Krishi Thapanda: ನಟಿ ಮನೆಯಲ್ಲೇ ಉದ್ಯಮಿ​ ಆತ್ಮಹತ್ಯೆ, ಕೃಷಿ ತಾಪಂಡ ವಿರುದ್ಧ ದೂರು ಕೊಟ್ರಾ ವೈಶಾಕ್ ಪತ್ನಿ? | | ACTPnews

News18


Last Updated:

ವಾರಗಳಿಂದ ನಟಿಯ ಅಪಾರ್ಟ್​​ಮೆಂಟ್​​ನಲ್ಲೇ ಇದ್ದ ಉದ್ಯಮಿ ವೈಶಾಕ್​ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್​ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾರ ವಿರುದ್ಧ ದಾಖಲಾಗಿದೆ ಕೇಸ್?

News18
News18

ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಗೆಳೆಯ ಹಾಗೂ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಟಿ ಕೃಷಿ ತಾಪಂಡ ಅವರಿಗೆ ಸೇರಿದ ಅಪಾರ್ಟ್​​ಮೆಂಟ್​​ನಲ್ಲಿ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕೃಷಿ ವಿರುದ್ಧ ದೂರು ಕೊಟ್ರಾ ವೈಶಾಕ್ ಪತ್ನಿ? 

ವಾರಗಳಿಂದ ನಟಿಯ ಅಪಾರ್ಟ್​​ಮೆಂಟ್​​ನಲ್ಲೇ ಇದ್ದ ಉದ್ಯಮಿ ವೈಶಾಕ್​ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್​ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ವೈಶಾಕ್ ಕುಟುಂಬದಿಂದಲೂ ಲಿಖಿತ ದೂರು ದಾಖಲಾಗಿದೆ. ವೈಶಾಕ್ ಪತ್ನಿ ಕೂಡ ದೂರು ನೀಡಿದ್ದಾರೆ ಎನ್ನಲಾಗ್ತಿದೆ.

ಲಿಖಿತ ದೂರು ಕೊಟ್ಟ ಕುಟುಂಬಸ್ಥರು

ವೈಶಾಕ್ ತಂದೆ ಮಗನ ಆತ್ಮಹತ್ಯೆ ಎಂದು ಲಿಖಿತ ದೂರು ನೀಡಿದ್ದಾರೆ. ಸದ್ಯಕ್ಕೆ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎಂದು ತಿಳಿದು ಬಂದಿದೆ. ದೂರಿನ ಬಳಿಕ ಕೇಸ್ ದಾಖಲು ಮಾಡಿಕೊಂಡ ರಾಜರಾಜೇಶ್ವರಿ ನಗರ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.

ಯುಡಿಆರ್ ದಾಖಲಿಸಿದ ಪೊಲೀಸರು

ಏನು ದೂರು ಕೊಡ್ತಾರೆ ಅನ್ನೋದರ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಕೃಷಿ ತಾಪಂಡ ಗೆಳೆಯ ವೈಶಾಕ್ ಆತ್ಮಹತ್ಯೆ ಕೇಸ್​ನಲ್ಲಿ ಈಗಾಗಲೇ ಯುಡಿ ಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈಶಾಕ್​​ ಪತ್ನಿ ನೀಡಿರುವ ದೂರಿನ ಮೇರೆಗೆ ಯುಡಿಆರ್ ದಾಖಲಿಸಲಾಗಿದೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed