Last Updated:
ಲೈಫ್ ಟುಡೇ ಚಿತ್ರದ ನಾಯಕಿ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಕಣ್ಣೀರಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಆದರೆ, ಇದರ ಹಿಂದೆ ಒಂದು ಎಮೋಷನಲ್ ವಿಷಯವು ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಲೈಫ್ ಟುಡೇ ಚಿತ್ರದ (Life Today Movie) ಟ್ರೈಲರ್ ರಿಲೀಸ್ ಇವೆಂಟ್ ನಡೆದಿತ್ತು. ಚಿತ್ರದ ನಾಯಕಿ (Heroine) ಮಾತ್ ಆಡ್ತಾನೇ ಎಮೋಷನಲ್ ಆದರು. ಈ ಚಿತ್ರದ ಕೆಲಸ ನಡೀತಾನೇ ಇತ್ತು. ಆ ಸಮಯದಲ್ಲಿ ನನ್ನ ತಂದೆಯನ್ನು ನಾನು ಕಳೆದುಕೊಂಡಿದ್ದೇನೆ. ಕಾರ್ಯ ಕೂಡ ಮಾಡಿರಲಿಲ್ಲ. ಆದರೂ ಸಿನಿಮಾ ಕೆಲಸದಲ್ಲಿಯೇ ಮಗ್ನಳಾದೆ. ಆದರೆ, ನನ್ನ ತಂದೆ ಪಾತ್ರ ಮಾಡಿದ್ದ ತಬಲಾ ನಾಣಿ (Tabala Nani) ಅವರಲ್ಲಿಯೇ ನನ್ನ ತಂದೆಯನ್ನ ನಾನು ಕಂಡಿದ್ದೇನೆ ಅಂತಲೇ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಹೀಗೆ ಎಮೋಷನಲ್ ಆದವರು ಬೇರೆ ಯಾರೋ ಅಲ್ಲ. ನಟಿ ಲೇಖಾ ಚಂದ್ರ (Lekha Chandra) ಇಲ್ಲಿ ಕಣ್ಣೀರಾದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.
ಲೈಫ್ ಟುಡೇ ಸಿನಿಮಾ ರೆಡಿ ಆಗಿದೆ. ಈ ಚಿತ್ರ ರೆಡಿ ಆಗಿ ಹೊರಗೆ ಬರೋ ನಾಲ್ಕು ವರ್ಷಗಳೆ ಆಗಿವೆ. 2022 ರಲ್ಲಿಯೇ ನಟಿ ಲೇಖ ಚಂದ್ರ ಈ ಚಿತ್ರ ಒಪ್ಪಿದ್ದಾರೆ.
ಅಪ್ಪನ ನೆನೆದು ಕಣ್ಣೀರಾದ ಲೇಖಾ
ಆದರೆ, ಈ ಚಿತ್ರ ರೆಡಿ ಆಗಿ ಹೊರಗೆ ಬರೋಕೆ ನಾಲ್ಕು ವರ್ಷಗಳೇ ಆಗಿವೆ. ಈ ಚಿತ್ರದ ಕೆಲಸದ ಸಮಯದಲ್ಲಿಯೇ ಲೇಖ ಚಂದ್ರ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಕಾರ್ಯ ಕೂಡ ಮಾಡದೇನೆ ಲೇಖ ಚಂದ್ರ ಚಿತ್ರೀಕರಣದಲ್ಲೂ ಭಾಗಿ ಆಗಿದ್ದಾರೆ. ಚಿತ್ರದ ತಂದೆಯ ಪಾತ್ರಧಾರಿ ತಬಲಾ ನಾಣಿ ಅವರಲ್ಲಿ ತಮ್ಮ ತಂದೆಯನ್ನು ಕಂಡಿದ್ದಾರೆ.
ಲೇಖಾ ಚಂದ್ರ ತಮ್ಮ ತಂದೆಯನ್ನ ನೆನೆದು ಕಣ್ಣೀರಾಗಿದ್ದಾರೆ. ತಬಲಾ ನಾಣಿ ಅವರಲ್ಲಿಯೇ ನನ್ನ ತಂದೆಯನ್ನು ಕಂಡಿದ್ದೇನೆ ಅಂತಲೂ ಲೇಖಾ ಚಂದ್ರ ಹೇಳಿಕೊಂಡಿದ್ದಾರೆ.
ತಬಲಾ ನಾಣಿ ಕೂಡ ಲೇಖ ಚಂದ್ರ ಅವರು ನೋವಿನ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಸೀನ್ ಮಾಡ್ತಾ ಇದ್ದರು. ಆಗ ನಾನು ಧೈರ್ಯ ತುಂಬುತ್ತಿದ್ದೆ. ಆಗ ಮತ್ತೆ ರೆಡಿ ಆಗ್ತಾ ಇದ್ದಳು. ಸೀನ್ ಮುಗಿಸಿದ ಕೂಡಲೇ ಮತ್ತೆ ಹಾಗೆ ಸಪ್ಪಗೆ ಕುಳಿತು ಬಿಡ್ತಾ ಇದ್ದಳು ಅನ್ನೊದನ್ನ ತಬಲಾ ನಾಣಿ ಇಲ್ಲಿ ಹೇಳಿಕೊಂಡಿದ್ದಾರೆ.
ಲೈಫ್ ಟುಡೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಲೇಖಾ ಚಂದ್ರ ಕಣ್ಣೀರಾಗಿದ್ದಾರೆ. ಎಮೋಷನಲ್ ಆಗಿಯೇ ತಂದೆಯನ್ನ ನೆನೆದಿದ್ದಾರೆ.
ಚಿತ್ರ ಆಗಸ್ಟ್-6 ರಂದು ರಿಲೀಸ್
ಇನ್ನು ಚಿತ್ರದ ವಿಚಾರಕ್ಕೆ ಬರೋದಾದ್ರೆ, ಲೈಫ್ ಟುಡೇ ಚಿತ್ರವನ್ನ ಕಾಂತ ಕನ್ನಳ್ಳಿ ಡೈರೆಕ್ಷನ್ ಮಾಡಿದ್ದಾರೆ. ಕಿರಣ್ ಆದಿತ್ಯ ಈ ಚಿತ್ರದ ನಾಯಕರಾಗಿದ್ದಾರೆ. ಇವರೇ ಈ ಚಿತ್ರದ ಕತೆಯನ್ನ ಬರೆದಿದ್ದಾರೆ.
ಕಾಂತ ಕನ್ನಳ್ಳಿ ಅವರ ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ ಸಂಗೀತ ಕೊಟ್ಟಿದ್ದಾರೆ. ಗುರುಪ್ರಸಾದ್ ಎಂ.ಜಿ. ಕ್ಯಾಮರಾವರ್ಕ್ ಮಾಡಿದ್ದಾರೆ.
ಈ ಚಿತ್ರದ ಟ್ರೈಲರ್ ವಿಷಯಕ್ಕೆ ಬರೋದಾದ್ರೆ, ಇದು ಪ್ರೀತಿಯ ಕತೆ ಹೇಳುತ್ತದೆ. ಪ್ರೀತಿಯಲ್ಲಿ ಬಿದ್ದ ಯುವತಿ ಮದುವೆ ಅಂತ ಬಂದಾಗ ಅವಳ ಮನಸ್ಥಿತಿ ಹೇಗಿರುತ್ತದೆ ಅನ್ನೋ ವಿಷಯ ಇಲ್ಲಿ ರಿವೀಲ್ ಆಗಿದೆ.
ಸೆಟಲ್ ಆದ ಹುಡುಗನನ್ನ ಮದುವೆ ಆಗಬೇಕೋ, ಪ್ರೀತಿಸಿದ ಒಳ್ಳೆ ಮನಸ್ಸಿನ ಹುಡುಗನ್ನ ವಿವಾಹ ಆಗ್ಬೇಕು ಅನ್ನುವ ದೃಶ್ಯದ ಒಂದು ತುಣಕು ಕೂಡ ಈ ಟ್ರೈಲರ್ ಅಲ್ಲಿ ರಿವೀಲ್ ಆಗಿದೆ. ಹಾಗೆ ಈ ಚಿತ್ರ ಆಗಸ್ಟ್-6 ರಂದು ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














