Karavali Movie: ಕರಾವಳಿ ಕಾಂಟ್ರವರ್ಸಿ! ಸಂಭಾವನೆ ವಿಚಾರಕ್ಕೆ ವೈಮನಸ್ಸು? ರಿಲೀಸ್​ಗೆ ವಾರಗಳಿರುವಾಗ ಏನಾಯ್ತು? ’ Karavali movie delaying what is the reason | | ACTPnews

ಹೊರ ಬಿತ್ತು"ಕರಾವಳಿ" ಚಿತ್ರದ ಹೊಸ ನ್ಯೂಸ್!


Last Updated:

Karavali Movie: ರಿಲೀಸ್​​ಗೆ ಕೆಲವೇ ವಾರಗಳಿರುವಾಗ ಏನಾಯಿತು? ಕರಾವಳಿ ಸಿನಿಮಾ ವಿವಾದ ಏನು? ಸಂಭಾವನೆ ವಿಚಾರಕ್ಕೆ ಮುನಿಸು?

ಹೊರ ಬಿತ್ತು"ಕರಾವಳಿ" ಚಿತ್ರದ ಹೊಸ ನ್ಯೂಸ್!
ಹೊರ ಬಿತ್ತು”ಕರಾವಳಿ” ಚಿತ್ರದ ಹೊಸ ನ್ಯೂಸ್!

ಸ್ಯಾಂಡಲ್​ವುಡ್​ನಲ್ಲಿ (Sandalwood) ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ (Cinema) ಈಗ ಕಾಂಟ್ರವರ್ಸಿ ಮಧ್ಯೆ ಸಿಲುಕಿಕೊಂಡಿದ್ದೆ. ಸಾಂಗ್ (Song) ಮೂಲಕ ಸದ್ದು ಮಾಡಿದ ಕರಾವಳಿ ಸಿನಿಮಾ ಹೊಸತನದ ಜೊತೆ ಬರುತ್ತೆ, ಪಕ್ಕಾ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೆ ಎನ್ನಲಾಗಿತ್ತು. ಹಾಡು ನೋಡಿದ ಸಿನಿಮಾ ಪ್ರೇಮಿಗಳು ಇಷ್ಟಪಟ್ಟಿದ್ದರು. ಆದರೆ ಈಗ ಸಿನಿಮಾ ವಿವಾದದಿಂದ ಸುದ್ದಿಯಾಗಿದೆ.

ಕರಾವಳಿ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರು 1ಕೋಟಿ 25 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರತಂಡ ಇನ್ನೂ 25 ಲಕ್ಷ ಬಾಕಿ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ.

ಸಂಭಾವನೆ ಪೂರ್ಣಗೊಳ್ಳದ ಹಿನ್ನಲೆ‌ ಪ್ರಜ್ವಲ್ ದೇವರಾಜ್ ಅವರು ಗೈರಾದ್ರಾ ಅನ್ನುವ ಪ್ರಶ್ನೆ ಮೂಡಿದ್ದು, ಡಬ್ಬಿಂಗ್ ಮಾಡಿ ಅಂದರೂ ಮಾಡದ ಪ್ರಜ್ವಲ್ ದೇವರಾಜ್ ಹಾಗೂ ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ನಡುವೆ ವೈಮನಸ್ಸು ಮೂಡಿದೆಯಾ ಎನ್ನುವ ಚರ್ಚೆ ಶುರುವಾಗಿದೆ.

2 ತಿಂಗಳಿಂದ ಪೋನ್ ಕರೆಗಳಿಗೆ ಮೆಸೇಜ್ ಗಳಿಗೆ ಪ್ರಜ್ವಲ್ ಅವರು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಸದ್ಯ ಸಿನಿಮಾ ಬಿಡುಗಡೆ ತಡವಾಗೋದಕ್ಕೆ ಪ್ರಜ್ವಲ್ ಕಾರಣವಲ್ಲ ಎಂದು ನಿರ್ದೇಶಕ ಗುರುದತ್ ಗಾಣಿಗ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ವರದಿ: ಗೀತಾ ಹಾಸನ್, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *