Jyothika Workout: ಕಾಲಿವುಡ್ ನಟಿ ಜ್ಯೋತಿಕಾ ವರ್ಕೌಟ್‌ಗೆ ಫ್ಯಾನ್ಸ್ ಫಿದಾ; ವಿಡಿಯೋ ಫುಲ್ ವೈರಲ್! | | ACTPnews

kollywood actress Jyothika Workout Video Viral


ಜ್ಯೋತಿಕಾ ವರ್ಕೌಟ್

ಜ್ಯೋತಿಕಾ ವರ್ಕೌಟ್ ಮಾಡುವ ರೀತಿ ನೋಡಿದ್ರೆ ಗಾಬರಿ ಆಗುತ್ತದೆ. ಆ ರೇಂಜ್‌ಗೆ ಜ್ಯೋತಿಕಾ ವರ್ಕೌಟ್ ಮಾಡುತ್ತಾರೆ. ಹೆವಿ ಡಂಬ್ಬೆಲ್ ಎತ್ತುತ್ತಾರೆ. ಅದನ್ನ ಇಟ್ಟುಕೊಂಡು ಹಾರ್ಟೆಸ್ಟ್ ಅನಿಸೋ ವರ್ಕೌಟ್ ಮಾಡುತ್ತಾರೆ.

ವರ್ಕೌಟ್ ವಿಡಿಯೋ ಶೇರ್

(ಚಿತ್ರ ಕೃಪೆ: ಜ್ಯೋತಿಕಾ ಇನ್‌ಸ್ಟಾಗ್ರಾಮ್)

Pull Ups ಅಂತೂ ತುಂಬಾನೆ ಮಾಡುತ್ತಾರೆ. ತಮ್ಮ ದೇಹದ ತೂಕದಿಂದಲೆ ದೇಹದ ಶಕ್ತಿಯನ್ನ ಹೆಚ್ಚಿಕೊಳ್ಳುತ್ತಾರೆ. ವೇಟ್‌ ಲಾಸ್‌ ವರ್ಕೌಟ್ ಅಂತಲೂ ನಿಜಕ್ಕೂ ಬಲು ಜೋರಾಗಿಯೇ ಇರುತ್ತದೆ.

ವರ್ಕೌಟ್ ವಿಡಿಯೋ ಶೇರ್

ಜ್ಯೋತಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್ ಅಲ್ಲಿ ಸುಮಾರು ವಿಡಿಯೋಗಳನ್ನ ಅಪ್‌ಲೋಡ್ ಮಾಡಿಕೊಂಡಿದ್ದಾರೆ.

ಬಾಲಿವುಡ್ ಚಿತ್ರದ ಮಾಹಿತಿ

ಜ್ಯೋತಿಕಾ ಅವರು ಈಗೊಂದು ಹಿಂದಿ ಸಿನಿಮಾ ಮಾಡಿದ್ದಾರೆ. ಇದಕ್ಕೆ ಸಿಸ್ಟಮ್ ಅಂತ ಹೆಸರಿದೆ. ಇದು ಅಮೆಜಾನ್ ಪ್ರೈಮ್‌ನ ಓರಿಜಿನಲ್ ಚಿತ್ರವಾಗಿದೆ.

ಇದೊಂದು ಕೋರ್ಟ್ ರೂಮ್ ಕಂಟೆಂಟ್ ಇರೋ ಚಿತ್ರವೇ ಆಗಿದೆ. ಜ್ಯೋತಿಕಾ ಇಲ್ಲಿ ಸ್ಟೆನೋಗ್ರಾಫರ್ ಆಗಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಇಲ್ಲಿ ಲಾಯರ್ ರೋಲ್ ಮಾಡಿದ್ದಾರೆ.

ಮೇ-22 ರಂದು ಸ್ಟ್ರೀಮಿಂಗ್

ಸಿಸ್ಟಮ್ ಅನ್ನುವ ಈ ಚಿತ್ರದ ಮೇ-22 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವನ್ನ ಅಶ್ವಿನಿ ಅಯ್ಯರ್ ತಿವಾರಿ ಡೈರೆಕ್ಷನ್ ಮಾಡಿದ್ದಾರೆ.

ಲಗಾನ್ ಚಿತ್ರದ ನಿರ್ಮಾಪಕ ಅಶುತೋಷ್ ಗೋವಾರಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ರೋಲ್ ಅನ್ನೆ ಮಾಡಿದ್ದಾರೆ.

kollywood actress Jyothika Workout Video Viral

ಜ್ಯೋತಿಕಾ ವರ್ಕೌಟ್

(ಚಿತ್ರ ಕೃಪೆ: ಜ್ಯೋತಿಕಾ ಇನ್‌ಸ್ಟಾಗ್ರಾಮ್)

ಜ್ಯೋತಿಕಾ ಇತರ ಚಿತ್ರಗಳು

ಜ್ಯೋತಿಕಾ ಅವರು ಈ ಹಿಂದಿನ ಪ್ರಾಜೆಕ್ಟ್‌ಗಳಲ್ಲಿ ಜ್ಯೋತಿ ತಮ್ಮದೇ ಛಾಪು ಮೂಡಿಸಿದ್ದಾರೆ. ಶೈತಾನ್ ಚಿತ್ರದಲ್ಲಿ ಅಜಯ್ ದೇವಗನ್ ಇದ್ದರು. ಆರ್.ಮಾಧವನ್ ನಟಿಸಿದ್ದರು.

ದೇವಿಕಾ ಪಾತ್ರದಲ್ಲಿ ಜ್ಯೋತಿಕಾ

ಈ ಹಿಂದೆ ಅಂದ್ರೆ 2024 ರಲ್ಲಿ ಶ್ರೀಕಾಂತ್ ಅನ್ನುವ ಚಿತ್ರ ಬಂದಿತ್ತು. ಇದರಲ್ಲಿ ರಾಜಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿಯೇ ಇದ್ದರು.

ಇವರ ಈ ಚಿತ್ರದಲ್ಲಿ ನಟಿ ಜ್ಯೋತಿಕಾ ಅವರ ಪಾತ್ರ ಗಮನ ಸೆಳೆದಿತ್ತು. ದೇವಿಕಾ ಅನ್ನುವ ಪಾತ್ರವನ್ನ ಜ್ಯೋತಿಕಾ ಅವರು ಇಲ್ಲಿ ಮಾಡಿದ್ದರು.

ಬಾಕ್ಸ್ ಆಫೀಸ್ ಕಲೆಕ್ಷನ್ ಜೋರು

ಬಾಕ್ಸ್ ಆಫೀಸ್ ಅಲ್ಲಿ ಈ ಚಿತ್ರವೂ ಒಳ್ಳೆ ಕಲೆಕ್ಷನ್ ಮಾಡಿತ್ತು. ಈ ಚಿತ್ರವನ್ನ 35 ಕೋಟಿ ಬಜೆಟ್ ಅಲ್ಲಿಯೇ ತಯಾರಿಸಿದ್ದರು. ಆದರೆ, ಬಾಕ್ಸ್ ಆಫೀಸ್ ಅಲ್ಲಿ ಇದು 62.92 ಕೋಟಿ ಕಲೆಕ್ಷನ್ ಮಾಡಿತ್ತು.

ಆ ರೀತಿಯ ಚಿತ್ರಗಳನ್ನ ಮಾಡಿರೋ ಜ್ಯೋತಿಕಾ ಅವರು ತಮ್ಮ ಆರೋಗ್ಯದ ಬಗ್ಗೆನೂ ಕಾಳಜಿ ಹೊಂದಿದ್ದಾರೆ. ದೇಹವನ್ನು ಅಷ್ಟೆ ದಂಡಿಸುತ್ತಾರೆ. ಅದರ ಫಲವೆ ತಮ್ಮ 47 ನೇ ವಯಸ್ಸಿನಲ್ಲೂ ಜ್ಯೋತಿಕಾ ಅವರು ಫೀಟ್ ಆ್ಯಂಡ್ ಫೈನ್ ಆಗಿಯೇ ಕಾಣಿಸುತ್ತಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed