Last Updated:
ಕೆರೆಬೇಟೆ ಚಿತ್ರ ಖ್ಯಾತಿಯ ನಾಯಕ ನಟ ಗೌರಿಶಂಕರ್ ಮತ್ತೊಂದು ಚಿತ್ರ ಮಾಡಿದ್ದಾರೆ ಕಾಮನ್ ಮ್ಯಾನ್ ನಾನೇ ಸಿಎಂ ಅನ್ನುವ ಈ ಚಿತ್ರವನ್ನ ಡೈರೆಕ್ಟರ್ ಓಂ ಸಾಯಿ ಪ್ರಕಾಶ್ ಮಾಡಿದ್ದಾರೆ. ಇವರ ಜೊತೆಗೆ ಕೆಲಸ ಮಾಡಿರೋ ಅನುಭವದ ಬಗ್ಗೆ ಗೌರಿಶಂಕರ್ ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
ಕೆರೆಬೇಟೆ ಸಿನಿಮಾ (Kerebete Movie) ಆದ್ಮೇಲೆ ಒಂದು ವರ್ಷ ಏನು ಮಾಡ್ಲಿಲ್ಲ. ಒಳ್ಳೆ ಕತೆ ಬಂದ್ರೆ ಮಾಡೋ ಯೋಚನೆ ಕೂಡ ಇತ್ತು. ಅಷ್ಟರಲ್ಲಿ ಒಂದು ವರ್ಷವೂ ಆಗಿತ್ತು. ಆದರೆ, ಕೆರೆಬೇಟೆಯ ನನ್ನ ಕೆಲಸ ನೋಡಿಯೇ ಕನ್ನಡದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಸಿನಿಮಾ ಆಫರ್ ಬಂತು. ಓಂ ಸಾಯಿ ಪ್ರಕಾಶ್ (Om Sai Prakash) ಅವರು ಕತೆ ಹೇಳಿದರು. ಲೈನ್ ಹೇಳಿದಾಕ್ಷಣ ತುಂಬಾನೆ ಇಷ್ಟ ಆಯಿತು. ಕಾಮನ್ ಮ್ಯಾನ್ ಒಬ್ಬನ ರಾಜಕೀಯ ಎಂಟ್ರಿ ಸುತ್ತ ಸಾಗುವ ಚಿತ್ರ ಇದಾಗಿದೆ. ಈ ಚಿತ್ರದ ಕೆಲಸ ನಿಜಕ್ಕೂ ಖುಷಿಕೊಟ್ಟಿದೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಅವರ ಜೊತೆಗಿನ ಅನುಭವ ಕೂಡ ವಿಶೇಷವಾಗಿತ್ತು. ಹೀಗೆ ಚಿತ್ರದ ನಾಯಕ ಗೌರಿಶಂಕರ್ (Gowrishankar) ಹೇಳಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಸುಮಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.














