Janhvi Kapoor: ಮೆಹಂದಿಯಲ್ಲಿ ಪ್ರಿಯಕರನ ಹೆಸರು ಬರೆಸಿದ ಜಾನ್ವಿ ಕಪೂರ್; ಫೋಟೋ ವೈರಲ್ | | ACTPnews

ಜಾನ್ವಿ ಕಪೂರ್


Last Updated:

ಇತ್ತೀಚೆಗೆ ಸಹೋದರಿ ಅಂಶುಲಾ ಕಪೂರ್ (Anshula Kapoor) ಅವರ ಮದುವೆ ರಿಸೆಪ್ಷನ್‌ನಲ್ಲಿ ಭಾಗವಹಿಸಿದ್ದ ಜಾನ್ವಿ, ತಮ್ಮ ಸಾಂಪ್ರದಾಯಿಕ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಅವರ ಕೈಯಲ್ಲಿದ್ದ ಮೆಹಂದಿಯಲ್ಲಿನ ಒಂದು ವಿಶೇಷ ಹೆಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜಾನ್ವಿ ಕಪೂರ್
ಜಾನ್ವಿ ಕಪೂರ್

ಬಾಲಿವುಡ್ ನಟಿ ಜಾನ್ವಿ ಕಪೂರ್ (Actress Janhvi Kapoor) ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಹೋದರಿ ಅಂಶುಲಾ ಕಪೂರ್ (Anshula Kapoor) ಅವರ ಮದುವೆ ರಿಸೆಪ್ಷನ್‌ನಲ್ಲಿ ಭಾಗವಹಿಸಿದ್ದ ಜಾನ್ವಿ, ತಮ್ಮ ಸಾಂಪ್ರದಾಯಿಕ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಅವರ ಕೈಯಲ್ಲಿದ್ದ ಮೆಹಂದಿಯಲ್ಲಿನ ಒಂದು ವಿಶೇಷ ಹೆಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು ಅಂಶುಲಾ ಕಪೂರ್ ಅವರ ಮದುವೆ ರಿಸೆಪ್ಷನ್‌ಗೆ ಜಾನ್ವಿ ಕಪೂರ್ ಖ್ಯಾತ ವಿನ್ಯಾಸಗಾರ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಆಕರ್ಷಕ ರೇಷ್ಮೆ ಸೀರೆಯಲ್ಲಿ ಆಗಮಿಸಿದ್ದರು. ಸಂಪ್ರದಾಯ ಮತ್ತು ಆಧುನಿಕ ಶೈಲಿಯ ಸಂಯೋಜನೆಯಲ್ಲಿದ್ದ ಅವರ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಜಾನ್ವಿ ಅವರ ಕೈಯಲ್ಲಿದ್ದ ಮೆಹಂದಿ ಡಿಸೈನ್ ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಹಿಂದಿ ಭಾಷೆಯಲ್ಲಿ ‘ಶಿಖು’ ಎಂದು ಬರೆಯಲಾಗಿತ್ತು. ‘ಶಿಖು’ ಎಂಬುದು ಶಿಖರ್ ಪಹಾರಿಯಾ ಅವರನ್ನು ಕರೆಯುವ ಪ್ರೀತಿಯ ಹೆಸರಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಈ ಮೂಲಕ ಜಾನ್ವಿ ತಮ್ಮ ಸಂಬಂಧವನ್ನು ಪರೋಕ್ಷವಾಗಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಬಹಳ ವರ್ಷಗಳಿಂದ ಪರಿಚಿತರಾಗಿದ್ದಾರೆ. ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರಾಗಿದ್ದು, ಹದಿಹರೆಯದ ವಯಸ್ಸಿನಿಂದಲೇ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು.

ಜಾನ್ವಿ 2018ರಲ್ಲಿ ಬಾಲಿವುಡ್‌ಗೆ ಪ್ರವೇಶಿಸಿದ ಬಳಿಕ ಇಬ್ಬರೂ ದೂರವಾಗಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಆದರೆ 2023ರಿಂದ ಇಬ್ಬರೂ ಮತ್ತೆ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ದೇವಸ್ಥಾನಗಳ ಭೇಟಿ, ಕುಟುಂಬದ ಸಮಾರಂಭಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವುದು ಅವರ ಸಂಬಂಧದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಯಿತು.

ಈಗ ಮೆಹಂದಿಯಲ್ಲೂ ಅದೇ ಹೆಸರು ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಇಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಶಿಖರ್ ಜೊತೆಗಿದ್ದರೆ ತಮಗೆ ಸುರಕ್ಷತೆಯ ಭಾವನೆ ಸಿಗುತ್ತದೆ. ಅವರ ಎದುರು ಯಾವುದೇ ಮುಜುಗರವಿಲ್ಲದೆ ಮಗುವಿನಂತೆ ಇರಬಹುದು ಎಂದು ಅವರು ಹೇಳಿದ್ದರು. ತಮ್ಮ ಜೀವನದ ಹಲವು ಕಷ್ಟದ ಸಂದರ್ಭಗಳಲ್ಲಿ ಶಿಖರ್ ಬೆಂಬಲವಾಗಿ ನಿಂತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂದೆ ಅವರ ಮೊಮ್ಮಗ. ಅವರು ಲಂಡನ್‌ನಲ್ಲಿ ಜಾಗತಿಕ ಹಣಕಾಸು ನಿರ್ವಹಣೆಯಲ್ಲಿ ಶಿಕ್ಷಣ ಪಡೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed