KSRTC: ಪ್ರಕೃತಿಯ ನಡುವೆ ಚಿಲ್ಲಿಂಗ್‌ ಪಯಣ, ಬೆಳಿಗ್ಗೆ ಮಂಜುನಾಥನ ದರ್ಶನ; ರಾಜ್ಯದ ಅತ್ಯಂತ ಮನೋಹರ ರಸ್ತೆ ಮಾರ್ಗದಲ್ಲಿ ನೂತನ ಬಸ್‌ ಸೇವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನೂತನ ಬಸ್‌ ಸೇವೆ


Last Updated:

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗವು ಬೆಂಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮಾರ್ಗಕ್ಕೆ ಮೈಸೂರು ಕೊಡಗು ಬಿಸಿಲೆ ಘಾಟ್ ಮೂಲಕ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ, ಆನ್‌ಲೈನ್ ಬುಕ್ಕಿಂಗ್ ಲಭ್ಯ

ನೂತನ ಬಸ್‌ ಸೇವೆ
ನೂತನ ಬಸ್‌ ಸೇವೆ

ಬೆಂಗಳೂರು: ನೀವೂ ಬೆಂಗಳೂರಿನಿಂದ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಕೆಎಸ್‌ಆರ್‌ಟಿಸಿ (KSRTC) ಕಡೆಯಿಂದ ಸಿಕ್ಕಾಪಟ್ಟೆ ಖುಷಿ ಕೊಡುವ ಸುದ್ದಿಯೊಂದು (News) ಇಲ್ಲಿದೆ. ಹೌದು, ಭಕ್ತರು ಹಾಗೂ ಪ್ರವಾಸಿಗರ ಬಹುದಿನಗಳ ಬೇಡಿಕೆಗೆ ಮಣಿದಿರುವ ಸಾರಿಗೆ ನಿಗಮವು ಇದೀಗ ಈ ಮಾರ್ಗದಲ್ಲಿ ಭರ್ಜರಿ ನಾನ್-ಎಸಿ ಸ್ಲೀಪರ್ (Non-AC Sleeper) ಬಸ್ ಸೇವೆಯನ್ನು ಆರಂಭಿಸಿದೆ! ಕೇವಲ ಬೆಂಗಳೂರು (Bengaluru) ಮಾತ್ರವಲ್ಲದೆ, ಮೈಸೂರು, ಕೊಡಗು ಹಾಗೂ ಕರಾವಳಿ ಭಾಗದ ಜನರಿಗೂ ಇದು ಬಂಪರ್ ಆಫರ್ ಆಗಿದ್ದು, ಬುಧವಾರದಿಂದಲೇ ಈ ಸೇವೆ ಅಧಿಕೃತವಾಗಿ ಶುರುವಾಗಿದೆ.

ಹೇಗಿದೆ ಗೊತ್ತಾ ಈ ಹೊಸ ಬಸ್‌ನ ರೂಟ್ ಮ್ಯಾಪ್?

ಈ ಹೊಸ ಸ್ಲೀಪರ್ ಬಸ್ ಕೇವಲ ರಸ್ತೆಯಲ್ಲ, ಪ್ರಕೃತಿಯ ಮಡಿಲಲ್ಲಿ ಸಾಗಲಿದೆ! ಮೈಸೂರು ಮತ್ತು ಕೊಡಗು ಮಾರ್ಗವಾಗಿ ಸಾಗುವ ಈ ಬಸ್ಸು, ಸೋಮವಾರಪೇಟೆ, ಶನಿವಾರಸಂತೆ ಹಾಗೂ ಅತ್ಯಂತ ಸುಂದರವಾದ ಬಿಸಿಲೆ ಘಾಟ್ ಮೂಲಕ ಹಾದುಹೋಗಲಿದೆ. ಕೊಡಗು ಭಾಗದ ಜನರಿಗೆ ಕರಾವಳಿಯ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಇದುವರೆಗೆ ಯಾವುದೇ ನೇರ ಸ್ಲೀಪರ್ ಬಸ್ ಇರಲಿಲ್ಲ. ಆ ಕೊರತೆಯನ್ನು KSRTC ಯ ಪುತ್ತೂರು ವಿಭಾಗವು ಈಗ ನೀಗಿಸಿದ್ದು, ಆರಾಮದಾಯಕ ಪ್ರಯಾಣಕ್ಕೆ ದಾರಿ ಮಾಡಿಕೊಟ್ಟಿದೆ.

ಬಸ್‌ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಧರ್ಮಸ್ಥಳದಿಂದ ಬೆಂಗಳೂರಿನ ಕಡೆಗೆ:

ಬೆಳಗ್ಗೆ 6:30: ಧರ್ಮಸ್ಥಳದಿಂದ ಬಸ್ ಹೊರಡಲಿದೆ. ಬೆಳಗ್ಗೆ 8:00: ಕುಕ್ಕೆ ಸುಬ್ರಹ್ಮಣ್ಯದಿಂದ ನಿರ್ಗಮನ. ಬೆಳಗ್ಗೆ 8:50: ಬಿಸಿಲೆ ಘಾಟ್. ಬೆಳಗ್ಗೆ 9:35: ಶನಿವಾರಸಂತೆ. ಬೆಳಗ್ಗೆ 10:30: ಸೋಮವಾರಪೇಟೆ. ಮುಂದಿನ ಮಾರ್ಗ: ಕುಶಾಲನಗರ, ಮೈಸೂರು ಮುಖಾಂತರ ಬೆಂಗಳೂರು ತಲುಪಲಿದೆ.
ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ

ರಾತ್ರಿ 9:45: ಬೆಂಗಳೂರಿನ ಮೆಜೆಸ್ಟಿಕ್ (Kempegowda Bus Station) ನಿಂದ ನಿರ್ಗಮನ. ಮಾರ್ಗ: ರಾತ್ರಿಯಿಡೀ ಮೈಸೂರು, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಕೂಡುರಸ್ತೆ, ಬಿಸಿಲೆ ಘಾಟ್ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಪ್ರಯಾಣ. ಬೆಳಗ್ಗೆ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮನ.

ಟಿಕೆಟ್ ಎಲ್ಲಿ ಮತ್ತು ಹೇಗೆ ಬುಕ್ ಮಾಡಬೇಕು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed