Kichcha Sudeep: ತಮಿಳುನಾಡು ಸಿಎಂ ಮಗನ ಮೊದಲ ಸಿನಿಮಾಗೆ ಕಿಚ್ಚನ ವಿಶ್! ವಿಜಯ್ ಪುತ್ರ ಜೇಸನ್​​ಗೆ ಏನಂದ್ರು ಬಾದ್​ ಷಾ? | Kichcha sudeep wishes for vijay son jason | | ACTPnews

ಜೇಸನ್ ಸಂಜಯ್  (ಚಿತ್ರ ಕೃಪೆ: ಲೈಕಾ ಪ್ರೊಡಕ್ಷನ್ಸ್)- ಕಿಚ್ಚ ಸುದೀಪ್ (ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್​ಸ್ಟಾಗ್ರಾಮ್)


Last Updated:

Kichcha Sudeep: ಕಿಚ್ಚ ಸುದೀಪ್ ಅವರು ದಳಪತಿ ವಿಜಯ್ ಮಗನ ಮೊದಲ ಸಿನಿಮಾ ಬಗ್ಗೆ ಏನಂದ್ರು? ಸಿಗ್ಮಾ ಪ್ರಿ ರಿಲೀಸ್ ಇವೆಂಟ್​ನಲ್ಲಿ ಕಿಚ್ಚ ಮಾತನಾಡಿದ್ದೇನು?

ಜೇಸನ್ ಸಂಜಯ್  (ಚಿತ್ರ ಕೃಪೆ: ಲೈಕಾ ಪ್ರೊಡಕ್ಷನ್ಸ್)- ಕಿಚ್ಚ ಸುದೀಪ್ (ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್​ಸ್ಟಾಗ್ರಾಮ್)
ಜೇಸನ್ ಸಂಜಯ್ (ಚಿತ್ರ ಕೃಪೆ: ಲೈಕಾ ಪ್ರೊಡಕ್ಷನ್ಸ್)- ಕಿಚ್ಚ ಸುದೀಪ್ (ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್​ಸ್ಟಾಗ್ರಾಮ್)

ತಮಿಳುನಾಡು ಸಿಎಂ ವಿಜಯ್ (Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಅವರ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಸಿಗ್ಮಾ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ನಡೆದಿತ್ತು. ಈ ವೇಳೆ ಬಹಳಷ್ಟು ಗಣ್ಯರು ಸಿನಿಮಾ ಬಗ್ಗೆ, ಜೇಸನ್ ಬಗ್ಗೆ ಮಾತನಾಡಿದ್ದರು. ಇವೆಂಟ್ ಕಳೆದ ನಂತರ ಕಿಚ್ಚ ಸುದೀಪ್ ಅವರು ಮಾತನಾಡಿದ ಕ್ಲಿಪ್ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಇದೀಗ ಕಿಚ್ಚ ಅವರ ವಿಡಿಯೋ ವೈರಲ್ ಆಗಿದ್ದು ಸಿಗ್ಮಾ ವೇದಿಕೆಯಲ್ಲಿ ಈ ವಿಡಿಯೋವನ್ನು ಪ್ಲೇ ಮಾಡಲಾಗಿದೆ. ಅದರಲ್ಲೇನಿದೆ?

“ಐರನ್ ಲೆಗ್” ನಿಂದ “ಗೋಲ್ಡನ್ ಲೆಗ್” ವರೆಗೆ – ಭಾರತೀಯ ಚಿತ್ರರಂಗದಲ್ಲಿ 3 ದಶಕಗಳ ಗಮನಾರ್ಹ ಪ್ರಯಾಣ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಸಿಗ್ಮಾ ಕಾರ್ಯಕ್ರಮದಲ್ಲಿ, ಕಿಚ್ಚ ಸುದೀಪ್ ಅವರು ತಮ್ಮ ಅದ್ಭುತ ಸಿನಿಮಾ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಹೋರಾಟಗಳು, ಮೈಲಿಗಲ್ಲುಗಳು, ಅನುಭವಗಳು, ಪಾಠಗಳು ಮತ್ತು ಅವರ ಪರಂಪರೆಯನ್ನು ರೂಪಿಸಿದ ನೆನಪುಗಳನ್ನು ಹೇಳಿದ್ದಾರೆ. ಕಿಚ್ಚ ಸುದೀಪ್ ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡುವ ಮತ್ತು ತಮ್ಮ ಟ್ರೇಡ್‌ಮಾರ್ಕ್ ಶೈಲಿ ಮತ್ತು ನಮ್ರತೆಯಿಂದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ವಿಶೇಷ ನೋಟ ಮೆಚ್ಚುಗೆ ಗಳಿಸಿತು.

ಕಿಚ್ಚ ಮಾತನಾಡಿ, ಸೀರಿಯಲ್​ಗೆ ಹೋದೆ. ಸೀರಿಯಲ್​ನಲ್ಲಿ ಕೆಲಸ ಮಾಡಿ ಸಣ್ಣದಾಗಿ ಹೆಸರು ಬಂತು. ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ನಾನು ಸಿನಿಮಾಗೆ ಸೇರಿಕೊಂಡೆ. ಕೆಲವೊಂದು ಸಿನಿಮಾ ಮಾಡಿದೆ. ಇನ್ನೊಮ್ಮೆ ಪ್ರಮುಖ ಪಾತ್ರದಲ್ಲಿ ಒಂದು ಅವಕಾಶ ಬಂತು. ಅದನ್ನೂ ಮಾಡಿದೆ. ಕಂಪ್ಲೀಟ್ ಆ್ಯಕ್ಷನ್. ಸಿನಿಮಾ ಓಪನಿಂಗ್​ನಲ್ಲಿ ಬ್ಲಾಕ್​ಬಸ್ಟರ್ ಎಂದರು. 10ನೇ ದಿನ ರಾಜ್​ಕುಮಾರ್ ಅವರ ಬಳಿ ಹೋದೆ, ಸಿನಿಮಾ ನಿಂತು ಹೋಗಿತ್ತು. ಕೂಡಲೇ ಅವನು ಐರನ್ ಲೆಗ್ ಎನ್ನುವ ಮಾತು ಬಂತು, ಕೆಲಸ ಸಿಗೋದು ಕಡಿಮೆ ಆಯಿತು ಎಂದರು.

ಇದನ್ನೂ ಓದಿ: Deepika Padukone: ಮೊದಲು ಲಕ್ಷ್ಮಿ, ಈಗ ಸರಸ್ವತಿಯೂ ಬಂದಳು! ದೀಪಿಕಾ-ರಣವೀರ್​ಗೆ ಸ್ಪೆಷಲ್ ವಿಶ್

ಕೊನೆಗೂ ಒಂದು ಸಿನಿಮಾ ಮಾಡಿದೆ. ಈ ಸಿನಿಮಾ ಆಗದಿದ್ದರೆ ಸಿನಿಮಾ ಬಿಟ್ಟು ಹೋಗುವುದು ಎಂದು ನಿರ್ಧರಿಸಿದೆ. ಆ್ಯಕ್ಸಿಡೆಂಟ್ ಆಗಿ ಕಾಲೆಲ್ಲಾ ಮುರಿತವಾಗಿತ್ತು. ಆಗ ಎಲ್ಲರೂ ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದರು. ಸಾಕಷ್ಟು ಸಮಸ್ಯೆಗಳ ನಂತರ ಕೊನೆಗೂ ಸಿನಿಮಾ ರಿಲೀಸ್ ಆಯಿತು. ಅದು ದೊಡ್ಡ ಹಿಟ್ ಆಯಿತು. ಹೌದು, ನಂಬಿಕೆಯೇ ಎಲ್ಲವೂ..ನಿಮ್ಮ ಆ್ಯಟಿಡ್ಯೂಡ್ ಬಿಟ್ಟುಕೊಡಬೇಡಿ ಎಂದರು.

ಚಿತ್ರದಲ್ಲಿ ಸಂದೀಪ್ ಕಿಶನ್, ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಅನ್ಬು ಥಾಸನ್, ಯೋಗ್ ಜಪೀ, ಮಗಲಕ್ಷ್ಮಿ, ಶೀಲಾ ರಾಜ್‌ಕುಮಾರ್, ಕಮಲೇಶ್ ಮತ್ತು ಕಿರಣ್ ಕೊಂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿಗ್ಮಾವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಬಾಸ್ಕರನ್ ನಿರ್ಮಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed