Last Updated:
Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಸುದ್ದಿಯಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳೋ ಮೊದಲೇ ವೈಶಾಖ್ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದೆ.ನ
ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಹಾಗೂ ಅವರ ಲವ್ ರಿಲೇಷನ್ಶಿಪ್ (Relationship) ಸಂಬಂಧ ಇತ್ತೀಚೆಗೆ ಸುದ್ದಿಯಾದ ನಂತರ ಈಗ ಅವರಿಗೆ ವೈಶಾಖ್ (Vaishakh) ಎನ್ನುವ ಉದ್ಯಮಿ ಜೊತೆ ಸಂಬಂಧವಿರುವ ಸಂಗತಿ ರಿವೀಲ್ ಆಗಿದೆ. ವೈಶಾಖ್ ಅವರು ಉದ್ಯಮಿಯಾಗಿದ್ದು ಅವರು ಕೃಷಿ ತಾಪಂಡ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿ ಕೃಷಿ ತಾಪಂಡ ಅವರ ಆರ್ಆರ್ ನಗರ ಫ್ಲಾಟ್ನಲ್ಲಿ ವೈಶಾಖ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೈಶಾಖ್ ಪತ್ನಿಯ ಜೊತೆ ಒಂದು ತಿಂಗಳಿನಿಂದ ಮಾತು ಬಿಟ್ಟಿದ್ದ ಎನ್ನಲಾಗಿದ್ದು ಸ್ವಲ್ಪ ದಿನದಿಂದ ಕೃಷಿ ತಾಪಂಡ ಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಾಯುವ ಮುನ್ನ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದ್ದು, ಲಾಸ್ಟ್ ಕಾಲ್ನಲ್ಲಿ ನಡೆದ ಮಾತುಕತೆ ಏನು?
ಜೂನ್ 24ರಂದು ನಟಿ ಮನೆಯಲ್ಲಿ ಇರಲಿಲ್ಲ. ವೈಶಾಖ್ ನಟಿಯ ಮನೆಯಲ್ಲೇ ಇದ್ದ. ರಾತ್ರಿ ಕಾಲ್ ಮಾಡಿ ತಾನು ಸಾಯುತ್ತೇನೆ ಎಂದು ಹೇಳಿಕೊಂಡಿದ್ದ. ನಟಿ ಕೃಷಿ ತಾಪಂಡ ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ರಾತ್ರಿ 8:30 ರ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.
ಎಲಿಗೆಂಟ್ ಟೆರೆಸ್ಸ್ ಅಪಾರ್ಟ್ ಮೆಂಟ್ ನಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿ ಸೂಸೈಡ್ ಮಾಡಿಕೊಂಡಿರುವುದು ಗೊತ್ತಾಗಿದೆ. ನಾಲ್ಕನೇ ಮಹಡಿಯ ರೂಂ 401 ರಲ್ಲಿ ಆತ್ಮಹತ್ಯೆ ಮಾಡಿದ್ದು ಆತ್ಮಹತ್ಯೆ ವೇಳೆ ಕೃಷಿ ತಪಾಂಡ ಅಪಾರ್ಟ್ ಮೆಂಟ್ ನಲ್ಲಿ ಇರಲಿಲ್ಲ ಎನ್ನಲಾಗಿದೆ. ಸದ್ಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನನಗೆ ಜೀವನವೇ ಸಾಕಾಗಿದೆ. ನಂಗೆ ಬದುಕೋಕೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಯಲಹಂಕದಲ್ಲಿದ್ದ ಕೃಷಿ ತಪಂಡ ಅವರು ಮನೆಯಲ್ಲಿರಲಿಲ್ಲ. ಅವರು ಯಲಹಂಕದಲ್ಲಿದ್ದಾಗ ನಿನ್ನೆ ಸಂಜೆ ಮೆಸೇಜ್ ಮಾಡಿ ವೈಶಾಖ್ ನೋವು ಹೇಳಿಕೊಂಡಿದ್ದರು.
ಆ ರೀತಿ ಮಾಡ್ಕೋಬೇಡ ಎಂದು ಧೈರ್ಯ ಹೇಳಿದ್ದ ನಟಿ ಬರುತ್ತೇನೆ. ಬರೋವರೆಗೂ ಇರು ಎಂದಿದ್ದರು. ಇಬ್ಬರೂ ಕುಕ್ಕೇ ಸುಬ್ರಮಣ್ಯ ಹೋಗೋಣ. ದೇವಸ್ಥಾನಕ್ಕೆ ಹೋಗಿ ಬರೋಣ ಮನಸ್ಸು ಹಗುರ ಮಾಡಿಕೋ ಎಂದಿದ್ದರು ಎನ್ನಲಾಗಿದೆ. ಅದಕ್ಕೆ ವೈಶಾಖ್ ಓಕೆ ಎಂದು ಹೇಳಿದ್ದರು. ಆದರೆ ಕೃಷಿ ತಪಂಡ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೃಷಿ ಮನೆಗೆ ಹೋಗಿದ್ದ ವೈಶಾಖ್ ಮನೆಯಲ್ಲಿ ಯಾರೂ ಇಲ್ಲದಾಗ ವೈಶಾಖ್ ಭೇಟಿ ನೀಡುತ್ತಿದ್ದರು. ಕೃಷಿ ಮನೆಗೆ ಹೋಗಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾಗಿ ತಿಳಿದು ಬಂದಿದೆ. ವೈಶಾಖ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಆರ್.ಆರ್ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು
Bangalore [Bangalore],Bangalore,Karnataka
Jun 25, 2026 12:30 PM IST













