Karnataka Rain Forecast: ರೈತರಿಗೆ ಬಿಗ್ ಅಲರ್ಟ್ ಕೊಟ್ಟ ಐಎಂಡಿ; ಮೇನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!


Last Updated:

ಕರುನಾಡಲ್ಲಿ ಬೇಸಿಗೆ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲಿನ ಮಳೆ ಹತ್ತಾರು ಅವಾಂತರ ಸೃಷ್ಟಿಸಿದೆ.

ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!
ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!

ಬೆಂಗಳೂರು: ಮಳೆ ಬಂದ್ರೆ ಅನ್ನದಾತರ ಬದುಕು (Farmers Life) ಹಸನಾಗುತ್ತೆ ಅಂತೀವಿ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಸುರಿಯೋ ಮಳೆ ರೈತರ ಬದುಕನ್ನೇ ಛಿದ್ರಛಿದ್ರ ಮಾಡ್ತಿದೆ. ಇನ್ನೂ ಬೇಸಿಗೆಯೇ ಮುಗಿದಿಲ್ಲ (Summer). ಮಳೆಗಾಲವಂತೂ ಶುರುವಾಗಿಯೇ ಇಲ್ಲ. ಅಷ್ಟರಲ್ಲೇ ವರುಣನ ಅಟ್ಟಹಾಸ ಜೋರಾಗಿದೆ. ಅಕಾಲಿಕ ಮಳೆ ಅನ್ನೋದು ಕರುನಾಡ ರೈತರನ್ನ ಬಿಟ್ಟೂ ಬಿಡದೆ ಬಾದಿಸ್ತಿದೆ. ಮೇಲಿಂದ ಮೇಲೆ ಸುರೀತಿರೋ ಆಲಿಕಲ್ಲು ಮಳೆ (Hailstorm) , ರೈತರ ಬದುಕನ್ನೇ ಕೊಚ್ಕೊಂಡು ಹೋಗ್ತಿದೆ. ಹನಿನೀರಿಗೂ ಒದ್ದಾಡಿ ಬೆಳೆ ಬೆಳೆದಿದ್ದವ್ರು ಕಣ್ಣೀರಿಡೋದಕ್ಕೆ ಶುರು ಮಾಡಿದ್ದಾರೆ. ಒಳ್ಳೆ ಬೆಳೆಯ ನಿರೀಕ್ಷೆ ಹೊತ್ತಲ್ಲೇ ಬೆಳೆಯೆಲ್ಲಾ ಮಣ್ಣುಪಾಲಾಗಿದೆ.

ಇದರ ನಡುವೆಯೇ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಈ ಬಾರಿ ಮೇ ತಿಂಗಳಿನಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಮುಂಗಾರು ಈ ಬಾರಿ ಬೇಗ ಪ್ರವೇಶ ಮಾಡಲಿದ್ದು, ಮೇ 14 ಅಥವಾ 16ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತದ ಪೂರ್ವ, ಈಶಾನ್ಯ ಮತ್ತು ಪೂರ್ವ ಮಧ್ಯ ಭಾಗದ ರಾಜ್ಯಗಳಲ್ಲಿ ಹೊರತುಪಡಿಸಿ ಉಳಿದ ಕಡೆ ನಿಗದಿತಕ್ಕಿಂತ ಹೆಚ್ಚು ಮಳೆಯಾಗಲಿದೆಯಂತೆ. ಉಳಿದಂತೆ ಹಿಮಾಲಯ, ಪೂರ್ವ ಕರಾವಳಿ, ಗುಜರಾತ್, ಮಹಾರಾಷ್ಟ್ರದಲ್ಲಿ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿರಲಿದೆ. ಅದರಲ್ಲೂ ದಕ್ಷಿಣ ಭಾರತಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಮೇ ತಿಂಗಳ ಆರಂಭದಲ್ಲಿ ದಕ್ಷಿಣ ಒಳನಾಡು ಮತ್ತಿ ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಸುಮಾರು 131 ಮೀಮೀ ಮಳೆಯಾಗುತ್ತದೆ. ಅದರಲ್ಲೂ ಮೇ 23 ರಿಂದ 29ರ ವರೆಗೂ ಕೇರಳ ಮತ್ತು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಮಿಂಚು ಮತ್ತು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Actress: ಸೀತಾ ಅಂತ ಇದ್ದ ಹೆಸರು ಯಾಸ್ಮಿನ್ ಅಂತ ಬದಲಿಸಿಕೊಂಡಿದ್ದೇಕೆ? ಕೊನೆಗೂ ಕಾರಣ ಬಿಚ್ಚಿಟ್ಟ ಕಿರುತೆರೆ ನಟಿ

ಇಂದು ಕರ್ನಾಟಕದ ವಿವಿಧ ಜಿಲ್ಲೆಗಳ ತಾಪಮಾನ ವರದಿ ನೋಡುವುದಾದರೆ, ಬೆಂಗಳೂರು ನಗರ : 35° – 21°, ಬೆಂಗಳೂರು ಗ್ರಾಮಾಂತರ : 36° – 18°, ಮೈಸೂರು : 35° – 24°, ಕಲಬುರಗಿ : 41° – 28°, ಬೀದರ್ : 44° – 27°, ರಾಯಚೂರು : 42° – 26°, ದಕ್ಷಿಣ ಕನ್ನಡ : 33° -26°, ಹುಬ್ಬಳ್ಳಿ : 38° – 24°, ಧಾರವಾಡ : 38° – 25°, ಬೆಳಗಾವಿ : 37° – 21°, ಶಿವಮೊಗ್ಗ : 36° – 22°, ದಾವಣಗೆರೆ : 39° – 24°, ಬಳ್ಳಾರಿ : 41° – 29°, ತುಮಕೂರು : 36° – 18°, ಚಿಕ್ಕಬಳ್ಳಾಪುರ : 37° – 17°, ರಾಮನಗರ : 36° – 18° ದಾಖಲಾಗುವ ನಿರೀಕ್ಷೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed