Kannada Aase Serial: 900 ಸಂಚಿಕೆ ಕಂಪ್ಲೀಟ್ ಮಾಡಿದ ‘ಆಸೆ’ ಸೀರಿಯಲ್! ಕ್ಯಾಬ್ ಡ್ರೈವರ್-ಹೂ ಕಟ್ಟೋ ಹುಡುಗಿಯ ಲೈಫ್​ಸ್ಟೋರಿಗೆ ಕನ್ನಡ ಪ್ರೇಕ್ಷಕರು ಫಿದಾ | | ACTPnews

ಅಂದು ಗೌರಿಶಂಕರ ಇಂದು ಆಸೆ; 900 ಸಂಚಿಕೆ ಕಂಪ್ಲೀಟ್!


Last Updated:

ಸ್ಟಾರ್ ಸುವರ್ಣ ವಾಹಿನಿಯ ಆಸೆ ಸೀರಿಯಲ್ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಮಧ್ಯಮ ವರ್ಗದ ಕತೆಯ ಈ ಸೀರಿಯಲ್ ಜನರ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. 3 ವರ್ಷದ ಹಿಂದೆ ಶುರು ಆದ ಈ ಸೀರಿಯಲ್ ಇದೀಗ ಹೊಸ ಸಾಧನೆ ಮಾಡಿ, ಜನರ ಪ್ರೀತಿಯೊಂದಿಗೆ ಮುನ್ನುಗ್ಗುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಅಂದು ಗೌರಿಶಂಕರ ಇಂದು ಆಸೆ; 900 ಸಂಚಿಕೆ ಕಂಪ್ಲೀಟ್!
ಅಂದು ಗೌರಿಶಂಕರ ಇಂದು ಆಸೆ; 900 ಸಂಚಿಕೆ ಕಂಪ್ಲೀಟ್!

ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಮತ್ತೊಂದು ಧಾರವಾಹಿ 900 ಸಂಚಿಕೆ (900 Episode Complete) ಪೂರೈಸಿದೆ. ಕಳೆದ ಮೂರು ವರ್ಷದಿಂದಲೂ ಈ ಸೀರಿಯಲ್ ಪ್ರಸಾರ ಆಗುತ್ತಿದೆ. 2023 ರಲ್ಲಿ ಸಾಮಾನ್ಯ ಜನರ ಅಸಾಮಾನ್ಯ ಕತೆ ಅನ್ನುವ ಟ್ಯಾಗ್ ಲೈನ್‌ನೊಂದಿಗೇನೆ ಈ ಸೀರಿಯಲ್ ಪ್ರಸಾರ (Serial Telicast) ಆಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯ ಟಾಪ್ ರೇಟೆಡ್ ಸೀರಿಯಲ್‌ಗಳಲ್ಲಿ ಇದು ಕೂಡ ಟಾಪ್ ಅಲ್ಲಿಯೇ ಇದ್ದ ಸೀರಿಯಲ್ ಆಗಿದೆ. ಇಂದಿಗೂ ಜನರ ಮೆಚ್ಚುಗೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಸೀರಿಯಲ್‌ (Serial) ಇದೀಗ ಹೊಸ ಮೈಲುಗಲ್ಲು ಸಾಧಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

900 ಸಂಚಿಕೆ ಕಂಪ್ಲೀಟ್

ಆಸೆ ಸೀರಿಯಲ್ ಪ್ರತಿ ದಿನ ರಾತ್ರಿ 7.30 ಕ್ಕೆ ಪ್ರಸಾರ ಆಗುತ್ತಿದೆ. ಸ್ಟಾರ್ ಸುವರ್ಣದಲ್ಲಿ ಬರ್ತಿರೋ ಗೌರಿಶಂಕರ್, ನೀ ಇರಲು ಜೊತೆಯಲ್ಲಿ, ವಸುದೇವ ಕುಟುಂಬ, ಜೈಲಲಿತಾ ಹೀಗೆ ಈ ವಾಹಿನಿಯಲ್ಲಿ ಬರ್ತಿರೋ ಸೀರಿಯಲ್‌ಗಳಲ್ಲಿ ಇದು ಕೂಡ ಜನರ ಮೆಚ್ಚುಗೆ ಪಡೆದು ಮುನ್ನುಗುತ್ತಿದೆ.
Star Suvarna channels serial Aase completed 900 episodes

ಮಧ್ಯಮ ವರ್ಗದ ಕತೆ

2023 ರಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಸಾಮಾನ್ಯ ಜನರ ಅಸಾಮಾನ್ಯ ಕತೆಗಳು ಅನ್ನುವ ಟ್ಯಾಗ್ ಲೈನ್‌ ಜೊತೆಗೆ ಈ ಸೀರಿಯಲ್ ಪ್ರಸಾರ ಆಗಿದೆ.

ಮಧ್ಯಮ ವರ್ಗದ ಕತೆ

ಈ ಸೀರಿಯಲ್ ಅಲ್ಲಿ ಶ್ರೀಮಂತರ ಕತೆ ಏನು ಇಲ್ಲ. ಇದು ಸಾಮಾನ್ಯ ಮಧ್ಯಮ ವರ್ಗದ ಕತೆಯನ್ನ ಹೇಳುತ್ತಿದೆ. ಮಂಡ್ಯ ರಮೇಶ್, ನೀನಾದ, ಅಭಿಜ್ಞಾ ಭಟ್ ಸೇರಿದಂತೆ ಇನ್ನು ಹಲವು ನುರಿತ ಕಲಾವಿದರು ಈ ಸೀರಿಯಲ್ ಅಲ್ಲಿದ್ದಾರೆ. ಜನರ ಹೃದಯ ಗೆಲ್ತಾನೇ ಇದ್ದಾರೆ.

ಜನರು ಮೆಚ್ಚಿಕೊಳ್ತಾನೇ ಇರೋ ಈ ಸೀರಿಯಲ್ ಇದೀಗ ಯಶಸ್ವಿಯಾಗಿ 900 ಸಂಚಿಕೆ ಪೂರ್ಣಗೊಳಿಸಿ ಮುನ್ನುಗುತ್ತಿದೆ. ಈ ಮೂಲಕ 900 ಸಂಚಿಕೆ ಕಂಪ್ಲೀಟ್ ಮಾಡಿರೋ ಸ್ಟಾರ್ ಚಾನೆಲ್‌ನ ಎರಡನೇ ಧಾರವಾಹಿ ಇದಾಗಿದೆ.

Star Suvarna channels serial Aase completed 900 episodes

900 ಸಂಚಿಕೆ ಕಂಪ್ಲೀಟ್
ವಿಶೇಷ ಪ್ರೋಮೋ ರಿಲೀಸ್

ಆಸೆ ಸೀರಿಯಲ್‌ನ ವಿಶೇಷ ಪ್ರೋಮೋ ರಿಲೀಸ್ ಆಗಿದೆ. 900 ಸಂಚಿಕೆ ಪೂರೈಸಿರೋ ಹಿನ್ನೆಲೆಯಲ್ಲಿ ಈ ಪ್ರೋಮೋ ಬಂದಿದೆ. 900 ಸಂಚಿಕೆಗಳ ಸಂಭ್ರಮ ಅಂತಲೇ ಇಡೀ ಸೀರಿಯಲ್‌ನ ಎಲ್ಲ ಕ್ಯಾರೆಕ್ಟರ್‌ಗಳ ಖುಷಿಯ ಕ್ಷಣದ ಕ್ಲಿಪ್‌ಗಳನ್ನ ಬಳಕೆ ಮಾಡಿಯೇ ಈ ಪ್ರೋಮೋ ಮಾಡಿದ್ದಾರೆ.

ಇದನ್ನೂ ಓದಿ: Kannada Baiker Movie: ಕನ್ನಡದ ಮೊಟ್ಟ ಮೊದಲ ಬೈಕರ್ ಸಿನಿಮಾ!

900 ಸಂಚಿಕೆ ಅಂದರೆ ಸುಮ್ನೆ ಅಲ್ಲ. ಅದನ್ನ ಈ ಸೀರಿಯಲ್ ಸಾಧಿಸಿದೆ. ಈ ಒಂದು ಖುಷಿಯ ಕ್ಷಣವನ್ನ ಇಡೀ ಸೀರಿಯಲ್ ತಂಡ ಸಂಭ್ರಮಿಸಿದೆ. ಆದರೆ, ಈ ಸೀರಿಯಲ್ ಮುಂಚೇನೆ ಗೌರಿಶಂಕರ ಸೀರಿಯಲ್ 900 ಸಂಚಿಕೆಯನ್ನ ಪೂರೈಸಿದೆ.

ಎರಡು ಸೀರಿಯಲ್‌ಗಳ ಸಾಧನೆ

ಗೌರಿಶಂಕರ ಸೀರಿಯಲ್ ಇತ್ತೀಚಿಗೆ 900 ಸಂಚಿಕೆ ಪೂರೈಸಿದೆ. ಇದಾದ್ಮೇಲೆ ಇದೀಗ ಆಸೆ ಈ ಒಂದು ದಾಖಲೆ ಮಾಡಿದೆ. ಇನ್ನುಳಿದಂತೆ ಈ ಎರಡೂ ಸೀರಿಯಲ್‌ಗಳು 900 ಸಂಚಿಕೆ ಪೂರೈಸಿ ಮುನ್ನುಗತ್ತಿವೆ ಅಂತ ಹೇಳಬಹುದು .

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Kannada Aase Serial: 900 ಸಂಚಿಕೆ ಕಂಪ್ಲೀಟ್ ಮಾಡಿದ ‘ಆಸೆ’ ಸೀರಿಯಲ್! ಕ್ಯಾಬ್ ಡ್ರೈವರ್-ಹೂ ಕಟ್ಟೋ ಹುಡುಗಿಯ ಲೈಫ್​ಸ್ಟೋರಿಗೆ ಕನ್ನಡ ಪ್ರೇಕ್ಷಕರು ಫಿದಾ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed