Last Updated:
ಐಎಂಡಿ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಜೂನ್ 1 ರಿಂದ 8 ರವರೆಗೆ ಭಾರಿ ಮಳೆ, ಬಿರುಗಾಳಿ, ಸಿಡಿಲು ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ
ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ (Karnataka Weather) ಮುಂದಿನ ಕೆಲವು ದಿನಗಳು ಭಾರಿ ಏರುಪೇರಾಗಲಿದ್ದು, ವರುಣದೇವ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ! ಜೂನ್ 4 ರಿಂದಲೇ ಮುಂಗಾರು (Monsoon) ಮೋಡಗಳು ರಾಜ್ಯದ ಕರಾವಳಿಗೆ ಲಗ್ಗೆ ಇಡಲಿದ್ದು, ಜೂನ್ 8 ರಿಂದ ಅಸಲಿ ಆಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಜನತೆಗೆ ಮತ್ತೊಂದು ಮಹತ್ವದ ಎಚ್ಚರಿಕೆಯನ್ನು ನೀಡಿದ್ದು, ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ!
ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಜೂನ್ 3 ರಿಂದ ಜೂನ್ 5 ರವರೆಗೆ ಒಂದೆರಡು ಕಡೆಗಳಲ್ಲಿ 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಇನ್ನೂ ದಕ್ಷಿಣ ಒಳನಾಡಿನ ವಿಚಾರಕ್ಕೆ ಬಂದರೆ ಜೂನ್ 1 ಮತ್ತು ಜೂನ್ 5 ರಂದು ಭೀಕರ ಸಿಡಿಲು ಎಂಟ್ರಿ ಕೊಡಲಿದೆ. ಜೂನ್ 2 ರಿಂದ 4 ರವರೆಗೆ 30-40 ಕಿಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿಗೆ ಜೂನ್ 1 ಮತ್ತು 2 ರಂದು 30-40 ಕಿಮೀ ವೇಗದ ಗಾಳಿ ಬೀಸಲಿದ್ದು, ಜೂನ್ 3 ರಿಂದ 5 ರವರೆಗೆ ಅಪಾಯಕಾರಿ ಸಿಡಿಲಿನ ಆರ್ಭಟ ಹಾಗೂ ಭಾರಿ ಮಳೆ ಇರಲಿದೆ.
ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಬಿಸಿಲು ಮತ್ತು ಮೋಡದ ವಾತಾವರಣ ಇರಲಿದೆ. ಸಂಜೆ ಹಾಗೂ ರಾತ್ರಿ ವೇಳೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ತಡರಾತ್ರಿ ತುಂತುರು ಮಳೆ ಸುರಿಯಬಹುದು. ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಮುನ್ಸೂಚನೆ ಇದ್ದರೆ, ಉತ್ತರ ಕನ್ನಡದಲ್ಲಿ ಕೇವಲ ಮೋಡ ಅಥವಾ ತುಂತುರು ಮಳೆ ಇರಬಹುದು. ಜೂನ್ 4 ರಿಂದ ಮುಂಗಾರು ಆರಂಭದ ಮುನ್ಸೂಚನೆ ಇದ್ದು, ಜೂನ್ 8 ರಿಂದ ಮಳೆ ಭೀಕರವಾಗಿ ಹೆಚ್ಚಾಗಲಿದೆ!
ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಭಾರಿ ಮಳೆ ಮುಂದುವರಿಯುವ ಲಕ್ಷಣಗಳಿವೆ. ಬೆಳಗಾವಿ ಉತ್ತರ, ಕೊಪ್ಪಳ, ರಾಯಚೂರು, ಹಾವೇರಿ ಜಿಲ್ಲೆಗಳ ಜನರೇ ಗಮನಿಸಿ, ನಿಮ್ಮತ್ತ ಸಂಜೆ ಅಥವಾ ರಾತ್ರಿ ಮಳೆರಾಯ ಧಾವಿಸಿ ಬರಲಿದ್ದಾನೆ. ಮುಂದಿನ ದಿನಗಳಲ್ಲೂ ಇಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಜೂನ್ 8 ರವರೆಗೆ ಮಳೆ ತಪ್ಪಿದ್ದಲ್ಲ
Bangalore [Bangalore],Bangalore,Karnataka













