Last Updated:
ರಾಜ್ಯದಲ್ಲಿ ಮುಂಗಾರು ಮಳೆ ಜೋರು, ಪ್ರಮುಖ ಜಲಾಶಯಗಳು ಭರ್ತಿ. ಹಿಡಕಲ್, ಭೀಮಾ 100% ತುಂಬಿವೆ. ಆಲಮಟ್ಟಿ, ನಾರಾಯಣಪುರ ಡೇಂಜರ್ ಝೋನ್. ನದಿ ತೀರದ ಜನರಿಗೆ ಅಲರ್ಟ್.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಗನಕ್ಕೇರಿದ್ದು, ಹಲವು ಡ್ಯಾಮ್‍ಗಳು (Dams) ಭರ್ತಿಯಾಗಿ ಅಪಾಯದ ಮಟ್ಟ ತಲುಪಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ನದಿ ತೀರದ ಜನರಿಗೆ ಬಿಗ್ ಅಲರ್ಟ್ (Alert) ನೀಡಲಾಗಿದೆ.














