Last Updated:
ಟಾಕ್ಸಿಕ್ ಸಿನಿಮಾ ಎಫೆಕ್ಟ್ ಜೋರಾಗಿದೆ. ಕಳೆದ ವಾರ ಕನ್ನಡದಲ್ಲಿ ಒಂದೇ ಚಿತ್ರ ರಿಲೀಸ್ ಆಯಿತು. ಆದರೆ, ಈ ವಾರ ಒಂದೇ ಒಂದು ಚಿತ್ರವೂ ಇಲ್ಲ ನೋಡಿ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ (Toxic Movie) ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಬರೋಕೆ ಇನ್ನು 8 ದಿನಗಳೇ ಇವೆ. ಆದರೆ, ಇದರ ಎಫೆಕ್ಟ್ ಈಗಲೇ ಶುರು ಆಗಿದೆ. ಮುಂದಿನ ವಾರ ಅತಿ ದೊಡ್ಡ ಸಿನಿಮಾ (Big Movie) ಬರ್ತಿದೆ. ಇದರ ಮುಂದೆ ನಿಲ್ಲೋಕೆ ಆಗುತ್ತಾ? ನೋ ವೇ ಚಾನ್ಸೇ ಇಲ್ಲ ಬಿಡಿ. ಈ ಒಂದು ಪ್ರ್ಯಾಕ್ಟಿಕಲ್ ಸತ್ಯವನ್ನ ಕನ್ನಡ ಸಿನಿಮಾ (Kannada Movie) ನಿರ್ಮಾಪಕರು ತಿಳಿದುಕೊಂಡಿದ್ದಾರೆ. ಡೈರೆಕ್ಟರ್ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೂ ಇದು ಅರ್ಥ ಆಗಿದೆ. ಹಾಗಾಗಿಯೇ ಇವರು ತಮ್ಮ ಅಮೆರಿಕಾ ಅಮೆರಿಕಾ-2 ಚಿತ್ರವನ್ನ (America America-2 Movie) ಸೆಪ್ಟೆಂಬರ್ 11 ರಂದು ರಿಲೀಸ್ ಮಾಡುತ್ತಿದ್ದಾರೆ. ಆದರೆ, ವಿಷಯ ಇನ್ನೂ ಒಂದು ಇದೆ. ಅದು ಈ ವಾರದ ರಿಲೀಸ್ ಮ್ಯಾಟರ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ.














