Vaibhav Sooryavanshi: ‘ವೈಭವ್ ಸೆಂಚುರಿ ಬಾರಿಸಿದ್ರೆ ನಾನು ಬೆತ್ತಲಾಗ್ತೀನಿ!’ ಮಾಜಿ ಕ್ರಿಕೆಟಿಗನಿಂದ ಸೂರ್ಯವಂಶಿಗೆ ಸವಾಲು | | ACTPnews

ವೈಭವ್​ ಸೂರ್ಯವಂಶಿ


Last Updated:

ಮಾಜಿ ವೇಗಿ ತನ್ವೀರ್ ಅಹ್ಮದ್ ವೈಭವ್ ಸೂರ್ಯವಂಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೈಭವ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ರೆ, ಬೆತ್ತಲೆಯಾಗಿ ಓಡಾಡ್ತೇನೆ ಎಂದು ವಿಲಕ್ಷಣ ಸವಾಲು ಹಾಕಿದ್ದಾರೆ.

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ

ಇಡೀ ಕ್ರಿಕೆಟ್​​ ಜಗತ್ತು ವೈಭವ್​ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್​ ಕಂಡು ಕೊಂಡಾಡ್ತಿದೆ. 15 ವರ್ಷದ ಬಾಲಕನ ಬ್ಯಾಟಿಂಗ್​​ಗೆ ಕ್ರಿಕೆಟ್​ ಅಭಿಮಾನಿಗಳು ತಲೆ ಬಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರೇ ವೈಭವ್​ ಸೂರ್ಯವಂಶಿಗೆ ಬಹುಪರಾಕ್​ ಎಂದಿದ್ದಾರೆ. ಆದ್ರೆ, ಪಾಕಿಸ್ತಾನದ (Pakistan) ಮಾಜಿ ಕ್ರಿಕೆಟಿಗನೊಬ್ಬ ವೈಭವ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇಂಗ್ಲೆಂಡ್ (England)​ ವಿರುದ್ಧ ವೈಭವ್​ ಸೆಂಚುರಿ ಬಾರಿಸಿದ್ರೆ, ಬೆತ್ತಲಾಗಿ ಓಡಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡೋದನ್ನ ಕಣ್ತುಂಬಿಕೊಳ್ಳಲು ಇಡೀ ಭಾರತವೇ ಕಾತರದಿಂದ ಕಾಯ್ತಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್ ವೈಭವ್ ಸೂರ್ಯವಂಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಐಪಿಎಲ್ ಅಥವಾ ಏಷ್ಯಾ ಪಿಚ್‌ಗಳಲ್ಲಿ ರನ್ ಗಳಿಸುವುದು ಸುಲಭ. ಇಂಗ್ಲೆಂಡ್‌ನ ಸ್ವಿಂಗ್ ಮತ್ತು ಸೀಮಿಂಗ್ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡೋದು ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.

ಮಾಜಿ ಕ್ರಿಕೆಟಿಗನಿಂದ ವಿಲಕ್ಷಣ ಸವಾಲು

ಇಷ್ಟಕ್ಕೆ ಸುಮ್ಮನಾಗದ ತನ್ವೀರ್ ಅಹ್ಮದ್, ‘ವೈಭವ್​​ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದರೆ, ನಾನು ಲಾಹೋರ್‌ನ ರಸ್ತೆಗಳಲ್ಲಿ ಬೆತ್ತಲೆಯಾಗಿ ಓಡಾಡ್ತೇನೆ ಎಂದು ವಿಲಕ್ಷಣ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೇ ತನ್ವೀರ್ ವೈಭವ್​ ಸೂರ್ಯವಂಶಿ ವಯಸ್ಸಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ, ‘ಅವನಿಗೆ 15 ವರ್ಷ ಎಂದು ನನಗೆ ನಂಬಲು ಸಾಧ್ಯವಿಲ್ಲ. ಕನಿಷ್ಠ 22 ವರ್ಷ ಎಂದು ನಾನು ಭಾವಿಸುತ್ತೇನೆ. ಅವನ ಶಕ್ತಿ ಮತ್ತು ಸಿಕ್ಸ್ ಹೊಡೆಯುವ ಸಾಮರ್ಥ್ಯ 15 ವರ್ಷದ ಹುಡುಗನಿಗೆ ಸೇರಿಲ್ಲ’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ಸಣ್ಣಪುಟ್ಟ ಸ್ಟೇಡಿಯಂನಲ್ಲಿ ಬ್ಯಾಟ್ ಬೀಸುವ ಮೂಲಕ ರನ್ ಗಳಿಸುವ  ಬ್ಲೈಂಡ್​ ಸ್ಲಾಗರ್ ಎಂದು ಹೇಳಿರೋದು ಕ್ರಿಕೆಟ್​​ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ತನ್ವೀರ್ ಅಹ್ಮದ್ ಅವರ ಹೇಳಿಕೆಗಳು ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕ ಕ್ರಿಕೆಟ್ ಅಭಿಮಾನಿಗಳು ತನ್ವೀರ್​​ ಅಹ್ಮದ್​​  ಸುಖಾಸುಮ್ಮನೆ ಅನಗತ್ಯ ವಿವಾದಗಳನ್ನು ಹುಟ್ಟುಹಾಕ್ತಿದ್ದಾರೆ ಎಂದು ಹೇಳಿದ್ರೆ, ಇನ್ನ ಕೆಲವರು ವೈಭವ್ ಇಂಗ್ಲೆಂಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತನ್ವೀರ್​​ ಅಹ್ಮದ್​​ಗೆ ತಮ್ಮ ಬ್ಯಾಟ್​​ ಮೂಲಕ ಉತ್ತರಿಸುತ್ತಾರೆ ಎಂದು ಹೇಳಿದ್ದಾರೆ.

ವೈಭವ್​ ಸೂರ್ಯವಂಶಿ ಕೇವಲ 15 ವರ್ಷ ವಯಸ್ಸಿನಲ್ಲೇ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದು, ಅವರನ್ನು ಭಾರತದ ಮುಂದಿನ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗುತ್ತಿದೆ. ಆದ್ರೆ, ಕೆಲ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮಾತ್ರ ಪಾಡ್​ ಕಾಸ್ಟ್​​ ಅನ್ನೋ ಹೆಸರಿನಲ್ಲಿ ರೀಚ್​​ಗೋಸ್ಕರ ಈ ರೀತಿಯಾದ ಹೇಳಿಕೆ ನೀಡ್ತಾರೆ ಎಂದು ಕ್ರಿಕೆಟ್​ ಅಭಿಮಾನಿಗಳು ಕಿಡಿಕಾರಿದ್ದಾರೆ.

ಇನ್ನು, ಐಪಿಎಲ್ 2026 ರಲ್ಲಿ 776 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರನ್ನು ಮೊದಲ ಬಾರಿಗೆ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೇವಲ 15 ವರ್ಷ ವಯಸ್ಸಿನಲ್ಲಿ, ಅವರು ನಿರಂತರವಾಗಿ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಬೆಲ್‌ಫಾಸ್ಟ್‌ನಲ್ಲಿ ನಡೆಯುವ ಮೊದಲ ಟಿ 20 ಐನಲ್ಲಿ ಪಾದಾರ್ಪಣೆ ಮಾಡಬಹುದು ಎನ್ನಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed