Karnataka Rain: ಮಳೆರಾಯನ ಮ್ಯಾಜಿಕ್, ಕೇವಲ 5 ದಿನದಲ್ಲಿ ಡ್ಯಾಂಗಳಿಗೆ ಹರಿದು ಬಂದ 50 ಟಿಎಂಸಿಗೂ ಹೆಚ್ಚು ನೀರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಐದೇ ದಿನದಲ್ಲಿ 50 ಟಿಎಂಸಿಗೂ ಹೆಚ್ಚು ನೀರು


Last Updated:

ರಾಜ್ಯದಲ್ಲಿ ಭಾರೀ ಮಳೆಯಿಂದ ಜಲಾಶಯಗಳು ಭರ್ತಿ. 5 ದಿನಗಳಲ್ಲಿ 50 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ. ಬರಗಾಲದ ಭೀತಿ ದೂರ, ರೈತರಿಗೆ ಸಂತಸ.

ಐದೇ ದಿನದಲ್ಲಿ 50 ಟಿಎಂಸಿಗೂ ಹೆಚ್ಚು ನೀರು
ಐದೇ ದಿನದಲ್ಲಿ 50 ಟಿಎಂಸಿಗೂ ಹೆಚ್ಚು ನೀರು

ಬೆಂಗಳೂರು: ರಾಜ್ಯದ ರೈತರಿಗೆ (Farmer) ನಿಜಕ್ಕೂ ಇದು ಹಬ್ಬದ ಕಾಲ. ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯು (Rain), ಬರಗಾಲದ ಭೀತಿಯಲ್ಲಿದ್ದ ಕನ್ನಡಿಗರಿಗೆ ದೊಡ್ಡ ನಿರಾಳತೆಯನ್ನು ತಂದಿದೆ. ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಖಾಲಿ ಬಿದ್ದಿದ್ದ ಜಲಾಶಯಗಳು (Reservoir), ಇದೀಗ ಕೇವಲ ಐದೇ ದಿನಗಳಲ್ಲಿ ಮೈದುಂಬಿಕೊಂಡಿವೆ.

ಆತಂಕದಿಂದ ನಿರಾಳತೆವರೆಗೆ

ಜೂನ್ ತಿಂಗಳಲ್ಲಿ ‘ಎಲ್ ನಿನೋ’ ಪರಿಣಾಮದಿಂದಾಗಿ ಮುಂಗಾರು ಮಳೆ ಕ್ಷೀಣಿಸಿತ್ತು, ಇದರಿಂದ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಉಂಟಾಗಿತ್ತು. ಜುಲೈ 4ರಂದು ರಾಜ್ಯದ 22 ಪ್ರಮುಖ ಅಣೆಕಟ್ಟುಗಳಲ್ಲಿ ಕೇವಲ 66.62 ಟಿಎಂಸಿ ನೀರು ಮಾತ್ರ ಸಂಗ್ರಹವಿತ್ತು. ಆದರೆ, ಕಳೆದ ಐದು ದಿನಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಜಲಾಶಯಗಳಲ್ಲಿನ ನೀರಿನ ಪ್ರಮಾಣ ಬರೋಬ್ಬರಿ 117 ಟಿಎಂಸಿಗೆ ಏರಿಕೆಯಾಗಿದೆ ಎಂದು ಕನ್ನಡಪ್ರಭ ದಿನ ಪತ್ರಿಕೆ ವರದಿ ಮಾಡಿದೆ.
ಐದೇ ದಿನದಲ್ಲಿ 50 ಟಿಎಂಸಿಗೂ ಹೆಚ್ಚು ನೀರು

ಜಲಸಂಪನ್ಮೂಲ ಇಲಾಖೆಯ ವರದಿಯ ಪ್ರಕಾರ, ಜುಲೈ 4 ರಿಂದ ಜುಲೈ 9 ರವರೆಗೆ ಕೇವಲ ಐದು ದಿನಗಳಲ್ಲಿ ಜಲಾಶಯಗಳಿಗೆ 50.91 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ. ಅಂದರೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣವು ಬಹುತೇಕ ಡಬಲ್ ಆಗಿದೆ.

ಬರಗಾಲದ ಭೀತಿ ದೂರವಾಗಲಿದೆಯೇ?

ಮಳೆ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಕಾಡುತ್ತಿದ್ದ ಬರಗಾಲದ ಆತಂಕ ದೂರವಾಗುವ ಆಶಾವಾದವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ಕೃಷಿ ಚಟುವಟಿಕೆಗಳಿಗೆ ಜೀವಕಳೆ ನೀಡಿದೆ. ಮಳೆರಾಯನ ಈ ಅನಿರೀಕ್ಷಿತ ಕೃಪೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports