Last Updated:
ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಕಾವೇರಿ, ಕೃಷ್ಣಾ ಕಣಿವೆ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ, ಹೇಮಾವತಿ, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹಿಡ್ಕಲ್, ನಾರಾಯಣಪುರ ಜಲಾಶಯಗಳು ಭರ್ತಿ. ಕೆ.ಆರ್.ಎಸ್ ನೀರಿನ ಮಟ್ಟ ಇಳಿಕೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ಕಾವೇರಿ (Cauvery) ಮತ್ತು ಕೃಷ್ಣಾ ಕಣಿವೆ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Water Level) ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಪ್ರಮುಖ ಅಣೆಕಟ್ಟುಗಳು (Dams) ಭರ್ತಿಯಾಗುವ ಹಂತ ತಲುಪಿದ್ದರೆ, ಇನ್ನು ಕೆಲವು ಜಲಾಶಯಗಳಿಗೆ ಒಳಹರಿವು ಭಾರಿ ಪ್ರಮಾಣದಲ್ಲಿ ಮುಂದುವರಿದಿದೆ. ಜಲಸಂಪನ್ಮೂಲ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಸಂಪೂರ್ಣ ವಿವರ ಇಲ್ಲಿದೆ.














