Junior NTR: ಜೂನಿಯರ್ ಎನ್‌ಟಿಆರ್ ರಾಜಕೀಯ ಎಂಟ್ರಿ ನಿಜಾನಾ? ಸಿಕ್ಕೇ ಬಿಡ್ತು ಉತ್ತರ | | ACTPnews

News18


Last Updated:

ಇದೀಗ ಜ್ಯೂ. ಎನ್‌ಟಿಆರ್ ತಂಡ ಬಿಡುಗಡೆ ಮಾಡಿರುವ ಈ ಅಧಿಕೃತ ಪ್ರಕಟಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ರಾಜಕೀಯ ಪ್ರವೇಶದ ವದಂತಿಗಳಿಗೆ ತೆರೆ ಬಿದ್ದಿದೆ.

News18
News18

ಟಾಲಿವುಡ್ ಸ್ಟಾರ್ ಜ್ಯೂ. ಎನ್‌ಟಿಆರ್ (Jr. NTR) ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಉರು-ವಾಡ’ ಹೆಸರಿನ ಸೇವಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿದ್ದವು. ಆದರೆ ಇದೀಗ ಈ ಎಲ್ಲಾ ವದಂತಿಗಳಿಗೆ ಸ್ವತಃ ಜ್ಯೂ. ಎನ್‌ಟಿಆರ್ ತಂಡ ಅಧಿಕೃತ ಪ್ರಕಟಣೆ ಮೂಲಕ ತೆರೆ ಎಳೆದಿದೆ.

ಇತ್ತೀಚಿನ ದಿನಗಳಲ್ಲಿ ಜ್ಯೂ. ಎನ್‌ಟಿಆರ್ ರಾಜಕೀಯ ಪ್ರವೇಶದ ಬಗ್ಗೆ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಜುಲೈ 18ರಂದು ನಡೆಯಲಿರುವ ‘ಉರು-ವಾಡ’ ಕಾರ್ಯಕ್ರಮವನ್ನು ಎನ್‌ಟಿಆರ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ತಂಡ ಅಧಿಕೃತ ಪ್ರೆಸ್‌ನೋಟ್ ಬಿಡುಗಡೆ ಮಾಡಿದೆ. ಅದರಲ್ಲಿ ‘ಉರು-ವಾಡ’ ಹೆಸರಿನ ಕಾರ್ಯಕ್ರಮಕ್ಕೂ, ಅದನ್ನು ಆಯೋಜಿಸುತ್ತಿರುವ ಸಂಘಟನೆಗೂ ಜ್ಯೂ. ಎನ್‌ಟಿಆರ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೆಲವು ಸ್ಥಳಗಳಲ್ಲಿ ಸಿಎಂ ಎನ್‌ಟಿಆರ್ ಎಂಬ ಬರಹವಿರುವ ಬ್ಯಾನರ್‌ಗಳು ಹಾಕಲಾಗಿದ್ದವು. ಇದರಿಂದ ರಾಜಕೀಯ ಪ್ರವೇಶದ ಊಹಾಪೋಹಗಳು ಮತ್ತಷ್ಟು ಹೆಚ್ಚಾದವು.

ಆದರೆ ಈ ರೀತಿಯ ಬ್ಯಾನರ್‌ಗಳು ಅಥವಾ ಪ್ರಚಾರಗಳಿಗೆ ತಮ್ಮ ಅನುಮತಿ ಇಲ್ಲ ಎಂದು ತಂಡ ಸ್ಪಷ್ಟಪಡಿಸಿದೆ. ಎನ್‌ಟಿಆರ್ ಅವರ ಹೆಸರನ್ನು ಬಳಸಿಕೊಂಡು ನಡೆಯುವ ಯಾವುದೇ ಪ್ರಚಾರವನ್ನು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಲಾಗಿದೆ.

ಜೊತೆಗೆ ಹೆಸರನ್ನು ಬಳಸಿಕೊಂಡು ನಡೆಯುವ ಯಾವುದೇ ಕಾರ್ಯಕ್ರಮ, ರಾಜಕೀಯ ಪ್ರಚಾರ ಅಥವಾ ಘೋಷಣೆಗಳನ್ನು ಅಧಿಕೃತವೆಂದು ಪರಿಗಣಿಸಬಾರದು ಎಂದು ತಂಡ ಸ್ಪಷ್ಟನೆ ನೀಡಿದೆ.

ಹಾಗೆಯೇ ಭವಿಷ್ಯದಲ್ಲಿ ಜ್ಯೂ. ಎನ್‌ಟಿಆರ್ ಕೈಗೊಳ್ಳುವ ಯಾವುದೇ ಯೋಜನೆ ಅಥವಾ ಪ್ರಮುಖ ಘೋಷಣೆಗಳನ್ನು ಅವರ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ಪ್ರಕಟಿಸಲಾಗುವುದು ಎಂದು ಪ್ರೆಸ್‌ನೋಟ್‌ನಲ್ಲಿ ತಿಳಿಸಲಾಗಿದೆ.

ಅವರ ರಾಜಕೀಯ ಪ್ರವೇಶದ ಕುರಿತು ಹಲವು ಬಾರಿ ಊಹಾಪೋಹಗಳು ಕೇಳಿಬಂದಿದ್ದರೂ, ಯಾವುದೇ ರಾಜಕೀಯ ಪಕ್ಷ ಸೇರುವುದು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅವರು ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇದೀಗ ಜ್ಯೂ. ಎನ್‌ಟಿಆರ್ ತಂಡ ಬಿಡುಗಡೆ ಮಾಡಿರುವ ಈ ಅಧಿಕೃತ ಪ್ರಕಟಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ರಾಜಕೀಯ ಪ್ರವೇಶದ ವದಂತಿಗಳಿಗೆ ತೆರೆ ಬಿದ್ದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed