KKR vs MI: ಕೆಕೆಆರ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ಮುಂಬೈ! ರಹಾನೆ ಪಡೆಗೆ ಸಾಧಾರಣ ಮೊತ್ತ ನೀಡಿದ ಎಂಐ | ಕ್ರೀಡಾ ಸುದ್ದಿ | ACTPnews

ಕೋಲ್ಕತ್ತಾ ನೈಟ್ ರೈಡರ್ಸ್


Last Updated:

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್ಸ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕೆಕೆಆರ್ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ.

ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್

ಐಪಿಎಲ್ (IPL) 2026 ರ 65ನೇ ಪಂದ್ಯ (Match) ವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಈಡನ್ ಗಾರ್ಡನ್ಸ್‌ (Eden Gardens) ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಕೆಕೆಆರ್ ನಾಯಕ ಅಜಿಂಕ್ಯ ರಹಾನೆ (Ajinkya Rahane) ಟಾಸ್ ಗೆದ್ದು ಮೊದಲು ಬೌಲಿಂಗ್ (Bowling) ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ (Batting) ಮಾಡಲು ಬಂದ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಕೆಟ್ಟ ಆರಂಭವನ್ನು ಕಂಡಿತು. ಪವರ್‌ಪ್ಲೇ (Powerplay) ಒಳಗೆ, ಮುಂಬೈ ಇಂಡಿಯನ್ಸ್‌ನ ಟಾಪ್-4 ಬ್ಯಾಟರ್​​ಗಳು ಪೆವಿಲಿಯನ್‌ಗೆ ಮರಳಿದರು. ಮುಂಬೈ ತಂಡವನ್ನು ಹಿನ್ನಡೆಯಲ್ಲಿಡುವಲ್ಲಿ ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಪ್ರಮುಖ ಪಾತ್ರ ವಹಿಸಿದರು.

ಕೆಕೆಆರ್​ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯಿಂದಾಗಿ ಮುಂಬೈ ತತ್ತರಿಸಿತು. ಪರಿಣಾಮ ಮುಂಬೈ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಿತು. ಈ ಪಂದ್ಯವು ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಮುಂಬೈ ನೀಡಿರುವ 148 ರನ್​​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ಮೂಲಕ ಕೆಕೆಆರ್ ಪ್ಲೇಆಫ್ ರೇಸ್‌ನಲ್ಲಿ ಉಳಿಯುವ ವಿಶ್ವಾಸದಲ್ಲಿದೆ.

ಮುಂಬೈ ಇನ್ನಿಂಗ್ಸ್ ಹೈಲೈಟ್ಸ್

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಇನ್ನಿಂಗ್ಸ್ ಕಳಪೆ ಆರಂಭ ಪಡೆಯಿತು. ಮುಂಬೈ ಕೇವಲ 41 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ರಯಾನ್ ರಿಕಲ್ಟನ್ (6), ರೋಹಿತ್ ಶರ್ಮಾ (15), ನಮನ್ ಧೀರ್ (0), ಮತ್ತು ಸೂರ್ಯಕುಮಾರ್ ಯಾದವ್ (15) ಔಟಾದರು.

ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಮುಂಬೈ ತಂಡಕ್ಕೆ ತಿಲಕ್ ವರ್ಮಾ (20) ಮತ್ತು ಹಾರ್ದಿಕ್ ಪಾಂಡ್ಯ (26) ಸ್ವಲ್ಪಮಟ್ಟಿಗೆ ಆಸರೆಯಾದರು. ಆದರೆ ಆ ಹೊತ್ತಿಗೆ ಮುಂಬೈ ತಂಡದ ಪರಿಸ್ಥಿತಿ ಹದಗೆಟ್ಟಿತ್ತು. ವಿಲ್ ಜ್ಯಾಕ್ಸ್ ತಂಡಕ್ಕೆ ವೇಗವಾಗಿ ರನ್ ಗಳಿಸಿದರು. ಆದರೆ ಅವರು 14 ರನ್ ಗಳಿಸಿ ರನೌಟಾದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports