Jyothika: ‘ಸೂರ್ಯನಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೆ’, ಇಂಟರ್‌ನೆಟ್‌ನಲ್ಲಿ ಸೆನ್ಸೇ‍ಷನ್ ಸೃಷ್ಟಿಸಿದ ನಟಿ ಜ್ಯೋತಿಕಾ ಹೇಳಿಕೆ | | ACTPnews

ಜ್ಯೋತಿಕಾ


Last Updated:

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜ್ಯೋತಿಕಾ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳು, ಸೂರ್ಯ ಅವರ ಸಿನಿ ಪಯಣ ಹಾಗೂ ದಾಂಪತ್ಯ ಜೀವನದ ಸಮಾನತೆಯ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಜ್ಯೋತಿಕಾ
ಜ್ಯೋತಿಕಾ

ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಆದರ್ಶ ಹಾಗೂ ಜನಪ್ರಿಯ ದಂಪತಿಗಳಲ್ಲಿ ಸೂರ್ಯ (Suriya) ಮತ್ತು ಜ್ಯೋತಿಕಾ (Jyothika) ಪ್ರಮುಖರು. ಸುಮಾರು ಎರಡು ದಶಕಗಳ ದಾಂಪತ್ಯ ಜೀವನದ ಬಳಿಕವೂ ಈ ಜೋಡಿ ಪರಸ್ಪರ ಪ್ರೀತಿ, ಗೌರವ ಮತ್ತು ಬೆಂಬಲದ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿಯೇ ಉಳಿದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜ್ಯೋತಿಕಾ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳು, ಸೂರ್ಯ ಅವರ ಸಿನಿ ಪಯಣ ಹಾಗೂ ದಾಂಪತ್ಯ ಜೀವನದ ಸಮಾನತೆಯ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾ, ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುವುದೇ ತಮ್ಮ ದಾಂಪತ್ಯದ ದೊಡ್ಡ ಶಕ್ತಿ ಎಂದು ಹೇಳಿದ್ದಾರೆ. ವರ್ಷಗಳು ಕಳೆದರೂ ಪರಸ್ಪರ ಬೆಳವಣಿಗೆಯನ್ನು ನೋಡಿ ಸಂತೋಷಪಡುವ ಗುಣವೇ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಜ್ಯೋತಿಕಾ ತಿಳಿಸಿದ್ದಾರೆ.

ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಜ್ಯೋತಿಕಾ, ಆ ಸಮಯದಲ್ಲಿ ತಾವು ಸೂರ್ಯ ಅವರಿಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಅವರು, ಆಗ ನನಗೆ ಸೂರ್ಯ ಅವರಿಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಸಿಗುತ್ತಿತ್ತು. ಈಗ ಅದು 30 ಪಟ್ಟು ಕಡಿಮೆಯಾಗಿದೆ ಎಂದು ನಗುತ್ತಾ ಹೇಳಿಕೊಂಡಿದ್ದಾರೆ.

ಆ ವೇಳೆಗೆ ಜ್ಯೋತಿಕಾ ಈಗಾಗಲೇ ತಮಿಳು ಚಿತ್ರರಂಗದ ಅಗ್ರ ನಟಿಯಾಗಿದ್ದರು. ಅವರ ಈ ನಿರ್ಧಾರದಿಂದ ಸೂರ್ಯ ಅವರಿಗೆ ಸೋಲೋ ಹೀರೋ ಆಗಿ ದೊಡ್ಡ ಯಶಸ್ಸು ಸಿಕ್ಕಿದ್ದು, ನಂತರ ಅವರ ಸಿನಿ ಪಯಣ ಹೊಸ ಎತ್ತರ ತಲುಪಿತು. ಹಾಗೆಯೇ ತಮ್ಮ ಪತಿಯ ಗುಣಗಳನ್ನು ಮೆಚ್ಚಿಕೊಂಡ ಜ್ಯೋತಿಕಾ, ಸೂರ್ಯ ಅವರನ್ನು ನಿಜವಾದ ಗ್ರೀನ್ ಫ್ಲ್ಯಾಗ್ ಎಂದು ಬಣ್ಣಿಸಿದ್ದಾರೆ.

ನಮ್ಮ ಮನೆಯಲ್ಲಿ ನಾವಿಬ್ಬರೂ ಸಮಾನರು. ಪುರುಷನಲ್ಲಿ ಸಮಾನತೆಯ ಭಾವನೆ ಎಂಬುದು ಒಳಗಿನಿಂದ ಬರಬೇಕು. ಅದು ಸೂರ್ಯನಲ್ಲಿ ಸಹಜವಾಗಿಯೇ ಇದೆ. ನಾನು ಅಡುಗೆ ಮಾಡುತ್ತಿದ್ದರೆ ಅವರು ಕೂಡ ಅಡುಗೆಮನೆಗೆ ಬಂದು ಸಹಾಯ ಮಾಡುತ್ತಾರೆ. ಮಕ್ಕಳ ಪಾಲನೆ, ಸಿನಿಮಾ ನಿರ್ಮಾಣ, ಪ್ರವಾಸ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ನಾವು ಜೊತೆಯಾಗಿ ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ.

ರೀಲ್ ಜೋಡಿಯಿಂದ ರಿಯಲ್ ಲೈಫ್ ದಂಪತಿ

ಸೂರ್ಯ ಮತ್ತು ಜ್ಯೋತಿಕಾ ಮೊದಲ ಬಾರಿಗೆ 1999ರಲ್ಲಿ ಬಿಡುಗಡೆಯಾದ ಪೂವೆಲ್ಲಾಮ್ ಕೇಟ್ಟುಪ್ಪಾರ್ ಚಿತ್ರದ ಮೂಲಕ ತೆರೆ ಹಂಚಿಕೊಂಡರು. ನಂತರ ಉಯಿರಿಲೇ ಕಲಂಧದು, ಕಾಖ ಕಾಖ, ಪೇರಳಗನ್, ಮಾಯಾವಿ ಮತ್ತು ಸಿಲ್ಲುನು ಒರು ಕಾದಲ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದರು.

ಚಿತ್ರರಂಗದಲ್ಲಿ ಆರಂಭವಾದ ಸ್ನೇಹ ನಂತರ ಪ್ರೀತಿಯಾಗಿ ಬೆಳೆದು, ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2006ರಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟಿತು.

ಮದುವೆಯ ಬಳಿಕ ಜ್ಯೋತಿಕಾ ಕುಟುಂಬಕ್ಕಾಗಿ ಕೆಲವು ವರ್ಷಗಳ ಕಾಲ ನಟನೆಯಿಂದ ವಿರಾಮ ಪಡೆದರು. ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅವರು ಆಯ್ದ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed