Kichcha Sudeepa: ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್‌! | | ACTPnews

ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್‌!


Last Updated:

ಕಿಚ್ಚ ಸುದೀಪ್‌ ಅಭಿನಯದ 4 ಸಿನಿಮಾಗಳು ಈ ವರ್ಷ ಅನೌನ್ಸ್ ಆಗುತ್ತಿದೆ. ಈ ಸಿನಿಮಾಗಳಲ್ಲಿ ಒಂದು ಚಿತ್ರವನ್ನ ಸುದೀಪ್ ಡೈರೆಕ್ಷನ್ ಕೂಡ ಮಾಡುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಒಂದು ಸ್ಟೋರಿ ಇಲ್ಲಿದೆ ಓದಿ.

ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್‌!
ಕಿಚ್ಚ ಸುದೀಪ್ ಬಿಗ್ ನ್ಯೂಸ್ ಔಟ್; 4 ಸಿನಿಮಾ ಈ ವರ್ಷ ಅನೌನ್ಸ್‌!

ಕಿಚ್ಚ ಸುದೀಪ್ (Kichcha Sudeepa) ಸಿನಿಮಾಗಳ ಒಂದು ಹೊಸ ಸುದ್ದಿ ಹೊರ ಬಂದಿದೆ. ಈ ವರ್ಷ ಅಂದ್ರೆ 2026 ರಲ್ಲಿ ಕಿಚ್ಚ ಸುದೀಪ್ ಡೈರೆಕ್ಷನ್‌ಗೆ ಕೈ ಹಾಕುತ್ತಿದ್ದಾರೆ. ಈ ವರ್ಷ ಅನೌನ್ಸ್ (Announce) ಆಗುತ್ತಿರೋ ಈ ನಾಲ್ಕು ಚಿತ್ರಗಳಲ್ಲಿ ಒಂದು ಸುದೀಪ್ ಡೈರೆಕ್ಷನ್‌ನ (Sudeepa Direction) ಚಿತ್ರವೂ ಆಗಿರುತ್ತದೆ. ಈ ಸಿನಿಮಾಗಳ (Movies) ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಈ ವರ್ಷ ಡೈರೆಕ್ಷನ್ ಪಕ್ಕಾ

ಕಿಚ್ಚ ಸುದೀಪ್ ಈ ವರ್ಷ ಡೈರೆಕ್ಷನ್ ಮಾಡ್ತಿದ್ದಾರೆ. ಇನ್ನೇನು ಅನೌನ್ಸ್ ಆಗಲಿರೋ ನಾಲ್ಕು ಚಿತ್ರಗಳಲ್ಲಿ ಒಂದು ಚಿತ್ರವನ್ನ ಸುದೀಪ್ ಅವರು ಡೈರೆಕ್ಷನ್ ಮಾಡುತ್ತಿದ್ದಾರೆ.
kichcha sudeepa upcoming four movies announced soon

ರೋಮ್‌ಕಾಮ್‌ ಸಿನಿಮಾ

ಈ ಒಂದು ಸುದ್ದಿ ಅಧಿಕೃತವಾಗಿ ಇನ್ನಷ್ಟೆ ಅನೌನ್ಸ್ ಆಗಬೇಕಿದೆ. ಬಲ್ಲ ಮೂಲಗಳ ಈ ಸುದ್ದಿ ಪಕ್ಕಾ ಅನ್ನೋದು ಅಷ್ಟೆ ಸತ್ಯ ಬಿಡಿ. ಇನ್ನುಳಿಂತೆ ಸುದೀಪ್ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷವೇ ಅನೌನ್ಸ್ ಆಗುತ್ತಿವೆ.

ರೋಮ್‌ಕಾಮ್‌ ಸಿನಿಮಾ

ಸುದೀಪ್ ಅಭಿನಯದ ಒಂದು ಚಿತ್ರದ ಸುದ್ದಿ ಇದ್ದೇ ಇದೆ. ಇದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಅನ್ನುವ ಮಾಹಿತಿನೂ ಇದೆ. ಮುಂದಿನ ಚಿತ್ರದಲ್ಲಿ ನಾಯಕಿನೂ ಇರ್ತಾಳೆ. ನೀವು ನಿರೀಕ್ಷೆ ಮಾಡ್ತಿರೋ ವಿಷಯಗಳೂ ಇರುತ್ತವೆ ಅಂತ ಸ್ವತಃ ಸುದೀಪ್ ಹೇಳಿದ್ದರು.

