Last Updated:
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಸಿಕ್ಸ್‌ಪ್ಯಾಕ್ ಮಾಡಿಕೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಅದಕ್ಕೇನೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇವು ಅಂತ ಗುರುದತ್ತ ಗಾಣಿಗ ಹೇಳಿಕೊಂಡಿದ್ದಾರೆ. ಆದರೆ ಪ್ರಜ್ವಲ್ ದೇವರಾಜ್ ಹೇಳೋದೇ ಬೇರೆ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಕರಾವಳಿ ಚಿತ್ರದ (Karavali Movie) ಪಾತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ಸಿಕ್ಸ್‌ಪ್ಯಾಕ್ ಮಾಡ್ಬೇಕಿತ್ತು. ಆದರೆ, ಪ್ರಜ್ವಲ್ ಇಲ್ಲಿ ದೈಹಿಕವಾಗಿಯೇ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ, ಹೇರ್ ಸ್ಟೈಲ್ ಚೇಂಜ್ ಆಗಿದೆ. ಲಾಂಗ್ ಹೇರ್‌ನಿಂದ ಶಾರ್ಟ್ ಹೇರ್ ಮಾಡಿಕೊಂಡಿದ್ದಾರೆ. ಪಾತ್ರಕ್ಕೆ ಬೇಕಿರೋ ರೀತಿನೇ ಕಾಣಿಸಿಕೊಂಡಿರೋದು ಇದೆ. ಈ ಚಿತ್ರದ ಪಾತ್ರವನ್ನ ಒಪ್ಪಿಕೊಳ್ಳುವಾಗ ಎಲ್ಲವನ್ನೂ ಮಾಡ್ತೀನಿ ಅಂತಲೇ ಒಪ್ಪಿಕೊಂಡಿದ್ರು. ಆದರೆ, ಸಿಕ್ಸ್‌ಪ್ಯಾಕ್ (Six Pack) ಮಾಡಲೇ ಇಲ್ಲ ಅಂತಲೆ ನಿರ್ದೇಶಕ ಗುರುದತ್ ಗಾಣಿಗ (Gurudatha Ganiga) ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಜ್ವಲ್ ಏನ್ ಹೇಳಿದ್ದಾರೆ ಅನ್ನುವ ಕುತೂಹಲವು ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಕರಾವಳಿ ಸಿಕ್ಸ್ ಪ್ಯಾಕ್ ಕತೆ
(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)
ಬಾಕಿ ಉಳಿದ ಹಣ ಕೊಟ್ಮೇಲೆ ಇನ್ನು ಜಿಎಸ್‌ಟಿ ಕೊಟ್ಟಿಲ್ಲ ಅಂತಲೂ ಹೇಳಿದ್ದಾರೆ. ಆದರೆ, ಈ ಚಿತ್ರಕ್ಕೆ ಇದೊಂದೆ ವಿಷಯ ಅಲ್ಲ. 1 ಕೋಟಿ 25 ಲಕ್ಷ ಸಂಭಾವನೆ ಕೊಡಲು ಕಾರಣವೂ ಇತ್ತು.
ಪ್ರಜ್ವಲ್ ದೇವರಾಜ್ ಅವರು ಚಿತ್ರದ ಪಾತ್ರಕ್ಕೆ ಸಿಕ್ಸ್‌ಪ್ಯಾಕ್ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರು. ಇದು ಚಿತ್ರದ ಕತೆಗೂ ಬಹುಮುಖ್ಯವಾಗಿತ್ತು.
ಪ್ರಜ್ವಲ್ ದೇವರಾಜ್ ಕೂಡ ಇನ್ನೂ ಒಂದು ವಿಚಾರದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಸದ್ಯದ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಂದ್ರೆ ಸಿಕ್ಸ್ ಪ್ಯಾಕ್ ಮಾಡದೇ ಇರೋದು ಕೂಡ ಕಾರಣ ಅಂತಲೂ ಗುರುದತ್ತ ಗಾಣಿಗ ಹೇಳಿದ್ದಾರೆ.
ಪ್ರಜ್ವಲ್ ಹೇಳಿದ್ದೇನು?
(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್‌ಸ್ಟಾಗ್ರಾಮ್)
ಆದರೆ, ಈ ವಿಚಾರವಾಗಿ ಒಂದು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ಸಂಭಾವನೆಯ ಬಾಕಿ ಹಣ ಕೊಡಬೇಕಿತ್ತು. ಅದನ್ನ ಕೊಟ್ಟಿರಲಿಲ್ಲ. ಅದಕ್ಕೇನೆ ಡಬ್ಬಿಂಗ್ ಮಾಡ್ಲಿಲ್ಲ. ದೈಹಿಕ ರೂಪಾಂತರವೂ ಕಾರಣ ಅನ್ನೋ ವಿಷಯ ಈಗೀನ ವಿವಾದಕ್ಕೆ ಸಂಬಂಧವೇ ಇಲ್ಲ ಅಂತ ಪ್ರಜ್ವಲ್ ದೇವರಾಜ್ ಬರೆದಿದ್ದಾರೆ.
ಪ್ರಜ್ವಲ್ ದೇವರಾಜ್ ಅವರಿಗೆ ಕೊಡಬೇಕಿರೋ ಬಾಕಿ ದುಡ್ಡನ್ನ ಗುರುದತ್ತ ಗಾಣಿಗ ಕೊಟ್ಟಿದ್ದಾರೆ. ಅದನ್ನ ಅಧಿಕೃತವಾಗಿಯೆ ಹೇಳಿಕೊಂಡಿದ್ದಾರೆ.
ಆದರೆ, ಪ್ರಜ್ವಲ್ ಈ ವಿಚಾರದಲ್ಲಿ ಇನ್ನು ಜಿಎಸ್‌ಟಿ ದುಡ್ಡು ಬಂದಿಲ್ಲ ಅಂತ ಹೇಳಿರೋದು ಇದೆ. ಒಟ್ಟಾರೆ, ಕರಾವಳಿ ಚಿತ್ರದ ಡಬ್ಬಿಂಗ್ ವಿವಾದಿಂದ ಸಿಕ್ಸ್‌ಪ್ಯಾಕ್ ವಿಚಾರವೂ ಹೊರ ಬಂದಿದೆ. ನನ್ನ ಪರವಾನಗಿ ಇಲ್ಲದೆ ಬೇರೆ ಅವರ ಕಡೆಯಿಂದ ಡಬ್ಬಿಂಗ್ ಮಾಡಿಸಿದ್ದಾರೆ ಅಂತಲೂ ಪ್ರಜ್ವಲ್ ದೂರಿದ್ದಾರೆ.
ಆದರೆ, ಈ ಚಿತ್ರ ಪ್ರಜ್ವಲ್ ದೇವರಾಜ್ ಧ್ವನಿ ಇಲ್ಲದೆ ರಿಲೀಸ್ ಆಗುತ್ತಾ? ಇಲ್ಲ ಪ್ರಜ್ವಲ್ ದೇವರಾಜ್ ಧ್ವನಿಯೊಂದಿಗೆ ಬರುತ್ತಾ ಅನ್ನುವ ಕುತೂಹಲವು ಹೆಚ್ಚಾಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














