ನೇಮಕಾತಿ ಪ್ರಕ್ರಿಯೆಯಲ್ಲಿ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್), ಸಹಾಯಕ ವ್ಯವಸ್ಥಾಪಕ (ಲೀಸ್ ಮತ್ತು ಎಕ್ಸ್ಪ್ಲೋರೇಶನ್), ಪರಿಸರ ಎಂಜಿನಿಯರ್, ಸಹಾಯಕ ಎಂಜಿನಿಯರ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹಾಗೂ ಸಿವಿಲ್), ಸಹಾಯಕ ವ್ಯವಸ್ಥಾಪಕ (ಸರ್ವೇ), ಜೂನಿಯರ್ ಎಂಜಿನಿಯರ್, ಮೈನ್ ಫೋರ್ಮ್ಯಾನ್, ಮೈನ್ ಮೇಟ್, ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್ ಸೇರಿದಂತೆ ವಿವಿಧ ಹುದ್ದೆಗಳು ಒಳಗೊಂಡಿವೆ. ಹುದ್ದೆಗಳನ್ನು ಅವಲಂಬಿಸಿ ₹18,350ರಿಂದ ₹50,000ರವರೆಗೆ ಮಾಸಿಕ ಗೌರವಧನ ನೀಡಲಾಗುತ್ತದೆ. ಅತ್ಯಧಿಕ ವೇತನ ಸಹಾಯಕ ವ್ಯವಸ್ಥಾಪಕ (ಪ್ರೊಡಕ್ಷನ್) ಹುದ್ದೆಗೆ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೈನಿಂಗ್ ಎಂಜಿನಿಯರಿಂಗ್, ಜಿಯಾಲಜಿ, ಅಪ್ಲೈಡ್ ಜಿಯಾಲಜಿ, ಅರ್ಥ್ ಸೈನ್ಸ್, ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್ ಎಂಜಿನಿಯರಿಂಗ್ ಪದವಿ, ಸಂಬಂಧಿತ ಡಿಪ್ಲೊಮಾ, ಐಟಿಐ, ಎಸ್ಎಸ್ಎಲ್ಸಿ ಅಥವಾ ಇತರ ತಾಂತ್ರಿಕ ಅರ್ಹತೆಗಳನ್ನು ಹೊಂದಿರಬೇಕು. ಕೆಲವು ಹುದ್ದೆಗಳಿಗೆ Mine Manager Certificate, Mine Foreman Certificate, Mine Mate Certificate, Blaster Certificate ಹಾಗೂ Mine Surveyor Certificate ಕಡ್ಡಾಯವಾಗಿದ್ದು, ಸಂಬಂಧಿತ ಕ್ಷೇತ್ರದಲ್ಲಿ 2 ರಿಂದ 10 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.
Walk-in Interview ಅನ್ನು ಹಂತ ಹಂತವಾಗಿ ಆಯೋಜಿಸಲಾಗಿದೆ. ಜುಲೈ 29ರಂದು ಸಹಾಯಕ ವ್ಯವಸ್ಥಾಪಕ, ಪರಿಸರ ಎಂಜಿನಿಯರ್ ಹಾಗೂ ವಿವಿಧ ಸಹಾಯಕ ಎಂಜಿನಿಯರ್ ಹುದ್ದೆಗಳ ಸಂದರ್ಶನ ನಡೆಯಲಿದೆ. ಜುಲೈ 30ರಂದು ಜೂನಿಯರ್ ಎಂಜಿನಿಯರ್, ಮೈನ್ ಫೋರ್ಮ್ಯಾನ್ ಮತ್ತು ಮೈನ್ ಮೇಟ್ ಹುದ್ದೆಗಳ ಅಭ್ಯರ್ಥಿಗಳು ಹಾಜರಾಗಬೇಕು. ಜುಲೈ 31ರಂದು ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್ ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದ್ದು, ಎಲ್ಲಾ ಸಂದರ್ಶನಗಳು ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿವೆ.
ಆಯ್ಕೆ ಪ್ರಕ್ರಿಯೆ ವಿದ್ಯಾರ್ಹತೆ, ಅನುಭವ ಹಾಗೂ Walk-in Interviewನಲ್ಲಿ ಅಭ್ಯರ್ಥಿಯ ಪ್ರದರ್ಶನದ ಆಧಾರದ ಮೇಲೆ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ (TA) ಅಥವಾ ದಿನಭತ್ಯೆ (DA) ನೀಡಲಾಗುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಗಣಿ ಅಥವಾ KSMCL ಘಟಕದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿರಬೇಕು.
ಗುತ್ತಿಗೆ ಆಧಾರದಲ್ಲಿ ನೇಮಕವಾಗುವ ಅಭ್ಯರ್ಥಿಗಳಿಗೆ 11 ತಿಂಗಳ ಒಪ್ಪಂದ, ನಿಗದಿತ ಮಾಸಿಕ ವೇತನ, ವರ್ಷಕ್ಕೆ 10 ದಿನಗಳ Casual Leave ಹಾಗೂ 9 ದಿನಗಳ Sick Leave ಸೌಲಭ್ಯ ಕಲ್ಪಿಸಲಾಗುತ್ತದೆ. ಅಗತ್ಯವಿದ್ದಲ್ಲಿ ರಾಜ್ಯದ ಯಾವುದೇ ಘಟಕಕ್ಕೆ ವರ್ಗಾವಣೆ ಮಾಡುವ ಅಧಿಕಾರ ನಿಗಮಕ್ಕಿದ್ದು, ಸೇವಾ ನಿಯಮ ಉಲ್ಲಂಘನೆಯಾದರೆ ಒಪ್ಪಂದವನ್ನು ರದ್ದುಪಡಿಸುವ ಅಧಿಕಾರವೂ ಸಂಸ್ಥೆಗೆ ಇರುತ್ತದೆ.
ಇದೆಲ್ಲಾ ಸರಿಯಾಗಿ ನಮೂದಿಸಿ
ಅರ್ಜಿ ನಮೂನೆ ಭರ್ತಿ ಮಾಡುವಾಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಯ ಹೆಸರು, ಪೂರ್ಣ ಹೆಸರು, ತಂದೆ ಅಥವಾ ಪತಿ ಹೆಸರು, ಜನ್ಮ ದಿನಾಂಕ, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಭಾರತೀಯ ಪ್ರಜೆಯ ವಿವರ, ಶಾಶ್ವತ ಹಾಗೂ ಪತ್ರ ವ್ಯವಹಾರದ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್, ಎಸ್ಎಸ್ಎಲ್ಸಿಯಿಂದ ಆರಂಭಿಸಿ ಎಲ್ಲಾ ಶೈಕ್ಷಣಿಕ ಅರ್ಹತೆಗಳು, ತಾಂತ್ರಿಕ ಮತ್ತು ಕಾನೂನುಬದ್ಧ ಪ್ರಮಾಣಪತ್ರಗಳ ವಿವರ, ಉದ್ಯೋಗ ಅನುಭವ, ಭಾಷಾ ಜ್ಞಾನ ಹಾಗೂ ಕೊನೆಯಲ್ಲಿ ಘೋಷಣೆ ಮತ್ತು ಸಹಿಯನ್ನು ಸರಿಯಾಗಿ ನಮೂದಿಸಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದರೆ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದು ಅಗತ್ಯವಾಗಿದೆ.













