Last Updated:
ಪ್ರಕರಣದ ಬಗ್ಗೆ ಮೌನವಾಗಿದ್ದ ಅರವಿಂದ್ ರೆಡ್ಡಿ ಇದೀಗ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ನಟಿ ಕೃಷಿ ತಾಪಂಡ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ (Sandalwood) ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿರುವ ಉದ್ಯಮಿ ವೈಶಾಖ್ (Vaishakh) ಸಾವಿನ ಪ್ರಕರಣದ ಬಳಿಕ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದವು. ಈ ಪ್ರಕರಣದ ಸಂಬಂಧ ನಟಿ ಕೃಷಿ ತಾಪಂಡ (Actress Krishi Thapanda) ಅವರ ಹೆಸರೂ ಸುದ್ದಿಯಲ್ಲಿತ್ತು. ಈ ಬೆಳವಣಿಗೆಗಳ ನಡುವೆ ಉದ್ಯಮಿ ಹಾಗೂ ಸ್ಯಾಂಡಲ್ವುಡ್ ನಿರ್ಮಾಪಕ ಅರವಿಂದ್ ರೆಡ್ಡಿ (Arvind Reddy) ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿ, ಈ ವಿಚಾರದಲ್ಲಿ ಇನ್ನು ಮುಂದೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೇ ನಟಿ ಕೃಷಿ ತಾಪಂಡ ವಿಚಾರವಾಗಿ ಅರವಿಂದ್ ರೆಡ್ಡಿ ಹೆಸರು ಕೇಳಿಬಂದಿತ್ತು. ಹೀಗಿರುವಾಗ ಈ ಪ್ರಕರಣದ ಬಗ್ಗೆ ಮೌನವಾಗಿದ್ದ ಅರವಿಂದ್ ರೆಡ್ಡಿ ಇದೀಗ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ನಟಿ ಕೃಷಿ ತಾಪಂಡ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕುರಿತ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ , ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ರೆಡ್ಡಿ, ಕೃಷಿ ತಾಪಂಡ ನನ್ನ ಜೀವನಕ್ಕೆ ಬರೋದು ಬೇಡ. ನಾನು ಬದುಕಬೇಕು ಅಂತ ಇದ್ದೇನೆ, ಸಾಯೋದಕ್ಕೆ ಇಷ್ಟ ಇಲ್ಲ. ಈಗ ನಾನು ಬದುಕಿದ್ದೇ ನನಗೆ ಖುಷಿ. ಈ ವಿಷಯದ ಬಗ್ಗೆ ನಾನು ಯಾಕೆ ಮಾತಾಡಬೇಕು? ಎಂದು ಹೇಳಿದ್ದಾರೆ.
ಇತ್ತೀಚೆಗೆ ನಟಿ ಕೃಷಿ ತಾಪಂಡ ಅವರ ಆರ್.ಆರ್. ನಗರದ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ವೈಶಾಖ್ (45) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಸ್ಯಾಂಡಲ್ವುಡ್ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಳಿಕ ವೈಶಾಖ್ ಅವರ ಪತ್ನಿ ನೀಡಿದ ದೂರಿನಲ್ಲಿ ನಟಿ ಕೃಷಿ ತಾಪಂಡ ಅವರ ಹೆಸರೂ ಉಲ್ಲೇಖವಾಗಿದ್ದರಿಂದ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸದ್ಯ ಈ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಸತ್ಯಾಂಶಗಳು ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಸ್ಪಷ್ಟವಾಗಬೇಕಿದೆ. ಈ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.
ಅರವಿಂದ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಜೊತೆಗೆ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕರು ಸಹ ಆಗಿದ್ದಾರೆ. ಉದ್ಯಮಿಯಷ್ಟೇ ಅಲ್ಲ ಈತ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಕೆಲ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕೊಡಗು ಮೂಲದ ಕೃಷಿ ತಾಪಂಡ ತಮ್ಮ ವೃತ್ತಿಜೀವನವನ್ನು ಮಾಡೆಲ್ ಆಗಿ ಆರಂಭಿಸಿದರು. 2014ರಲ್ಲಿ ಮಿಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಆ ಬಳಿಕ ನಟಿಯ ಸಿನಿ ಜರ್ನಿ ಹಂತ ಹಂತವಾಗಿ ಆರಂಭವಾಯಿತು.
ಕೃಷಿ ತಾಪಂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕಹಿ ಚಿತ್ರದ ಮೂಲಕ. ಈ ಸಿನಿಮಾ ಮೂಲಕ ಅವರು ಸಿನಿ ಪ್ರೇಕ್ಷಕರ ಗಮನ ಸೆಳೆದರು. ಬಳಿಕ 2016ರಲ್ಲಿ ಬಿಡುಗಡೆಯಾದ ಅಕಿರ ಸಿನಿಮಾ ಕೃಷಿ ತಾಪಂಡ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರವಾಗಿದೆ.
Bangalore [Bangalore],Bangalore,Karnataka
Jul 30, 2026 11:45 AM IST














