LNG Tanker Disha: ಹಾರ್ಮುಜ್​​ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ, ಗುಜರಾತ್​ ತಲುಪಿದ ‘ದಿಶಾ’ / Strait of Hormuz Breakthrough: LNG Carrier ‘Disha’ Safely Arrives | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಾರ್ಮುಜ್​​ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ


Last Updated:

ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ, ಎಲ್‌ಎನ್‌ಜಿ ಹಡಗು ದಿಶಾ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದಿದೆ. ಎಲ್‌ಎನ್‌ಜಿ ಟ್ಯಾಂಕರ್ ಶುಕ್ರವಾರ ಬೆಳಿಗ್ಗೆ ಗುಜರಾತ್‌ನ ದಹೇಜ್ ಎಲ್‌ಎನ್‌ಜಿ ಟರ್ಮಿನಲ್‌ಗೆ ಆಗಮಿಸಿದೆ.

ಹಾರ್ಮುಜ್​​ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ
ಹಾರ್ಮುಜ್​​ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ

ಅಮೆರಿಕಾ-ಇರಾನ್ ಶಾಂತಿ ಒಪ್ಪಂದವಾದ (Iran US Peace Deal) ನಂತರ ಭಾರತಕ್ಕೆ ಮೊದಲ ಶುಭಸುದ್ದಿ (Good News) ಬಂದಿದೆ. ಅಂದ್ರೆ ಈ ಶಾಂತಿ ಒಪ್ಪಂದದ ನಂತರ ಹಾರ್ಮುಜ್​​ ಜಲಸಂಧಿಯಿಂದ ಬಂದ ಮೊದಲ ಪ್ರಮುಖ ಶುಭ ಸುದ್ದಿ ದಿಶಾ ಹಡಗಿನ (Disha Tanker) ಆಗಮನ. ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬಂದಿರುವ ಮೊದಲ LNG (Liquefied Natural Gas) ಹಡಗು ಇದು. ಮೂರು ತಿಂಗಳಿನಿಂದ ಕಾಯುತ್ತಿದ್ದ ಈ ಹಡಗು ಈಗ ಸುರಕ್ಷಿತವಾಗಿ ಭಾರತ ತಲುಪಿರುವುದು ದೇಶದ ಇಂಧನ ಭದ್ರತೆಗೆ ದೊಡ್ಡ ರಿಲೀಫ್​ ತಂದಿದೆ.

ದಿಶಾ ಎಂಬ ಈ LNG ವಾಹಕ ಹಡಗು ಜೂನ್ 15 ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿ, ಕೊನೆಗೂ ಗುಜರಾತ್‌ನ ಭರೂಚ್ ಜಿಲ್ಲೆಯ ದಹೇಜ್ LNG ಟರ್ಮಿನಲ್‌ಗೆ ಬಂದಿಳಿದಿದೆ.

ಗುಜರಾತ್​​ಗೆ ಬಂದ ‘ದಿಶಾ’!

ಹೌದು, ಎಲ್‌ಎನ್‌ಜಿ ಟ್ಯಾಂಕರ್ ‘ದಿಶಾ’, ಇದು ಮಾರ್ಚ್ 2 ರಂದು ಕತಾರ್‌ನ ರಾಸ್ ಲಫಾನ್ ಟರ್ಮಿನಲ್‌ನಿಂದ 62,370 ಮೆಟ್ರಿಕ್ ಟನ್ LNG ಹೊತ್ತು ಪ್ರಯಾಣ ಆರಂಭಿಸಿತ್ತು. ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಹಾರ್ಮುಜ್ ಜಲಸಂಧಿಯನ್ನು ಕೆಲವು ಕಾಲ ಮುಚ್ಚಲಾಗಿತ್ತು. ಅದರ ಪರಿಣಾಮವಾಗಿ, ಈ ಹಡಗು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿತ್ತು, ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ.

ದಿಶಾ ಹಡಗಿನಲ್ಲಿ ಇರುವ 62,370 ಮೆಟ್ರಿಕ್ ಟನ್ LNG ಅನ್ನು ಈಗ ದಹೇಜ್ ಟರ್ಮಿನಲ್‌ನಲ್ಲಿ ಇಳಿಸಿ ಸಂಗ್ರಹಿಸಲಾಗುತ್ತದೆ. ದಹೇಜ್ ಭಾರತದಲ್ಲಿನ ಅತಿದೊಡ್ಡ LNG ಆಮದು ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿಂದ ಈ ಅನಿಲವನ್ನು ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ. ಅಮೆರಿಕಾ-ಇರಾನ್ ತಣುವಿನ ನಡುವೆಯೂ ಹಾರ್ಮುಜ್ ಮಾರ್ಗವನ್ನು ದಾಟಿದ ಮೊದಲ ಭಾರತೀಯ LNG ಹಡಗುಗಳಲ್ಲಿ ದಿಶಾ ಒಂದಾಗಿದೆ ಎಂಬುದೂ ವಿಶೇಷ.

ಭಾರತ ಕಡೆಗೆ ಚಲಿಸಲು ಆರಂಭಿಸಿದ ಇತರೆ ಟ್ಯಾಂಕರ್​ಗಳು!