ಸುಕುಮಾರ್ ಶಿಷ್ಯನ ಸಿನಿಮಾ

ತೆಲುಗು ಪುಷ್ಪ ಡೈರೆಕ್ಟರ್ ಸುಕುಮಾರ್ ಶಿಷ್ಯ ಈ ಚಿತ್ರ ಮಾಡುತ್ತಿದ್ದಾರೆ. ಆದರೆ, ಅದು ಯಾರು ಅನ್ನೋದು ಇನ್ನು ರಿವೀಲ್ ಆಗಿಲ್ಲ. ಅದರ ಜೊತೆಗೆ ಸಿನಿಮಾದ ಇತರ ಮಾಹಿತಿನೂ ಹೊರ ಬಂದಿಲ್ಲ.

ಇದರ ಬೆನ್ನಲ್ಲಿಯೇ ಇದೀಗ ಸುದೀಪ್ ಅವರು ಈ ವರ್ಷ 4 ಚಿತ್ರಗಳನ್ನ ಮಾಡುತ್ತಿದ್ದಾರೆ. ಅದರಲ್ಲಿ ಈ ವರ್ಷ Romcom ಚಿತ್ರವೂ ಇದೆ. ಸುದೀಪ್ ಡೈರೆಕ್ಷನ್ ಮಾಡ್ತಿರೋ ಚಿತ್ರವೂ ಇದೆ.

kichcha sudeepa upcoming four movies announced soon

ಈ ವರ್ಷ ಡೈರೆಕ್ಷನ್ ಪಕ್ಕಾ
ಬಿಲ್ಲ ರಂಗ ಬಾಷಾ ಸಿನಿಮಾ

ಬಿಲ್ಲ ರಂಗ ಬಾಷಾ ಸಿನಿಮಾದ ನಿಂತು ಹೋಯಿತು ಅಂತ ಸುದ್ದಿ ಇತ್ತು. ಆದರೆ, ಸುದೀಪ್ ಈ ಚಿತ್ರದ ಬಗ್ಗೆ ಒಂದು ಕ್ಲಾರಿಟಿ ಕೊಟ್ಟರು. ಮುಂದಿನ ತಿಂಗಳು ಬಿಆರ್‌ಬಿ ಚಿತ್ರದ ಚಿತ್ರೀಕರಣ ಶುರು ಆಗುತ್ತಿದೆ ಅಂತ ಹೇಳಿದ್ದರು.

ಈಗ ಬಲ್ಲ ಮೂಲಗಳ ಸುದ್ದಿನೂ ಅದನ್ನೆ ಹೇಳುತ್ತಿದೆ. ಮುಂದಿನ ತಿಂಗಳು ಅಂದ್ರೆ ಜೂನ್ ತಿಂಗಳಿನಿಂದಲೇ ಸುದೀಪ್ ಅವರ ಈ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ.

ಅನೂಪ್ ಭಂಡಾರಿ ಸಿನಿಮಾ

ಅನೂಪ್ ಭಂಡಾರಿ ಅವರ ಕನಸಿನ ಸಿನಿಮಾ ಇದಾಗಿದೆ. ಇದರ ಮೇಲೆ ಅನೂಪ್ ಸಾಕಷ್ಟು ವರ್ಕ್ ಮಾಡಿದ್ದಾರೆ. ಹೆಚ್ಚು ಕಡಿಮೆ ಐದಾರು ವರ್ಷ ವರ್ಕ್ ಮಾಡಿದ್ದಾರೆ.

ಮಾರ್ಕ್ ಮತ್ತು ಮ್ಯಾಕ್ಸ್ ಚಿತ್ರದ ಮೊದಲೇ ಈ ಸಿನಿಮಾದ ಸುದ್ದಿ ಇತ್ತು. ಆದರೆ, ಇವುಗಳ ನಡುವೇನೆ ಬಿಲ್ಲ ರಂಗ ಬಾಷಾ ಚಿತ್ರವೂ ಶುರು ಆಯಿತು. ಒಂದು ಹಂತದ ಚಿತ್ರೀಕರಣ ಕೂಡ ಆಗಿದೆ.

ಪೋಸ್ಟರ್ ಅಂತು ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದನ್ನ ನೋಡಿದರೆ ಇಡೀ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡುತ್ತದೆ. ಆ ರೀತಿಯ ಚಿತ್ರವನ್ನೆ ಅನೂಪ್ ಭಂಡಾರಿ ಹಾಗೂ ಸುದೀಪ್ ಅದ್ಭುತ ಚಿತ್ರವನ್ನ ಕೊಡುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed