Last Updated:
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಟ ಜಗ್ಗೇಶ್ ಅವರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಚಿತ್ರರಂಗದಲ್ಲಿ ಕೆಲವು ಸ್ನೇಹಗಳು ಕಾಲ ಕಳೆದಂತೆ ಇನ್ನಷ್ಟು ಗಟ್ಟಿಯಾಗುತ್ತವೆ. ಅದರಲ್ಲೂ ಹಿರಿಯ ನಟರ ನಡುವಿನ ಆತ್ಮೀಯತೆ ಅಭಿಮಾನಿಗಳಿಗೂ ವಿಶೇಷವಾಗಿರುತ್ತವೆ. ಕನ್ನಡ ಚಿತ್ರರಂಗದ ಹಿರಿಯ ನಟರಾದ ಜಗ್ಗೇಶ್ (Jaggesh) ಮತ್ತು ಶಿವರಾಜ್ ಕುಮಾರ್ (Shivarajkumar) ನಡುವಿನ ಸ್ನೇಹವೂ ಅಂತಹದ್ದೇ. ಇದೀಗ ಈ ಇಬ್ಬರು ನಟರ ಆತ್ಮೀಯತೆಗೆ ಮತ್ತೊಂದು ಸುಂದರ ಘಟನೆ ಸಾಕ್ಷಿಯಾಗಿದೆ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಟ ಜಗ್ಗೇಶ್ ಅವರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.














