Jana Nayagan Movie: ಬೆಂಗಳೂರಿನಲ್ಲಿ ‘ಜನ ನಾಯಗನ್’ ಟಿಕೆಟ್ ಕಳ್ಳಾಟ! ಬೆಚ್ಚಿ ಬೀಳಿಸುವ ಮಾಹಿತಿ ಬಿಚ್ಚಿಟ್ಟ ಲೈನ್ ಇನ್ಸ್‌ಪೆಕ್ಟರ್ | | ACTPnews

Jana Nayagan Movie Bengaluru Anjan Theatre ticket golmaal Line Inspector C H Seetharam Report Reveal the Facts


50 ಥಿಯೇಟರ್ ಅಲ್ಲಿ ಒಂದು

ಲೈನ್ ಇನ್‌ಸ್ಪೆಕ್ಟರ್ ಸಿ.ಎಚ್‌.ಸೀತಾರಾಮ್ ನಿರ್ಮಾಪಕರ ಪರವಾಗಿಯೇ ಕೆಲಸ ಮಾಡ್ತಾರೆ. ನಿರ್ಮಾಪಕರೇ ಇವರನ್ನ ನೇಮಿಸಿರುತ್ತಾರೆ. ಜನ ನಾಯಗನ್ ಚಿತ್ರದ ವಿಚಾರದಲ್ಲಿ ಸಿ.ಎಚ್. ಸೀತಾರಾಮ್ ಲೈನ್ ಇನ್‌ಸ್ಪೆಕ್ಟರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ.
ಜನ ನಾಯಗನ್ ಟಿಕೆಟ್ ಗೋಲ್‌ಮಾಲ್‌

ಹೈದ್ರಾಬಾದ್‌ನ ಇವರು ಬೆಂಗಳೂರಿಗೂ ಬಂದಿದ್ದಾರೆ. ಬಂದು ಎಲ್ಲಿ ಜನ ನಾಯಗನ್ ಚಿತ್ರ ರಿಲೀಸ್ ಆಗಿದಿಯೋ ಅಲ್ಲಿ ಓಡಾಡಿದ್ದಾರೆ. ಟಿಕೆಟ್ ಸೇಲ್ ಹೇಗಿದೆ? ಎಷ್ಟು ಹೋಗಿದೆ.?

ಸಿ.ಎಚ್.ಸೀತಾರಾಮ್ ಕೊಟ್ಟ ರಿಪೋರ್ಟ್

ದಿನಾಂಕ: 28/7/2026

ಜನ ನಾಯಗನ್ (Jana Nayagan) ಮೂವಿ, ತಮಿಳು

ಗೌರವಾನ್ವಿತ ಕೆ.ವಿ.ಎನ್. ಮೂವೀಸ್ (K.V.N. Movies) ಅವರಿಗೆ, ವಿಷಯ: 84 ಟಿಕೆಟ್‌ಗಳ ಹೆಚ್ಚುವರಿ (Excess) ವಿವರ.

ನಾನು ಸಿ.ಹೆಚ್. ಸೀತಾರಾಮ್, ಲೈನ್ ಇನ್ಸ್‌ಪೆಕ್ಟರ್ (Line Inspector). ನಾನು ಪ್ರಸ್ತುತ ಮಾಗಡಿ ರಸ್ತೆಯಲ್ಲಿರುವ “ಅಂಜನ್ ಥಿಯೇಟರ್” (Anjan Theater) ನಲ್ಲಿ 10 ಗಂಟೆಯ ಮುಂಜಾನೆಯ ಶೋ (10 AM Show) ಪರಿಶೀಲಿಸುತ್ತಿದ್ದೇನೆ.

Jana Nayagan Movie Bengaluru Anjan Theatre ticket golmaal Line Inspector C H Seetharam Report Reveal the Facts

ಸಿ.ಎಚ್.ಸೀತಾರಾಮ್ ಹೇಳಿದ್ದೇನು

ಸರ್, ರೆಪ್ರೆಸೆಂಟೇಟಿವ್ (Rep) ಹೆಸರು: ಕೆ. ಗುರುರಾಜ್

ಸರ್, ಬ balcony (Balcony) ₹200 ಟಿಕೆಟ್ ವಿವರ: ಮಾರಾಟವಾದ ಟಿಕೆಟ್‌ಗಳು 30 (ಮೂವತ್ತು ಟಿಕೆಟ್‌ಗಳು). ಆದರೆ ರೆಪ್ರೆಸೆಂಟೇಟಿವ್ ಲೆಕ್ಕದಲ್ಲಿ ಕೇವಲ 2 (ಎರಡು) ಟಿಕೆಟ್‌ಗಳು ಮಾತ್ರ ಇವೆ. ವ್ಯತ್ಯಾಸವಿರುವ ಟಿಕೆಟ್‌ಗಳು 28. ಇದರ ಒಟ್ಟು ಮೊತ್ತ ₹5600.00.

ಡಿ.ಸಿ ಕ್ಲಾಸ್ (D.C Class) / ಸೆಕೆಂಡ್ ಕ್ಲಾಸ್ ₹150 ಟಿಕೆಟ್ ವಿವರ: ಮಾರಾಟವಾದ ಟಿಕೆಟ್‌ಗಳು 91 (ತೊಂಬತ್ತೊಂದು ಟಿಕೆಟ್‌ಗಳು). ಆದರೆ ರೆಪ್ರೆಸೆಂಟೇಟಿವ್ ಲೆಕ್ಕದಲ್ಲಿ ಕೇವಲ 35 ಟಿಕೆಟ್‌ಗಳು ಮಾತ್ರ ಇವೆ. ವ್ಯತ್ಯಾಸವಿರುವ ಟಿಕೆಟ್‌ಗಳು 56 (ಐವತ್ತಾರು ಟಿಕೆಟ್‌ಗಳು). ಇದರ ಒಟ್ಟು ಮೊತ್ತ ₹8400.00.

ಒಟ್ಟು ಲೆಕ್ಕಾಚಾರ:

ಒಟ್ಟು ಮಾರಾಟವಾದ ಟಿಕೆಟ್‌ಗಳು – 121

ರೆಪ್ರೆಸೆಂಟೇಟಿವ್ ಬರೆದಿರುವ ಟಿಕೆಟ್‌ಗಳು – 37

ವ್ಯತ್ಯಾಸವಿರುವ ಒಟ್ಟು ಟಿಕೆಟ್‌ಗಳು – 84

ವ್ಯತ್ಯಾಸದ ಒಟ್ಟು ಹಣದ ಮೊತ್ತ – ₹14,000.00

ರೆಪ್ರೆಸೆಂಟೇಟಿವ್ ಕಡೆಯಿಂದ ಆಫೀಸ್ ಕಲೆಕ್ಷನ್ ತೋರಿಸಿರುವುದು: ಒಟ್ಟು ಟಿಕೆಟ್ – 37.

ಥಿಯೇಟರ್ ಆಡಿಟೋರಿಯಂನಲ್ಲಿ ಒಟ್ಟು ಮಾರಾಟವಾಗಿರುವುದು: ಬ balcony – 30, ಸೆಕೆಂಡ್ ಕ್ಲಾಸ್ – 91. ಒಟ್ಟು – 121.

Jana Nayagan Movie Bengaluru Anjan Theatre ticket golmaal Line Inspector C H Seetharam Report Reveal the Facts

ಜನ ನಾಯಗನ್ ಸಿನಿಮಾ

ವ್ಯತ್ಯಾಸವಿರುವ ಒಟ್ಟು ಟಿಕೆಟ್‌ಗಳ ಸಂಖ್ಯೆ: 84

ಧನ್ಯವಾದಗಳೊಂದಿಗೆ ಸರ್,

ಇಂತಿ,ಸಿ.ಹೆಚ್. ಸೀತಾರಾಮ್ (ಲೈನ್ ಇನ್ಸ್‌ಪೆಕ್ಟರ್) ಕೆ. ಗುರುರಾಜ್ (ರೆಪ್ರೆಸೆಂಟೇಟಿವ್)

ಸಿ.ಎಚ್.ಸೀತಾರಾಮ್ ಹೇಳಿದ್ದೇನು

ಈ ಕುರಿತು ಸಿ.ಎಚ್.ಸೀತಾರಾಮ್ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಮಾತನಾಡಿದ್ದಾರೆ. ನಿರ್ಮಾಪಕರು ನನ್ನ ನೇಮಿಸಿದ್ದಾರೆ. ನನ್ನ ಕೆಲಸ ಏನಂದ್ರೆ, ಜನ ನಾಯಗನ್ ರಿಲೀಸ್ ಎಲ್ಲಿ ಆಗಿದೆಯೋ ಅಲ್ಲಿ ಹೋಗುವುದು. ಚೆಕ್ ಮಾಡುವದೇ ಆಗಿದೆ. ಎಷ್ಟು ಟಿಕೆಟ್ ಹೋಗಿದೆ. ಎಷ್ಟು ಟಿಕೆಟ್ ಸೇಲ್ ಆಗಿದೆ. ಇದನ್ನೆಲ್ಲ ಚೆಕ್ ಮಾಡೋದು. ಅದನ್ನ ನಿರ್ಮಾಪಕರಿಗೆ ಹೇಳುವುದೇ ಆಗಿದೆ.

50 ಥಿಯೇಟರ್ ಅಲ್ಲಿ ಒಂದು ಥಿಯೇಟರ್ ಅಲ್ಲಿ ಈ ರೀತಿ ಸಿಗುತ್ತದೆ. ಅದು ಬಿಟ್ಟರೆ ಇಂತಹ ಕೇಸ್‌ ಗಳು ಐದೋ ಆರು ತಿಂಗಳಿಗೆ ಸಿಗುತ್ತವೆ. ನನ್ನ ಕೆಲಸ ನಿರ್ಮಾಪಕರು ಮತ್ತು ವಿತರಕರಿಗೆ ಈ ವಿಚಾರ ತಿಳಿಸೋದೇ ಆಗಿದೆ ಅಂತಲೇ ಹೇಳಿದ್ದಾರೆ. ಆದರೆ, ಆರ್.ಪಿ.ಗುರುರಾಜ್ ಈ ವಿಚಾರವಾಗಿ ಇನ್ನು ಏನು ರಿಯಾಕ್ಟ್ ಮಾಡಿಲ್ಲ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed