Last Updated:
ಭಾರತೀಯ ರೈಲ್ವೆ ಇಲಾಖೆಯು 4,098 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-09-2026. ಆಸಕ್ತರು ಶೀಘ್ರ ಅರ್ಜಿ ಸಲ್ಲಿಸಿ.
ಬೆಂಗಳೂರು: ಸರ್ಕಾರಿ (Govt) ನೌಕರಿ ಕನಸು ಕಾಣುತ್ತಿರುವ ನಿರುದ್ಯೋಗಿ ಯುವಕ-ಯುವತಿಗೆ ಭಾರತೀಯ ರೈಲ್ವೆ (Railway) ಇಲಾಖೆಯು ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 4,098 ಹುದ್ದೆಗಳನ್ನು (Jobs) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಪ್ರತಿಷ್ಠಿತ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಆಸಕ್ತರಿರುವ ಅಭ್ಯರ್ಥಿಗಳು (Candidates) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-09-2026
ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರಿ ಉದ್ಯೋಗ
ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆಯಲು ಬಯಸುವ ಆಸಕ್ತರು ನಿಗದಿತ ದಿನಾಂಕ ಅಂದರೆ 13ನೇ ಸೆಪ್ಟೆಂಬರ್ 2026ರೊಳಗೆ ತಮ್ಮ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬೇಕು. ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ. ಈ ಬೃಹತ್ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ವೇತನಶ್ರೇಣಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ಅಧಿಕೃತ ಲಿಂಕ್ಗಾಗಿ ಇಲಾಖೆಯ ವೆಬ್ಸೈಟ್ ಗಮನಿಸಬಹುದಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸು ಹೊತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
Bangalore [Bangalore],Bangalore,Karnataka