ಈ ಹಡಗು ಬಂದಿರುವುದು ಕೇವಲ ಒಂದು ಸರಕು ಸಾಗಣೆಯ ವಿಷಯ ಮಾತ್ರವಲ್ಲ, ಇನ್ನೂ ಒಂದು ದೊಡ್ಡ ಸಂಕೇತವೂ ಹೌದು. ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಇತರ ಭಾರತೀಯ ಹಡಗುಗಳು – LPG ಟ್ಯಾಂಕರ್‌ಗಳು, ತೈಲ ಹಡಗುಗಳು ಹಾಗೂ ಇತರ LNG ಟ್ಯಾಂಕರ್‌ಗಳು – ಈಗ ನಿಧಾನವಾಗಿ ಭಾರತ ಕಡೆಗೆ ಚಲಿಸಲು ಆರಂಭಿಸಿವೆ. ಇರಾನ್ ಯುದ್ಧ ಮತ್ತು ಉದ್ವಿಗ್ನತೆ ಹೆಚ್ಚಾದಾಗ ಹಾರ್ಮುಜ್ ಜಲಸಂಧಿಯನ್ನು ಬಹುತೇಕ ಮುಚ್ಚಿದಂತಾಯಿತು. ಇದರಿಂದ ಡಝನ್‌ಗಟ್ಟಲೆ ಹಡಗುಗಳು ಮಧ್ಯದಲ್ಲೇ ನಿಂತುಕೊಂಡಿದ್ದವು. ಅವುಗಳಲ್ಲಿ ಹಲವಾರು ಭಾರತೀಯ ಹಡಗುಗಳೂ ಇದ್ದವು. ಆದ್ದರಿಂದ ದಿಶಾ ಹಡಗಿನ ಸುರಕ್ಷಿತ ಆಗಮನವನ್ನು ಭಾರತಕ್ಕೆ ಬಂದಿರುವ ಮೊದಲ ದೊಡ್ಡ ಅನಿಲ ಸರಬರಾಜಾಗಿ ನೋಡಲಾಗುತ್ತಿದೆ.

ಹಾರ್ಮುಜ್ ಜಲಸಂಧಿಯಿಂದ ಶುಭ ಸುದ್ದಿ!

ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಮಹತ್ವದ ಸಮುದ್ರ ಮಾರ್ಗಗಳಲ್ಲಿ ಒಂದು. ವಿಶ್ವದ LNG ಪೂರೈಕೆಯ ಸುಮಾರು 20% ಈ ಮಾರ್ಗದ ಮೂಲಕವೇ ಸಾಗುತ್ತದೆ. ಆದರೆ US-ಇರಾನ್ ಸಂಘರ್ಷ, ಮಿಲಿಟರಿ ಉದ್ವಿಗ್ನತೆ ಹೆಚ್ಚಿದ ಕಾರಣದಿಂದ ಈ ಪ್ರದೇಶದಲ್ಲಿ ಹಡಗು ಸಂಚಾರ ತುಂಬಾ ಕಡಿಮೆಯಾಗಿತ್ತು. ಇದರಿಂದ ವಿಶ್ವದ ಅನೇಕ ದೇಶಗಳಿಗೆ, ವಿಶೇಷವಾಗಿ ಭಾರತಕ್ಕೆ, ಆತಂಕ ಉಂಟಾಗಿತ್ತು. ಭಾರತ ತನ್ನ LNG ಅಗತ್ಯದ ದೊಡ್ಡ ಭಾಗವನ್ನು ಗಲ್ಫ್ ದೇಶಗಳಾದ ಕತಾರ್, ಯುಎಇ ಮುಂತಾದ ದೇಶಗಳಿಂದಲೇ ಹಾರ್ಮುಜ್ ಜಲಸಂಧಿ ಮೂಲಕ ಆಮದು ಮಾಡಿಕೊಳ್ಳುತ್ತದೆ. ಕಳೆದ ಕೆಲವು ತಿಂಗಳಲ್ಲಿ ಹಡಗುಗಳು ಸಿಲುಕಿಕೊಂಡಿದ್ದರಿಂದ LNG ಪೂರೈಕೆ ಕಡಿಮೆಯಾಗಿತ್ತು. ಈಗ ಮತ್ತೆ ಹಳೆ ಕಾಲಕ್ಕೆ ಬಂದಂತಾಗಿದೆ.

ಈ ಹಿನ್ನೆಲೆಯಲ್ಲಿ, ದಿಶಾ ಟ್ಯಾಂಕರ್‌ನ ಬಿಡುಗಡೆ ಮತ್ತು ಆಗಮನ ಪರಿಸ್ಥಿತಿ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂಬ ಭರವಸೆಯನ್ನು ನೀಡುತ್ತಿದೆ. ಒಂದು ಅರ್ಥದಲ್ಲಿ, ದಿಶಾ ಹಡಗು ಇತರ ಸಿಲುಕಿಕೊಂಡಿರುವ ಹಡಗುಗಳಿಗೆ ‘ದಾರಿ ತೋರಿಸಿದಂತೆ’ ಆಗಿದೆ. ಮುಂದಿನ ದಿನಗಳಲ್ಲಿ ಅನಿಲ ಮತ್ತು ತೈಲದ ಪೂರೈಕೆ ಸ್ಥಿತಿ ಸುಧಾರಿಸಬಹುದು, ಬೆಲೆಗಳ ಒತ್ತಡ ಕಡಿಮೆಯಾಗಬಹುದು. ಭಾರತಕ್ಕೆ ಇದು ಆರ್ಥಿಕವಾಗಿಯೂ, ಇಂಧನ ಭದ್ರತೆಯ ದೃಷ್ಟಿಯಿಂದಲೂ ದೊಡ್ಡ ರೀತಿ ನೆಮ್ಮದಿ ತಂದಿರುವ ಬೆಳವಣಿಗೆಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed