Last Updated:
ಕೇವಲ ಔಪಚಾರಿಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್‌ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. 204 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 18.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 163 ರನ್ಗಳಿಗೆ ಆಲೌಟ್ ಆಗುವ ಮೂಲಕ 40 ರನ್‌ಗಳ ಹೀನಾಯ ಸೋಲು ಕಂಡಿತು.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2026 ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ 40 ರನ್‌ಗಳ ಅಂತರದಲ್ಲಿ ಮಣಿಸಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಇದು ಡೆಲ್ಲಿ ತಂಡಕ್ಕೆ 7ನೇ ಜಯವಾಗಿದ್ದು, 14 ಅಂಕಗಳೊಂದಿಗೆ 6ನೇ ಸ್ಥಾನಿಯಾಗಿ 19ನೇ ಆವೃತ್ತಿಗೆ ಗುಡ್‌ಬೈ ಹೇಳಿದೆ. ಕೇವಲ ಔಪಚಾರಿಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್‌ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. 204 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 18.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 163 ರನ್ಗಳಿಗೆ ಆಲೌಟ್ ಆಗುವ ಮೂಲಕ 40 ರನ್‌ಗಳ ಹೀನಾಯ ಸೋಲು ಕಂಡಿತು. ಕೆಕೆಆರ್ 14 ಪಂದ್ಯಗಳಲ್ಲಿ 7ನೇ ಸೋಲಿನೊಂದಿಗೆ 13 ಅಂಕಪಡೆದು 2026ರ ಆವೃತ್ತಿಯನ್ನ 7ನೇ ಸ್ಥಾನದಲ್ಲಿ ಕೊನೆಗಾಣಿಸಿತು.
204 ರನ್‌ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ ವಿಕೆಟ್‌ಗೆ 43 ರನ್‌ಗಳ ಉತ್ತಮ ಜೊತೆಯಾಟ ಸಾಧಿಸಿತು. ಫಿನ್ ಅಲೆನ್ 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 20 ರನ್‌ಗಳಿಸಿ ಲುಂಗಿ ಎನ್ಗಿಡಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ನಂತರ ಬಂದ ಕಳೆದ ಪಂದ್ಯದ ಹೀರೋ ಕನ್ನಡಿಗ ಮನೀಶ್ ಪಾಂಡೆ 16 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್‌ಗಳ ಸಹಿತ 25 ರನ್‌ಗಳಿಸಿ ಅವರೂ ಕೂಡ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ಪಾಂಡೆ ಬೆನ್ನಲ್ಲೇ ಬಂದ 25 ಕೋಟಿ ಆಟಗಾರ ಕ್ಯಾಮರೂನ್ ಗ್ರೀನ್ ಕೇವಲ 3 ಎಸೆತಗಳಲ್ಲಿ 2 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಒಂದಾದ ನಾಯಕ ರಹಾನೆ ಹಾಗೂ ರೋವ್ಮನ್ ಪೊವೆಲ್ 32 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ 39 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ 4 ಸಿಕ್ಸರ್ಗಳಿಸಿದ್ದ ರಹಾನೆ ವಿಕೆಟ್ ಪಡೆದು ಕುಲ್ದೀಪ್ ಯಾದವ್ ಕೆಕೆಆರ್ಗೆ ಭಾರೀ ಆಘಾತ ನೀಡಿದರು. ರಹಾನೆ ವಿಕೆಟ್ ಬೀಳುತ್ತಿದ್ದಂತೆ ಕೆಕೆಆರ್ ದಿಢೀರ್ ಕುಸಿತ ಕಂಡಿತು. ರಿಂಕು ಸಿಂಗ್ ಅದೇ ಓವರ್ನಲ್ಲಿ ನಂತರದ ಎಸೆತದಲ್ಲೇ ಸ್ಟಬ್ಸ್ಗೆ ಕ್ಯಾಚ್ ನೀಡಿ ಔಟ್ ಆದರು. ಮುಂದಿನ ಓವರ್ನ್ಲಿ ತೇಜಸ್ವಿ ದಹಿಯಾ 1 ರನ್‌ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಕೊನೆಯ ಮೂರು ಓವರ್‌ಗಳಲ್ಲಿ ಕೆಕೆಆರ್ಗೆ 50 ರನ್ಗಳಿಸಬೇಕಿತ್ತು. ಆದರೆ ಮಿಚೆಲ್ ಸ್ಟಾರ್ಕ್ 18ನೇ ಓವರ್ನಲ್ಲಿ ಮೂರು ವಿಕೆಟ್ ಪಡೆದು ಕೆಕೆಆರ್ ಹೀನಾಯ ಸೋಲಿಗೆ ಕಾರಣರಾದರು. ರೋವ್ಮನ್ ಪೊವೆಲ್ 5ನೇ ಕ್ರಮಾಂಕದಲ್ಲಿ ಬಂದು 18ನೇ ಓವರ್ವರೆಗೂ ಆಡಿದರೂ 21 ಎಸೆತಗಳಲ್ಲಿ ಕೇವಲ 29 ರನ್‌ಗಳಿಸಿ ಸ್ಟಾರ್ಕ್ ಓವರ್ನಲ್ಲಿ ರನ್ಔಟ್ ಆದರು. ಅನುಕುಲ್ ರಾಯ್ ಅದೇ ಓವರ್ನ 2ನೇ ಎಸೆತದಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟ್ ಆದರೆ, 4ನೇ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿದರು. ವರುಣ್ ಚಕ್ರವರ್ತಿ 5 ರನ್‌ಗಳಿಸಿ 19ನೇ ಓವರ್ನಲ್ಲಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ಕೆಕೆಆರ್ ಇನ್ನೂ 8 ಎಸೆತಗಳಿರುವಂತೆ ಆಲೌಟ್ ಆಗಿ 40 ರನ್ಗಳಿಂದ ಸೋಲು ಕಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಲುಂಗಿ ಎನ್ಗಿಡಿ 27ಕ್ಕೆ3, ಕುಲ್ದೀಪ್ ಯಾದವ್ 29ಕ್ಕೆ3, ಅಕ್ಷರ್ ಪಟೇಲ್ 38ಕ್ಕೆ1, ಮಿಚೆಲ್ ಸ್ಟಾರ್ಕ್ 26ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ಗಳಿಸಿತ್ತು. ಕೆಎಲ್ ರಾಹುಲ್ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ 60 ರನ್ಗಳಿಸಿದರು. ನಾಯಕ ಅಕ್ಷರ್ ಪಟೇಲ್ 25 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳ ಸಹಿತ 39, ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಿತ 28, ಸಾಹಿಲ್ ಪರಕ್ 17 ಎಸೆತಗಳಲ್ಲಿ 24, ಅಭಿಷೇಕ್ ಪೊರೆಲ್ 18 ಎಸೆತಗಳಲ್ಲಿ 22 ರನ್ಗಳಿಸಿದ್ದರು.
May 24, 2026 11:32 PM IST
KKR vs DC, IPL 2026: ಕೆಕೆಆರ್ ವಿರುದ್ಧ 40 ರನ್‌ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ! 6ನೇ ಸ್ಥಾನದಲ್ಲಿ ಲೀಗ್ಗೆ ಗುಡ್ ಬೈ ಹೇಳಿದ ಕ್ಯಾಪಿಟಲ್ಸ್













