Karavali Movie: ನಾಳೆಯಿಂದ ‘ಕರಾವಳಿ’ ಅಬ್ಬರ! ಪ್ರಜ್ವಲ್‌ಗೆ ಬಿಗ್ ಹಿಟ್ ಕೊಡುತ್ತಾ ಈ ಸಿನಿಮಾ? | | ACTPnews

ಪ್ರಜ್ವಲ್‌ ದೇವರಾಜ್‌ಗೆ ಬಾಕಿ ಹಣ ಕ್ಲೀಯರ್; ವಿವಾದ ಎಂಡ್ ಆಗೋ ಸಾಧ್ಯತೆ!


Last Updated:

ಕನ್ನಡದಲ್ಲಿ ಈ ವಾರ ಕರಾವಳಿ ಚಿತ್ರದ ಅಬ್ಬರ ಶುರುವಾಗಲಿದೆ. ಈ ದಿನ ಕನ್ನಡದ ಬೇರೆ ಚಿತ್ರ ಬರ್ತಿಲ್ಲ! ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕರಾವಳಿ ಚಿತ್ರದ್ದೇ ಎಲ್ಲೆಡೆ ಅಬ್ಬರ ನೋಡಿ
ಕರಾವಳಿ ಚಿತ್ರದ್ದೇ ಎಲ್ಲೆಡೆ ಅಬ್ಬರ ನೋಡಿ

ಕರಾವಳಿ ಚಿತ್ರ (Karavali Movie) ಪ್ರೀಮಿಯರ್ ಶೋದಲ್ಲಿಯೆ (Premier Show) ಗೆಲುವು ಕಂಡಿದೆ. ಇತರ ಜನ ಇನ್ನು ಇದನ್ನ ನೋಡೋದು ಬಾಕಿದೆ. ಈ ಶುಕ್ರವಾರ ಜುಲೈ-24 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಈ ಒಂದು ಚಿತ್ರ ರಿಲೀಸ್ ಆಗುತ್ತಿರೋ ದಿನ ಕನ್ನಡದ ಬೇರೆ ಯಾವುದೇ ಚಿತ್ರ ಬರ್ತಿಲ್ಲ. ಆದರೆ, ತಿಮಿಳಿನ ಜನನಾಯಗನ್ ಚಿತ್ರ (Jana Nayagan Movie) ಜುಲೈ-23 ರಂದೇ ತೆರೆ ಕಂಡಿದೆ. ಇದು ಬಿಟ್ಟರೆ ಕನ್ನಡದಲ್ಲಿ ಕರಾವಳಿ ಚಿತ್ರದ (Karavali Movie) ಅಬ್ಬರವೇ ನೋಡಿ. ಈ ಒಂದು ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಸಿನಿಮಾ ಅಬ್ಬರ

ಕರಾವಳಿ ಚಿತ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಜುಲೈ-24 ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ದಿನ ಕನ್ನಡದ ಬೇರೆ ಯಾವುದೇ ಚಿತ್ರ ಬರ್ತಿಲ್ಲ ಬಿಡಿ.
prajwal devaraj raj b shetty karavali movie release latest updates

ಜುಲೈ-24 ರಂದು ಚಿತ್ರ ರಿಲೀಸ್

ಕರಾವಳಿ ಒಂದೇನೇ ಈ ದಿನ ತೆರೆ ಕಾಣುತ್ತಿದೆ. ಆದರೆ, ತಮಿಳುನಾಡಿನ ಸಿ.ಎಂ. ಇಳಯದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರ ಜುಲೈ-23 ರಂದೇ ರಿಲೀಸ್ ಆಗಿದೆ. ಇದು ಬಿಟ್ಟರೆ, ಕನ್ನಡದಲ್ಲಿ ಕರಾವಳಿ ಚಿತ್ರವೊಂದೇ ತೆರೆ ಕಾಣುತ್ತಿದೆ.

ಸು ಫ್ರಮ್ ಸೋ ದಿನವೇ

ಕರಾವಳಿ ಚಿತ್ರವು ಸು ಫ್ರಮ್ ಸೋ ಚಿತ್ರ ಬಂದ ದಿನವೇ ಬರ್ತಿದೆ. ಕಳೆದ ವರ್ಷದ ಜುಲೈ-25 ರಂದು ಸು ಫ್ರಮ್ ಸೋ ಬಂದಿತ್ತು. 6 ಕೋಟಿ ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ 100 ಕೋಟಿ ಮಾಡಿ, ಹೊಸ ದಾಖಲೆ ಮತ್ತು ಹೊಸ ಭರವಸೆ ಮೂಡಿಸಿದೆ.

ನಾಲ್ಕು ಊರಲ್ಲಿ ಪ್ರೀಮಿಯರ್

ರಾಜ್ಯದ ನಾಲ್ಕು ಪ್ರಮುಖ ಊರುಗಳಲ್ಲಿ ಈ ಕರಾವಳಿ ಚಿತ್ರದ ಪ್ರೀಮಿಯರ್ ಶೋ ಆಗಿದೆ. ಜುಲೈ-19 ರಂದು ಮಂಗಳೂರು, ಜುಲೈ-20 ರಂದು ಶಿವಮೊಗ್ಗ, ಜುಲೈ-21 ರಂದು ದಾವಣಗೆರೆ, ಜುಲೈ-22 ಮೈಸೂರಿನಲ್ಲಿ ಪ್ರೀಮಿಯರ್ ಶೋ ಆಗಿದೆ. ಜುಲೈ-23 ರಂದು ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರೀಮಿಯರ್ ಪ್ಲಾನ್ ಆಗಿದೆ.

ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದಾರೆ. ಸಂಪದಾ ನಾಯಕಿ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಮಿತ್ರ ಇಲ್ಲಿ ಮಹಾಬಲ ಅನ್ನುವ ಸೀರಿಯಸ್ ರೋಲ್ ಮಾಡಿದ್ದಾರೆ.

prajwal devaraj raj b shetty karavali movie release latest updates

ಪ್ರಜ್ವಲ್ ದೂರ ದೂರ
ಪ್ರೀಮಿಯರ್ ಶೋದಲ್ಲಿ ಅಬ್ಬರ

ಕರಾವಳಿ ಚಿತ್ರದ ಅಬ್ಬರ ಜೋರಾಗಿದೆ. ಪ್ರೀಮಿಯರ್ ಶೋದಲ್ಲಿಯೇ ಈ ಚಿತ್ರವನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿದ ರಾಜ್ ಬಿ ಶೆಟ್ಟಿ ಅವರ ಮಹಾವೀರ ಮತ್ತು ಮಿತ್ರ ಅವರ ಮಹಾಬಲ ಪಾತ್ರವನ್ನ ತುಂಬಾನೆ ಮೆಚ್ಚಿಕೊಂಡಿದ್ದಾರೆ.

ಪ್ರಜ್ವಲ್ ದೂರ ದೂರ

ಪ್ರಜ್ವಲ್ ದೇವರಾಜ್ ಈ ಚಿತ್ರದಿಂದ ದೂರವೇ ಉಳಿದಿದ್ದಾರೆ. ಬಾಕಿ ಇರೋ ದುಡ್ಡನ್ನು ಪ್ರಜ್ವಲ್ ದೇವರಾಜ್ ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಚಿತ್ರ ತಂಡ ಅಧಿಕೃತವಾಗಿಯೇ ಹೇಳಿಕೊಂಡಿದೆ. ಚಿತ್ರದ ಪ್ರಚಾರಕ್ಕೆ ಬರಬೇಡಿ ಅಂತ ಚಿತ್ರ ತಂಡವೇ ಹೇಳಿದೆ. ಹಾಗಾಗಿಯೇ ನಾನು ಚಿತ್ರ ಪ್ರಚಾರಕ್ಕೆ ಹೋಗಿಲ್ಲ ಅಂತಲೇ ಪ್ರಜ್ವಲ್ ದೇವರಾಜ್ ಹೇಳಿಕೊಂಡಿದ್ದಾರೆ. ಇದು ಬಿಟ್ಟರೆ, ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಭಾರೀ ಸದ್ದು ಮಾಡುವಂತೆ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed