Ketan Siya Case: ಕೇತನ್ ಹತ್ಯೆ ಆರೋಪಿ ಸಿಯಾ ತಂದೆ ಆಸ್ಪತ್ರೆಗೆ ದಾಖಲು! ಐಸಿಯುನಲ್ಲಿ ಚಿಕಿತ್ಸೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೇತನ್ ಕೊಲೆ ಪ್ರಕರಣ


Last Updated:

ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಅವರ ತಂದೆ ಪ್ರವೀಣ್ ಗೋಯಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇತನ್ ಕೊಲೆ ಪ್ರಕರಣ
ಕೇತನ್ ಕೊಲೆ ಪ್ರಕರಣ

ಪುಣೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಕೇಸ್​ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನೇ ದಿನೇ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ (Siya Goyal) ಅವರ ತಂದೆ ಪ್ರವೀಣ್ ಗೋಯಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರವೀಣ್ ಗೋಯಲ್ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೇತನ್​ ಕೊಲೆ ಆರೋಪಿ ಸಿಯಾ ಗೋಯಲ್​ ತಂದೆ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​​ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಏನಿದು ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ?

ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ನಿಶ್ಚಿತಾರ್ಥ ಮಾಡಿಕೊಂಡು, ಪ್ರಿಯಕರನ ಜೊತೆ ಓಡಿ ಹೋದ್ರೆ ಮರ್ಯಾದೆ ಹೋಗುತ್ತೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಲಾಗಿತ್ತು. ಕೇತನ್‌ನನ್ನು ಪುಣೆಯ ಲೋನಾವಾಲಾ ಸಮೀಪದ ಲೋಹಗಡ ಕೋಟೆಗೆ ಕರೆದೊಯ್ದಿದ್ದ ಸಿಯಾ, ಅಲ್ಲಿ ತನ್ನ ಪ್ರಿಯಕರ ಚೇತನ್ ಜೊತೆಗೂಡಿ 400 ಅಡಿ ಪ್ರಪಾತಕ್ಕೆ ತಳ್ಳಿ ಕೊಂದಿದ್ದಳು. ಜೂನ್ 18 ರಂದು ಕೃತ್ಯ ಎಸಗಿ ಇದೊಂದು ಆಕಸ್ಮಿಕ ಸಾವು ಅಂತ ಬಿಂಬಿಸುವ ಯತ್ನ ನಡೆದಿತ್ತು. ಆದ್ರೆ, ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.

ಮೊದಲೇ ಪ್ಲಾನ್​ ಮಾಡಿಕೊಂಡಿದ್ದ ಆರೋಪಿಗಳು

ಜೂನ್‌ 18 ರಂದು ಕೊಲೆಗೂ ಮುನ್ನ ಅಂದ್ರೆ, ಜೂನ್ 17 ರಂದೇ ಪ್ರಿಯಕರ ಚೇತನ್ ಜೌಧರಿ ಮತ್ತು ಸಿಯಾ ಗೋಯಲ್ ಭೇಟಿಯಾಗಿದ್ದಾರೆ. ಕೊಂಡ್ವಾದ ಕೆಫೆಯಲ್ಲಿ ಸಂಜೆ ಭೇಟಿಯಾಗಿದ್ದ ಇಬ್ಬರೂ ಸಾಕ್ಷ್ಯ ಸಿಗದಂತೆ ಹೇಗೆ ಕೊಲೆ ಮಾಡ್ಬೇಕು, ಯಾವ ಸ್ಥಳದಿಂದ ತಳ್ಳಿದರೆ ಸಾಯಬಹುದು ಅಂತೆಲ್ಲ ಯೋಜನೆ ಮಾಡಿದ್ದಾರೆ. ಒಂದು ಗಂಟೆಗೂ ಹೆಚ್ಚುಕಾಲ ಕೊಲೆಯ ಸಂಚಿನ ಬಗ್ಗೆ ಕೋಡ್‌ ವರ್ಡ್‌ಗಳ ಮೂಲಕ ಚರ್ಚೆ ನಡೆಸಿದ್ದಾರೆ. ಈ ಕುರಿತಂತೆ ಪೊಲೀಸರಿಗೆ ಸಿಸಿಟಿವಿ ಸಾಕ್ಷ್ಯಗಳು ಸಿಕ್ಕಿವೆ.

ಸತ್ಯ ಹೇಳಿತ್ತು ಡಿಜಿಟಲ್ ಸಾಕ್ಷ್ಯ

ಕೇತನ್ & ಸಿಯಾಳನ್ನ ಚೇತನ್ ಹಿಂಬಾಲಿಸಿ ಬಂದಿದ್ದ ಚೇತನ್ ಬರ್ತಿದ್ದ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಲ್ಲದೇ ಆರೋಪಿಗಳು ಲೊಕೇಶನ್ ಟ್ರ್ಯಾಕ್ ತಪ್ಪಿಸಲು ತನ್ನ ನೌಕರನ ಮೊಬೈಲ್‌ ಬಳಕೆ ಮಾಡಿರೋದು ಗೊತ್ತಾಗಿದೆ.  ಕೇತನ್ ಕೊಲೆ ಬಗ್ಗೆ ಅನುಮಾನ ಬರ್ತಿದ್ದಂತೆ CDR ಪರಿಶೀಲನೆ ನಡೆಸಿದಾಗ ಕಳ್ಳಾಟ ಬಯಲಾಗಿದ್ದು, ಆರೋಪಿಗಳಾದ ಸಿಯಾ ಮತ್ತು ಚೇತನ್​ ಮಧ್ಯೆ ಕಳೆದ 6 ತಿಂಗಳಲ್ಲಿ 2,004 ಬಾರಿ ಪರಸ್ಪರ ಕರೆ ಮತ್ತು ಒಟ್ಟು 238 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದಾರೆ. ಅಲ್ಲದೇ ಕೊಲೆ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ ಸಿಯಾ ಕೊಲೆಯನ್ನ ಅಪಘಾತದಂತೆ ಬಿಂಬಿಸೋದು ಹೇಗೆ? ಅಂತ ಸರ್ಚ್ ಮಾಡಿರೋದು ತನಿಖೆ ವೇಳೆ ಬಯಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports