Last Updated:
ಬಾಲಿವುಡ್ ನಟಿ ಕೃತಿ ಸನನ್ ರಕ್ಷಾಬಂಧನ ಹಬ್ಬದ ಆಭರಣ ಜಾಹೀರಾತಿನಲ್ಲಿ ವೆಸ್ಟರ್ನ್ ಡ್ರೆಸ್ನಲ್ಲಿ ಮಾಧಕವಾಗಿ ಕಾಣಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಆಗಿದ್ದಾರೆ.
ನಟಿ ಕೃತಿ ಸನನ್ ರಕ್ಷಾಬಂಧನ (Raksha Bandhan) ಹಬ್ಬದ ಆಭರಣ ಜಾಹೀರಾತಿನಲ್ಲಿ (GIVA) ವೆಸ್ಟರ್ನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಆಗಿದ್ದಾರೆ. ಸಾಂಪ್ರದಾಯಿಕ ರಾಖಿ ಹಬ್ಬದ ಜಾಹೀರಾತಿನಲ್ಲಿ ಕೃತಿ ಸನೊನ್ ಅವರು ಆಫ್-ವೈಟ್ ಬಣ್ಣದ ಬ್ರ್ಯಾಲೆಟ್ ಮಾದರಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿದ್ದರು. ಕೌಟುಂಬಿಕ ಮತ್ತು ಸಾಂಪ್ರದಾಯಿಕ ಹಬ್ಬಕ್ಕೆ ಇಂತಹ ‘ಅತಿಯಾದ ಗ್ಲಾಮರಸ್’ ಹಾಗೂ ರಿವೀಲಿಂಗ್ ಉಡುಪು ಸೂಕ್ತವಲ್ಲ, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.














