Last Updated:
ಸ್ಟಾರ್ ಸುವರ್ಣ ವಾಹಿನಿಯ ಆಸೆ ಸೀರಿಯಲ್ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಮಧ್ಯಮ ವರ್ಗದ ಕತೆಯ ಈ ಸೀರಿಯಲ್ ಜನರ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. 3 ವರ್ಷದ ಹಿಂದೆ ಶುರು ಆದ ಈ ಸೀರಿಯಲ್ ಇದೀಗ ಹೊಸ ಸಾಧನೆ ಮಾಡಿ, ಜನರ ಪ್ರೀತಿಯೊಂದಿಗೆ ಮುನ್ನುಗ್ಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಮತ್ತೊಂದು ಧಾರವಾಹಿ 900 ಸಂಚಿಕೆ (900 Episode Complete) ಪೂರೈಸಿದೆ. ಕಳೆದ ಮೂರು ವರ್ಷದಿಂದಲೂ ಈ ಸೀರಿಯಲ್ ಪ್ರಸಾರ ಆಗುತ್ತಿದೆ. 2023 ರಲ್ಲಿ ಸಾಮಾನ್ಯ ಜನರ ಅಸಾಮಾನ್ಯ ಕತೆ ಅನ್ನುವ ಟ್ಯಾಗ್ ಲೈನ್ನೊಂದಿಗೇನೆ ಈ ಸೀರಿಯಲ್ ಪ್ರಸಾರ (Serial Telicast) ಆಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯ ಟಾಪ್ ರೇಟೆಡ್ ಸೀರಿಯಲ್ಗಳಲ್ಲಿ ಇದು ಕೂಡ ಟಾಪ್ ಅಲ್ಲಿಯೇ ಇದ್ದ ಸೀರಿಯಲ್ ಆಗಿದೆ. ಇಂದಿಗೂ ಜನರ ಮೆಚ್ಚುಗೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಸೀರಿಯಲ್ (Serial) ಇದೀಗ ಹೊಸ ಮೈಲುಗಲ್ಲು ಸಾಧಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಧ್ಯಮ ವರ್ಗದ ಕತೆ
2023 ರಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಸಾಮಾನ್ಯ ಜನರ ಅಸಾಮಾನ್ಯ ಕತೆಗಳು ಅನ್ನುವ ಟ್ಯಾಗ್ ಲೈನ್ ಜೊತೆಗೆ ಈ ಸೀರಿಯಲ್ ಪ್ರಸಾರ ಆಗಿದೆ.
ಈ ಸೀರಿಯಲ್ ಅಲ್ಲಿ ಶ್ರೀಮಂತರ ಕತೆ ಏನು ಇಲ್ಲ. ಇದು ಸಾಮಾನ್ಯ ಮಧ್ಯಮ ವರ್ಗದ ಕತೆಯನ್ನ ಹೇಳುತ್ತಿದೆ. ಮಂಡ್ಯ ರಮೇಶ್, ನೀನಾದ, ಅಭಿಜ್ಞಾ ಭಟ್ ಸೇರಿದಂತೆ ಇನ್ನು ಹಲವು ನುರಿತ ಕಲಾವಿದರು ಈ ಸೀರಿಯಲ್ ಅಲ್ಲಿದ್ದಾರೆ. ಜನರ ಹೃದಯ ಗೆಲ್ತಾನೇ ಇದ್ದಾರೆ.
ಜನರು ಮೆಚ್ಚಿಕೊಳ್ತಾನೇ ಇರೋ ಈ ಸೀರಿಯಲ್ ಇದೀಗ ಯಶಸ್ವಿಯಾಗಿ 900 ಸಂಚಿಕೆ ಪೂರ್ಣಗೊಳಿಸಿ ಮುನ್ನುಗುತ್ತಿದೆ. ಈ ಮೂಲಕ 900 ಸಂಚಿಕೆ ಕಂಪ್ಲೀಟ್ ಮಾಡಿರೋ ಸ್ಟಾರ್ ಚಾನೆಲ್ನ ಎರಡನೇ ಧಾರವಾಹಿ ಇದಾಗಿದೆ.
900 ಸಂಚಿಕೆ ಕಂಪ್ಲೀಟ್
ಆಸೆ ಸೀರಿಯಲ್ನ ವಿಶೇಷ ಪ್ರೋಮೋ ರಿಲೀಸ್ ಆಗಿದೆ. 900 ಸಂಚಿಕೆ ಪೂರೈಸಿರೋ ಹಿನ್ನೆಲೆಯಲ್ಲಿ ಈ ಪ್ರೋಮೋ ಬಂದಿದೆ. 900 ಸಂಚಿಕೆಗಳ ಸಂಭ್ರಮ ಅಂತಲೇ ಇಡೀ ಸೀರಿಯಲ್ನ ಎಲ್ಲ ಕ್ಯಾರೆಕ್ಟರ್ಗಳ ಖುಷಿಯ ಕ್ಷಣದ ಕ್ಲಿಪ್ಗಳನ್ನ ಬಳಕೆ ಮಾಡಿಯೇ ಈ ಪ್ರೋಮೋ ಮಾಡಿದ್ದಾರೆ.
900 ಸಂಚಿಕೆ ಅಂದರೆ ಸುಮ್ನೆ ಅಲ್ಲ. ಅದನ್ನ ಈ ಸೀರಿಯಲ್ ಸಾಧಿಸಿದೆ. ಈ ಒಂದು ಖುಷಿಯ ಕ್ಷಣವನ್ನ ಇಡೀ ಸೀರಿಯಲ್ ತಂಡ ಸಂಭ್ರಮಿಸಿದೆ. ಆದರೆ, ಈ ಸೀರಿಯಲ್ ಮುಂಚೇನೆ ಗೌರಿಶಂಕರ ಸೀರಿಯಲ್ 900 ಸಂಚಿಕೆಯನ್ನ ಪೂರೈಸಿದೆ.
ಗೌರಿಶಂಕರ ಸೀರಿಯಲ್ ಇತ್ತೀಚಿಗೆ 900 ಸಂಚಿಕೆ ಪೂರೈಸಿದೆ. ಇದಾದ್ಮೇಲೆ ಇದೀಗ ಆಸೆ ಈ ಒಂದು ದಾಖಲೆ ಮಾಡಿದೆ. ಇನ್ನುಳಿದಂತೆ ಈ ಎರಡೂ ಸೀರಿಯಲ್ಗಳು 900 ಸಂಚಿಕೆ ಪೂರೈಸಿ ಮುನ್ನುಗತ್ತಿವೆ ಅಂತ ಹೇಳಬಹುದು .
Bangalore [Bangalore],Bangalore,Karnataka
Jun 23, 2026 12:26 PM IST
Kannada Aase Serial: 900 ಸಂಚಿಕೆ ಕಂಪ್ಲೀಟ್ ಮಾಡಿದ ‘ಆಸೆ’ ಸೀರಿಯಲ್! ಕ್ಯಾಬ್ ಡ್ರೈವರ್-ಹೂ ಕಟ್ಟೋ ಹುಡುಗಿಯ ಲೈಫ್ಸ್ಟೋರಿಗೆ ಕನ್ನಡ ಪ್ರೇಕ್ಷಕರು ಫಿದಾ













