Last Updated:
ಕರೀನಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ನಟಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಊಹಿಸಿದ್ದರು. ಇದೀಗ ಈ ಚರ್ಚೆಗೆ ಸ್ವತಃ ಕರೀನಾ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ನ ಬೆಬೊ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಕರೀನಾ ಕಪೂರ್ (Kareena Kapoor) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಥವಾ ಫ್ಯಾಷನ್ ಲುಕ್ಗಾಗಿ ಅಲ್ಲ, ಬದಲಾಗಿ ಮೂರನೇ ಗರ್ಭಧಾರಣೆಯ ಕುರಿತ ವದಂತಿಗಳಿಗಾಗಿ. ಜಿಮ್ನಿಂದ ಹೊರಬರುತ್ತಿದ್ದ ಕರೀನಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ನಟಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಊಹಿಸಿದ್ದರು. ಇದೀಗ ಈ ಚರ್ಚೆಗೆ ಸ್ವತಃ ಕರೀನಾ ಪ್ರತಿಕ್ರಿಯಿದ್ದಾರೆ.














