Kerala Landslide: ವಯನಾಡ್ ಭೂಕುಸಿತಕ್ಕೆ ಅಸಲಿ ಕಾರಣ ಬಹಿರಂಗ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಸತೀಶನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Wayanad Kalladi Disaster: ಈ ದುರಂತಕ್ಕೆ ಗುರಿಯಾದ 9 ಮಂದಿ ಗಾಯಾಳುಗಳಿಗೆ ಮೇಪಾಡಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚುವರಿ ಚಿಕಿತ್ಸೆ ಬೇಕಾದರೆ ಕ್ಯಾಲಿಕಟ್‌ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲು ಸಿಎಂ ವಿಡಿ ಸತೀಶನ್ ಸೂಚನೆ ನೀಡಿದ್ದಾರೆ.

News18
News18

ಮೆಪ್ಪಾಡಿ: ಕೇರಳದಲ್ಲಿ (Kerala Rains) ಸುರಿಯುತ್ತಿರುವ ಭಾರೀ ಮಳೆಗೆ ಭೀಕರ ಅವಘಡ ಸಂಭವಿಸಿದ್ದು, ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಭೂಕುಸಿತ (Wayanad Meppadi Landslide) ಉಂಟಾಗಿ ಮೂವರು ಸಾವನ್ನಪ್ಪಿದ್ದು, ಮಣ್ಣಿನಡಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ.

ಸದ್ಯ 9 ಮಂದಿ ಗಾಯಾಳುಗಳಿಗೆ ಮೇಪಾಡಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚುವರಿ ಚಿಕಿತ್ಸೆ ಬೇಕಾದರೆ ಕ್ಯಾಲಿಕಟ್‌ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲು ಸಿಎಂ ವಿಡಿ ಸತೀಶನ್ ಸೂಚನೆ ನೀಡಿದ್ದಾರೆ. ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ, ಹರಿ ಕುಮಾರ್ (32), ದಿಲೀಪ್ (19),  ಸೂರಜ್ ಯಾದವ್ (25), ಸಂಜಯ್ ಠಾಕೂರ್ (35), ರಜನೀಶ್ (27),  ತನ್ಮಯ್ ಘೋಷ್ (28), ಕುಪಮಾಲ್ (37), ಕುಂಚು (39) ಮತ್ತು ಸಂತೋಷ್ ಕುಮಾರ್ ಸೇರಿದ್ದಾರೆ.

ಸಿಎಂ ಸತೀಶನ್ ಹೇಳಿದ್ದೇನು?

ಈ ಭೂಕುಸಿತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳಂ ಮುಖ್ಯಮಂತ್ರಿ ವಿಡಿ ಸತೀಶನ್, ‘ವಯನಾಡಿನ ಕಲ್ಲಾಡಿಯಲ್ಲಿ ಗುತ್ತಿಗೆದಾರರು ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ ಮಾಧ್ಯಮಗಳಿಗೆ ತಿಳಿಸಿದರು.

ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸರ್ಕಾರ ದೂರಿದ್ದು, ಎಲ್ಲಾ ಚಟುವಟಿಕೆಗಳನ್ನು ಮುಖ್ಯಮಂತ್ರಿ ಕಚೇರಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿ ಪರಸ್ಪರ ಸಮನ್ವಯದಲ್ಲಿ ಕೆಲಸ ಮಾಡುತ್ತಿದೆ. ಮಣ್ಣನ್ನು ತೆಗೆಯಲು ಅವರಿಗೆ ಮೊದಲೇ ಕೇಳಲಾಗಿತ್ತು. ಗುತ್ತಿಗೆದಾರರು ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.

ಇದನ್ನೂ ಓದಿ: Smart Investment: 55 ಅಡಿ ಎತ್ತರದ ತಾಳೆಮರಕ್ಕೆ ಮೆಟ್ಟಿಲು ಕಟ್ಟಿದ ಮಗ! ಅಪ್ಪನ ಮೇಲಿನ ಪ್ರೀತಿಯ ಕಥೆ ಕೇಳಿದ್ರೆ ನೀವು ಭೇಷ್ ಅಂತೀರಿ

ಭಾರೀ ಮಳೆ ಸುರಿದ ಹಿನ್ನೆಲೆ ವಯನಾಡಿನ ಮೆಪ್ಪಾಡಿಯಲ್ಲಿ ಸುರಂಗ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಬೆನ್ನಲ್ಲೇ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೂ ಹಲವರು ನೆಲದಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ರಸ್ತೆ ನಿರ್ಮಾಣಕ್ಕಾಗಿ ಅನೇಕ ಕಾರ್ಮಿಕರು ಈ ಜಾಗದಲ್ಲಿ ಕೆಲಸ ಮಾಡುತ್ತಿದ್ದರು, ಮೆಪ್ಪಾಡಿ ಬಳಿಯ ಮೀನಾಕ್ಷಿಪಾಲಂನಲ್ಲಿ ಈ ಅನಾಹುತ ಸಂಭವಿಸಿದ್ದು, ಭೂಕುಸಿತದಲ್ಲಿ ವಾಹನಗಳು ಸಹ ಸಿಲುಕಿಕೊಂಡಿವೆ ಎಂದು ಹೇಳಲಾಗಿದೆ.

ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ಕಾಮಗಾರಿ ನಡೆಯುತ್ತಿರುವ ಮೀನಾಕ್ಷಿ ಸೇತುವೆಯ ಬಳಿ ಈ ಘಟನೆ ನಡೆದಿದೆ. ಸುರಂಗ ಯೋಜನೆಯಲ್ಲಿ ತೊಡಗಿದ್ದ ಕಾರ್ಮಿಕರು ತಂಗಿದ್ದ ಸ್ಥಳದಿಂದ ಸ್ಥಳೀಯ ನಿವಾಸಿಗಳು 9 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಪೀಡಿತ ಪ್ರದೇಶದಲ್ಲಿ ಕೆಲವು ಮನೆಗಳು ಮತ್ತು ಹೋಂಸ್ಟೇಗಳಿವೆ ಎಂದು ತಿಳಿದು ಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed