Last Updated:
ಕಿಚ್ಚ ಸುದೀಪ್ ಅಭಿನಯದ ಬಿಗ್ ಬಜೆಟ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಇದು ಅಷ್ಟೆ ಕುತೂಹಲ ಹೆಚ್ಚಿಸುತ್ತಿದೆ. ಸೆಪ್ಟೆಂಬರ್-2 ರಂದು ಈ ಸಿನಿಮಾದ ಇನ್ನಷ್ಟು ಮಾಹಿತಿ ರಿವೀಲ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ವರ್ಷಕ್ಕೆ ಎರಡು ಚಿತ್ರ ಕೊಡ್ತೀನಿ ಅಂತ ಹೇಳಿದ್ದಾರೆ. ಅದಕ್ಕೇನೆ ಐದಾರು ತಿಂಗಳಲ್ಲಿಯೇ ಮಾರ್ಕ್ ಚಿತ್ರ (Mark Movie) ಮಾಡಿದರು. ಮ್ಯಾಕ್ಸ್ ಹಿಟ್ ಆಗಿದ್ದೇ ಬಂತು. ಆ ಕೂಡಲೇ ಮಾರ್ಕ್ ಬಂತು. ತುಂಬಾನೆ ಫಾಸ್ಟ್ ಆಗಿಯೇ ಈ ಚಿತ್ರ ರೆಡಿ ಆಯಿತು. ಹಿಟ್ ಕೂಡ ಆಯಿತು. ಆದರೆ, ಈ ಚಿತ್ರ ಮಾಡಲು ಅತಿ ದೊಡ್ಡ ಪ್ರಾಜೆಕ್ಟ್ (Bigg Project) ಬಿಲ್ಲ ರಂಗ ಬಾಷಾ ಚಿತ್ರದ ಕೆಲಸ ಸ್ಟಾಪ್ ಮಾಡಿದರು. ಆದರೆ ವರ್ಷಕ್ಕೆ ಒಂದು ಚಿತ್ರ ಕೊಡದೇ ಇದ್ದರೆ ಮೊದಲು ಬೇಸರ ಆಗೋದೇ ನನಗೆ ಅಂತ ಸುದೀಪ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss) ಪ್ರೆಸ್ ಮೀಟ್ ಅಲ್ಲಿಯೇ ಇದನ್ನ ಹೇಳಿದ್ದಾರೆ. ಆದರೆ, ಇದರ ನಡುವೆ ಇದೀಗ ಹೊಸ ಚಿತ್ರ ಒಂದರ ಹೊಸ ನ್ಯೂಸ್ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.














