಈ ಟೀಸರ್ ನೋಡಿದಾಗ ಗೀಕ್ ಮೀನಿಂಗ್ ಏನು ಅನ್ನೋದು ಅರ್ಥ ಆಗುತ್ತದೆ. ಇದರಲ್ಲಿ ಗೀಕ್ ಯಾರು ಅನ್ನುವ ಕುತೂಹಲವನ್ನು ಮೂಡಿಸುತ್ತದೆ.

ಗೀಕ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಶೂಟಿಂಗ್ ನಂತರದ ಕೆಲಸಗಳು ಇದೀಗ ನಡೆಯುತ್ತಿವೆ. ಇದರ ನಡುವೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಗೀಕ್ ಚಿತ್ರಕ್ಕೆ ಜೋ ಕೋಸ್ಟಾ ಸಂಗೀತ ಕೊಟ್ಟಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಆಪ್ಗಳು ಮತ್ತು ಜನರ ಫೋನ್ ಅಲ್ಲಿರೋ ಡಾಟಾ ದುರ್ಬಳಕೆಯ ಕಥಾಹಂದರ ಇದೆ.
ಅದಕ್ಕೇನೆ ಈ ಚಿತ್ರವನ್ನ ಸೈಬರ್ ಕ್ರೈಮ್ ಜಾನರ್ ಚಿತ್ರ ಅಂತ ಸಿನಿಮಾ ತಂಡವೇ ಹೇಳಿಕೊಂಡಿದೆ. ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಈ ಸಿನಿಮಾದಲ್ಲಿದ್ದಾರೆ.
ಇವರ ಈ ಚಿತ್ರದ ಕಂಟೆಂಟ್ ಸುಮಾರು ಜನಕ್ಕೆ ಇಷ್ಟವಾಗುವ ರೀತಿನೇ ಇದೆ. ಚಿತ್ರ ನೋಡಿದ್ಮೇಲೆ ಎಚ್ಚರಿಕೆಯನ್ನು ನೀಡುವಂತೆ ಇದೆ ಅನ್ನುವ ಅಭಿಪ್ರಾಯ ಟೀಸರ್ ನೋಡಿದಾಗ ಮೂಡುತ್ತದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













