Kichcha Sudeepa: ತಮಿಳು ಸಿನಿಮಾಗೆ ಕನ್ನಡದ ಕಿಚ್ಚನ ಧ್ವನಿ; ವೇಟ್ಟುವಂ ಚಿತ್ರಕ್ಕೆ ಸುದೀಪ್ ಸಾಥ್ | | ACTPnews

kichcha sudeepa narrates pa ranjith vettuvam special video


ವೇಟ್ಟುವಂ ಸಿನಿಮಾ

ವೇಟ್ಟುವಂ ಅಂದ್ರೆ ಕನ್ನಡದ ಅರ್ಥ ತುಂಬಾನೆ ಚೆನ್ನಾಗಿದೆ. ಈ ಚಿತ್ರದ ಲೋಕವನ್ನ ಪರಿಚಯಿಸೋ ವಿಡಿಯೋ ನೋಡಿದಾಗ ಇದರ ಅರ್ಥ ಟಕ್ ಅಂತ ಹೊಳೆಯೋದಿಲ್ಲ .

ವೇಟ್ಟುವಂ ಚಿತ್ರಕ್ಕೆ ಕಿಚ್ಚನ ಕಂಠಸಿರಿ

(ಚಿತ್ರ ಕೃಪೆ: ಪಿ.ಆರ್.ಓ. ಫೋಟೋ)

ಆದರೆ, ವೇಟ್ಟುವಂ ಅಂದ್ರೆ ಬೇಟೆಯಾಡುವುದು ಅಂತಲೇ ಮೀನಿಂಗ್ ಬರುತ್ತದೆ. ಇದನ್ನ ತಿಳಿದಾಗ ಇಡೀ ವಿಡಿಯೋದ ಚಿತ್ರಣ ಕಣ್ಮುಂದೆ ಬಂದು ಹೋಗುತ್ತದೆ. ಡೈರೆಕ್ಟರ್ ಪಾ. ರಂಜಿತ್ ಇದನ್ನ ಅಷ್ಟೆ ಅದ್ಧೂರಿ ಆಗಿಯೇ ತೆಗೆಯುತ್ತಿದ್ದಾರೆ.

75 ಕೋಟಿ ಬಜೆಟ್

ಈ ಚಿತ್ರವನ್ನ 75 ಕೋಟಿ ಬಜೆಟ್ ಅಲ್ಲಿ ತೆಗೆಯಲಾಗುತ್ತಿದೆ. ಬಹು ತಾರೆಯರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರದ ಪ್ರತಿಯೊಬ್ಬ ಕಲಾವಿದರನೂ ಮಲ್ಲಕಂಬ ಕ್ರೀಡೆಯ ತರಬೇತಿ ಪಡೆದಿದ್ದಾರೆ. ಮುಷ್ಟಿಯುದ್ಧದ ಕಲೆಯ ತರಬೇತಿ ಪಡೆದಿದ್ದಾರೆ.

3 ಕಾಲಘಟ್ಟದ ಕತೆ

ವೇಟ್ಟುವಂ ಚಿತ್ರದಲ್ಲಿ 3 ಕಾಲಘಟ್ಟದ ಕತೆ ಇದೆ. ಈ ಮೂರು ಕಾಲಘಟ್ಟದ ಕತೆಯನ್ನ ಪಾ. ರಂಜಿತ್ ಹಾಗೂ ಸಂತೋಷ್ ನಾರಾಯಣನ್ ಚೆಂಥಿಲ್‌ಕುಮಾರ್ ಬರೆದಿದ್ದಾರೆ.

kichcha sudeepa narrates pa ranjith vettuvam special video

ತಮಿಳು ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

(ಚಿತ್ರ ಕೃಪೆ: ವೇಟ್ಟುವಂ ಸಿನಿಮಾ ಟೀಮ್)

ಈ ಚಿತ್ರದಲ್ಲಿ ಬೇಟೆಯಾಡೋ ಕತೆ ಇದೆ. ಆದರೆ, ಇದು ಮೂರು ಕಾಲಘಟ್ಟದ ಚಿತ್ರಣ ಕಟ್ಟಿಕೊಡುತ್ತದೆ. ಇಲ್ಲಿ ಅಧಿಕಾರಕ್ಕಾಗಿಯೇ ಹೋರಾಡುವ ಕತೆ ಇದೆ.

ಈ ಹೋರಾಟದಲ್ಲಿ ಯಾರಿಗೆ ಗೆಲುವು ಅನ್ನುವ ಕುತೂಹಲವೂ ಇದೆ. ಕಿಚ್ಚ ಸುದೀಪ್ ಅವರ ಧ್ವನಿಯಲ್ಲಿ ಈ ಮೂರು ಕಾಲಘಟ್ಟದ ವಿಷಯ ಮತ್ತಷ್ಟು ಗಂಭೀರತೆ ಪಡೆದಂತೆ ಫೀಲ್ ಅಗುತ್ತದೆ.
ಡಿಸೆಂಬರ್ ರಿಲೀಸ್

ಈ ಚಿತ್ರದ ರಿಲೀಸ್ ಕೂಡ ಅನೌನ್ಸ್ ಆಗಿದೆ. 2026 ಡಿಸೆಂಬರ್ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತದೆ. ಆದರೆ, ಡೇಟ್ ಇನ್ನು ಅನೌನ್ಸ್ ಆಗಿಲ್ಲ.

ಐದು ಭಾಷೆಯಲ್ಲಿ…

ವೇಟ್ಟುವಂ ಚಿತ್ರ ಐದು ಭಾಷೆಯಲ್ಲಿ ಬರುತ್ತದೆ. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣುತ್ತದೆ.

ಸದ್ಯಕ್ಕೆ ಈ ಚಿತ್ರದ ಐದು ಭಾಷೆಯ ವೇಟ್ಟುವಂ ಜಗ್ಗತ್ತನ್ನ ಪರಿಚಯಿಸೋ ವಿಡಿಯೋ ಹೊರ ಬಂದಿವೆ. ಎಲ್ಲರಿಗೂ ಹೊಸದೊಂದು ಕುತೂಹಲ ಮೂಡಿಸಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed